Advertisement

Bantwal ಇರಾ: ಮನೆಯಿಂದ ನಗ- ನಗದು ಕಳವು

12:48 AM Aug 28, 2023 | Team Udayavani |

ಬಂಟ್ವಾಳ: ಮನೆಯೊಂದರ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ ರೂಂನಲ್ಲಿದ್ದ ಕಪಾಟಿನಿಂದ ಚಿನ್ನದ ನೆಕ್ಲೆಸ್‌ ಹಾಗೂ ನಗದನ್ನು ಕಳವು ಮಾಡಿದ ಘಟನೆ ಶನಿವಾರ ಇರಾದಲ್ಲಿ ನಡೆದಿದ್ದು ರವಿವಾರ ಬೆಳಕಿಗೆ ಬಂದಿದೆ.

Advertisement

ಇರಾ ನಿವಾಸಿ ಅಬ್ದುಲ್‌ ಹಮೀದ್‌ ಅವರು ಆ. 26ರ ರಾತ್ರಿ 9.30ರ ಸುಮಾರಿಗೆ ಮನೆಗೆ ಬೀಗ ಹಾಕಿ ಅತ್ತೆ ಮನೆಗೆ ತೆರಳಿದ್ದರು. ರವಿವಾರ ಬೆಳಗ್ಗೆ ಹಮೀದ್‌ ಅವರು ಪುತ್ರನೊಂದಿಗೆ ಮನೆಗೆ ಆಗಮಿಸಿದಾಗ ಹಿಂಬಾಗಿಲು ತೆರೆದಿತ್ತು. ಕಳ್ಳರು ಬಾಗಿಲನ್ನು ಮುರಿದು ಒಳ ನುಗ್ಗಿದ್ದರು ಎನ್ನಲಾಗಿದೆ.

ಆ ಬಳಿಕ ಮನೆಯನ್ನು ಪರಿಶೀಲಿಸಿದಾಗ ಮಲಗುವ ಕೋಣೆಯ ಕಪಾಟಿನಲ್ಲಿಟ್ಟಿದ್ದ 1.12 ಲಕ್ಷ ರೂ. ಮೌಲ್ಯದ 4 ಪವನ್‌ ತೂಕದ ಚಿನ್ನದ ನೆಕ್ಲೇಸ್‌ ಹಾಗೂ 11 ಸಾವಿರ ರೂ. ನಗದನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next