Advertisement

ಪರಿವರ್ತನೆ-ಶುದ್ಧ ಕುಡಿಯುವ ನೀರು-ಸ್ವಚ್ಛ ಹಸುರು ಪುರಸಭೆ

12:37 PM Aug 24, 2018 | |

ಬಂಟ್ವಾಳ: ಪರಿವರ್ತನೆಗಾಗಿ ಬಿಜೆಪಿಗೆ ನಿಮ್ಮ ಮತ ಎನ್ನುವ ಘೋಷಣೆಯೊಂದಿಗೆ ಪುರಸಭೆಯಲ್ಲಿ ತ್ಯಾಜ್ಯ ನಿರ್ವ ಹಣೆಗೆ ನಾಗರಿಕ ಸಹಭಾಗಿತ್ವದ ಕಾರ್ಯಪಡೆ ರಚನೆ, ನೇತ್ರಾವತಿಗೆ ಪುರಸಭೆಯ ಮಲೀನ ನೀರು ಸೇರದಂತೆ ಸಮಗ್ರ ಒಳಚರಂಡಿ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನ, ಆಯ್ದ ಸ್ಥಳಗಳಲ್ಲಿ ನೀರು ಸಂಸ್ಕರಣ ಘಟಕ ಸ್ಥಾಪಿಸಿ ಅದನ್ನು ಸ್ಥಳೀಯ ಸಾರ್ವಜನಿಕ ಉದ್ಯಾನವನಗಳಿಗೆ ಪೂರೈಸುವುದು, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ, ಪ್ಲಾಸ್ಟಿಕ್‌ಮುಕ್ತ ಪುರಸಭೆ, ಕಡ್ಡಾಯ ಗ್ರಾಮಸಭೆ ಇತ್ಯಾದಿ ಪುರಸಭಾ ವ್ಯಾಪ್ತಿಯ ಪ್ರಣಾಳಿಕೆಯನ್ನು ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಉಪಸ್ಥಿತಿಯಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಅವರು ಆ. 23ರಂದು ಬಿ.ಸಿ. ರೋಡ್‌ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

Advertisement

ಹಸುರು ಪುರಸಭೆ, ಅನಧಿಕೃತ ಪ್ಲೆಕ್ಸ್‌, ಹೋರ್ಡಿಂಗ್‌ ಮುಕ್ತ ಪುರಸಭೆ, ವಾಹನ ಪಾರ್ಕಿಂಗ್‌ ವ್ಯವಸ್ಥೆ, ಪುರಸಭೆಯ ಆದಾಯ ಹೆಚ್ಚಿಸುವ ಯೋಜನೆಗೆ ಚಾಲನೆ, ಬಿ.ಸಿ. ರೋಡ್‌ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣ ಎದುರು ಸುರಕ್ಷಿತ ಸಂಚಾರ ಪೂರಕ ವೃತ್ತ ನಿರ್ಮಾಣ, ಪುರಸಭೆಯ ವಿವಿಧ ಭಾಗಗಳಲ್ಲಿ ಸಿ.ಸಿ. ಕೆಮರಾಗಳ ಅಳವಡಿಕೆ, ಕಾನೂನು ಸುವ್ಯವಸ್ಥೆ, ಸ್ವತ್ಛತೆ ಪಾಲನೆಗೆ ಕ್ರಮಗಳ ಬಗ್ಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಿದೆ.

ಜನತೆಯ ಧ್ವನಿ
ಬಿಜೆಪಿ ಕೇವಲ ಭರವಸೆ ನೀಡುವುದಲ್ಲ ಅನುಷ್ಠಾನ ಸಂಕಲ್ಪದೊಂದಿಗೆ ಕೆಲಸ ಮಾಡುವುದು. ಸಮರ್ಥ ಅಭ್ಯರ್ಥಿಗಳು ಕಣದಲ್ಲಿದ್ದು, ಅವನ್ನು ಗೆಲ್ಲಿಸುವ ಕೆಲಸ ಆಗಬೇಕು. ಜನತೆಯ ಧ್ವನಿಯಾಗಿ ಬಿಜೆಪಿ ತನ್ನ ಜವಾಬ್ದಾರಿ ನಿರ್ವಹಿಸುವುದು ಎಂದು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ, ಬಿಜೆಪಿ ಪುರಸಭಾ ಅಭ್ಯರ್ಥಿಗಳಾದ ಎ. ಗೋವಿಂದ ಪ್ರಭು, ದಿನೇಶ್‌ ಭಂಡಾರಿ, ಪುಷ್ಪರಾಜ ಶೆಟ್ಟಿ, ಮಹೇಶ್‌ ಶೆಟ್ಟಿ, ಪಕ್ಷ ಪ್ರಮುಖರಾದ ರಾಮ್‌ದಾಸ್‌ ಬಂಟ್ವಾಳ, ದಿನೇಶ್‌ ಅಮ್ಟೂರು, ಮೋನಪ್ಪ ದೇವಸ್ಯ, ಜಿನರಾಜ ಕೋಟ್ಯಾನ್‌, ಪುರುಷೋತ್ತಮ ಶೆಟ್ಟಿ, ರಂಜಿತ್‌ ಮೈರ, ಸೀತಾರಾಮ ಪೂಜಾರಿ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next