Advertisement
ಉದಯವಾಣಿ ಸುದಿನದಲ್ಲಿ ಪ್ರಕಟವಾಗುತ್ತಿರುವ ‘ಹೆದ್ದಾರಿ ಕಾಮಗಾರಿ: ಯಾವಾಗ ಮುಗಿಸ್ತೀರಿ?’ ಸರಣಿ ವರದಿಗೆ ಪ್ರತಿಕ್ರಿಯಿಸಿರುವ ನಾಯಕರು, ಕಾಮಗಾರಿ ಪೂರ್ಣಕ್ಕೆ ಡೆಡ್‌ಲೈನ್ ವಿಧಿಸುವ ಬಗ್ಗೆಯೂ ಚರ್ಚೆ ನಡೆಸುವುದಾಗಿ ಹೇಳಿದರು.ಪ್ರತೀ ವಾರ ಸಭೆ: ಕ್ಯಾ| ಬ್ರಿಜೇಶ್ ಚೌಟ
ವಿಧಾನ ಪರಿಷತ್ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿಗೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸುವುದು ಸಾಧ್ಯವಾಗಿರಲಿಲ್ಲ. ಅದಕ್ಕೂ ಮುನ್ನ ಪ್ರತೀ ವಾರ ಮೀಟಿಂಗ್ ನಡೆಸಿ ಕಾಮಗಾರಿಯ ವೇಗದ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಈಗ ನೀತಿಸಂಹಿತೆ ಮುಗಿದಿದ್ದು, ಮತ್ತೆ ಅಧಿಕಾರಿಗಳಿಂದ ಕಾಮಗಾರಿಯ ಪ್ರಗತಿಯ ವಿವರ ಪಡೆಕೊಳ್ಳಲಿದ್ದೇನೆ ಎಂದು ಸಂಸದರು ಹೇಳಿದರು. ಈ ಬಾರಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ಜತೆಗೆ ದೀರ್ಘ ಸಮಯ ಮಳೆಯಾಗಿದೆ. ಹೀಗಾಗಿ ಕಾಮಗಾರಿಯ ವೇಗಕ್ಕೆ ತಡೆ ಬಿದ್ದು, ಒಂದಷ್ಟು ತೊಂದರೆಗಳಾಗಿವೆ. ಜನತೆಗೆ ಹೆಚ್ಚಿನ ಅಡಚಣೆ ಉಂಟಾಗಿರುವ ಕಲ್ಲಡ್ಕ, ಮೆಲ್ಕಾರ್, ಮಾಣಿ, ಉಪ್ಪಿನಂಗಡಿ ಭಾಗದಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ವಾಹನಗಳ ಸಾಗಾಟಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಲಾಗಿದೆ. ಒಂದಷ್ಟು ಕಡೆಗಳಲ್ಲಿ ಹೆದ್ದಾರಿ ಪಕ್ಕದಲ್ಲೇ ಕಟ್ಟಡಗಳು ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಯಂತ್ರೋಪಕರಣಗಳ ಮೂಲಕ ಕಾಮಗಾರಿ ನಡೆಸುವುದಕ್ಕೆ ಸಾಧ್ಯವಾಗದೆ ವಿಳಂಬವಾಗಿರಬಹುದು ಎಂದು ಸಂಸದರು ಹೇಳಿದರು.
Related Articles
Advertisement
ಮಾರ್ಚ್ ಅಂತ್ಯಕ್ಕೆ ಬಹುತೇಕ ಪೂರ್ಣಕಾಮಗಾರಿಯ ವೇಗವನ್ನು ಹೆಚ್ಚಿ ಸುವ ದೃಷ್ಟಿಯಿಂದ ಈಗಾಗಲೇ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆಯ ಪ್ರಮುಖರ ಜತೆಗೆ ಚರ್ಚೆ ನಡೆಸಲಾಗಿದ್ದು, 2025ರ ಮಾರ್ಚ್ ಅಂತ್ಯದೊಳಗೆ ಬಹುತೇಕ ಅಂದರೆ ಶೇ. 90ರಷ್ಟು ಕಾಮಗಾರಿಯನ್ನು ಮುಗಿಸಿಕೊಡುವ ಭರವಸೆ ನೀಡಿ ದ್ದಾರೆ. ಕೆಲವೊಂದು ಕಡೆ ಜಾಗದ ಸಮಸ್ಯೆಯಿಂದ 5-10 ಶೇ. ಕಾಮಗಾರಿಗೆ ವಿಳಂಬವಾದರೂ, ಅದನ್ನೂ ಮುಗಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಮುಂದೆ ಕಾಮಗಾರಿಯು ವೇಗ ಪಡೆಯಲಿದ್ದು, ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ.
-ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು, ಬಂಟ್ವಾಳ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ
ಉದಯವಾಣಿ ಸುದಿನ ಅಭಿಯಾನದ ಹಿನ್ನೆಲೆಯಲ್ಲಿ ಹೆದ್ದಾರಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ನೆಕ್ಕಿಲಾಡಿ ಬಳಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದು, ಡಿಸೆಂಬರ್ ಒಳಗಾಗಿ ಬಹುತೇಕ ಸಮಸ್ಯೆ ನಿವಾರಿಸುವ ಭರವಸೆ ನೀಡಿದ್ದಾರೆ. ಒಂದು ಕಡೆ ಕಾಮಗಾರಿಗೆ ವೇಗ ನೀಡಬೇಕು, ಇನ್ನೊಂದು ಕಡೆ ಕಾಮಗಾರಿಯಿಂದ ಈಗ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕು. ಎರಡೂ ಕೆಲಸಗಳನ್ನು ಸರಿದೂಗಿಸಿ ಕೊಂಡು ಹೋಗಲು ತಿಳಿಸಲಾಗಿದೆ. ಚರಂಡಿ ಸಮಸ್ಯೆ, ಧೂಳು ಸಮಸ್ಯೆ ತತ್‌ಕ್ಷಣ ನಿವಾರಿಸುವಂತೆ ಸೂಚಿಸಿದ್ದೇನೆ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು ಪೆರಿಯಶಾಂತಿಗೆ ಭೇಟಿ ಇಂದು
ಉದಯವಾಣಿ ಸುದಿನದಲ್ಲಿ ಪ್ರಕಟವಾಗು ತ್ತಿರುವ ಸರಣಿ ವರದಿಗಳನ್ನು ಗಮನಿಸಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿ ಕರ ಅಹವಾಲನ್ನು ಪಡೆದು ಈಗಾ ಗಲೇ ಸಂಸದರು, ಕೇಂದ್ರ ಸಚಿವರ ಜತೆ ಮಾತನಾಡಿದ್ದೇನೆ. ನಿಧಾನ ಕಾಮಗಾರಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ ವೇಗ ನೀಡಲಾಗುವುದು. ಮಂಗಳವಾರ ಪೆರಿಯಶಾಂತಿಗೆ ಭೇಟಿ ನೀಡಿ ಹೆದ್ದಾರಿ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆಯುವೆ. ಕಾಮಗಾರಿ ಗಡುವಿನೊಳಗೆ ಮುಗಿದು ಸಂಚಾರ ಸುಗಮಗೊಳಿಸಲು ಪ್ರಯತ್ನಿಸಲಾಗುವುದು.
-ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ