Advertisement
ಮಂಗಳೂರಿನಿಂದ ಬರುವ ಸರಕಾರಿ ಬಸ್‌ಗಳು, ಖಾಸಗಿ ಸರ್ವಿಸ್ ಬಸ್‌ಗಳು (ಕಾಂಟ್ರ್ಯಾಕ್ಟ್ ಕ್ಯಾರೇಜ್) ಬಿ.ಸಿ. ರೋಡ್ ನಿಲ್ದಾಣದ ಒಳಗೆ ಇಳಿಯುವುದಿಲ್ಲ. ಹೆದ್ದಾರಿಯಲ್ಲೇ ನಿಲ್ಲಿ ಸುವುದರಿಂದ ಪ್ರಯಾಣಿಕರು ಅಲ್ಲೇ ಬಸ್ ನಿರೀಕ್ಷೆಯಲ್ಲಿ ಕಾಯುತ್ತಾರೆ. ಸರ್ವಿಸ್ ಬಸ್ ನಿಲ್ದಾಣ ಹೆದ್ದಾರಿಯ ಮಂಗಳೂರು ಕಡೆಯಿಂದ ಬರುವ ರಸ್ತೆಯಲ್ಲಿದ್ದು, ಲೋಕಲ್ ಬಸ್‌ಗಳ ನಿಲುಗಡೆಗೆ ಸೀಮಿತ ಎಂಬಂತಾಗಿದೆ.
Related Articles
ಬಿ.ಸಿ. ರೋಡ್‌ನ ಹೃದಯ ಭಾಗದಲ್ಲಿ 12 ವರ್ಷಗಳ ಹಿಂದೆ ಇದ್ದ ಬಸ್ ನಿಲ್ದಾಣವನ್ನು ಕೆಡವಿ ಅದೇ ಜಾಗದಲ್ಲಿ ನಿರ್ಮಾಣವಾದ ವಾಣಿಜ್ಯ ಸಂಕೀರ್ಣ ಖಾಸಗಿ ಬಸ್ ನಿಲ್ದಾಣವಾಗಿ ಮಾರ್ಪಟ್ಟಿತ್ತು. ವಾಣಿಜ್ಯ ಸಂಕೀರ್ಣ ನಿರ್ಮಾಣವಾದ ಬಳಿಕ ಅಲ್ಲೊಂದು ಅಂಗಡಿ ಕೋಣೆಯನ್ನು ಪ್ರಯಾಣಿಕರಿಗೆ ಬಸ್ ಕಾಯಲು ವಿಶ್ರಾಂತಿ ಕೊಠಡಿಯಾಗಿ ನೀಡಿದ್ದರೂ ಅಭದ್ರತೆ ಕಾರಣ ಅದರ ಬಳಕೆ ಇಲ್ಲದಂತಾಗಿದೆ. ಪ್ರಯಾಣಿಕರು ಮಳೆ-ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಹಲವು ವರ್ಷಗಳಿಂದ ಮುಂದುವರಿದಿದೆ. ಈ ಬಗ್ಗೆ ಸಾರ್ವಜನಿಕ ಸಂಘಟನೆಗಳು ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
ಪ್ರಯಾಣಿಕರ ಶೆಲ್ಟರ್ ನಿರ್ಮಿಸಿನಗರ ಕೇಂದ್ರದಲ್ಲಿ ವಿವಿಧ ಇಲಾಖೆಗಳು ಕಾರ್ಯಾಚರಿಸುತ್ತಿವೆ. ನಿತ್ಯವೂ ಸಾವಿರಾರು ಜನ ಬಿ.ಸಿ. ರೋಡ್‌ನಲ್ಲಿ ಇಳಿದು ಹತ್ತಾರು ಕೆಲಸಗಳಿಗೆ ಹೋಗುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು, ಉದ್ಯೋಗಿಗಳು ಮಂಗಳೂರಿಗೆ ಹೋಗುತ್ತಾರೆ – ಬರುತ್ತಾರೆ. ಹಾಗಾಗಿ ಇಲ್ಲೊಂದು ಪ್ರಯಾಣಿಕರ ಶೆಲ್ಟರ್ ನಿರ್ಮಿಸಿದರೆ ಅನುಕೂಲವಾಗುವುದು. ನಗರ ಕೇಂದ್ರದಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಇಲ್ಲೊಂದು ಪ್ರಯಾಣಿಕರ ತಂಗುದಾಣವನ್ನು ಜನಪ್ರತಿನಿಧಿಗಳು ಕಾರ್ಯಗತ ಮಾಡಬೇಕಾಗಿದೆ ಎಂಬು ವುದು ಜನತೆಯ ಆಶಯ. ಉಪಯೋಗಕ್ಕಿಲ್ಲದ ಬಸ್ ಬೇ
ಬಿ.ಸಿ. ರೋಡ್ ಶ್ರೀನಿವಾಸ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಎದುರು, ಪದ್ಮಾ ಕಾಂಪ್ಲೆಕ್ಸ್ ಹತ್ತಿರ ಮತ್ತು ಶಾಂತಿ ಅಂಗಡಿಯಲ್ಲಿ ತರಾತುರಿಯಲ್ಲಿ ಬಸ್ ಬೇ ನಿರ್ಮಾಣ ಮಾಡಲಾಗಿತ್ತು. ಈಗ ಅವು ನಿರರ್ಥಕವೆನಿಸಿವೆ. ಅವು ಪ್ರಯಾಣಿಕರ ಉಪಯೋಗಕ್ಕೆ ಬರುತ್ತಿಲ್ಲ. ರೂಪುರೇಷೆ
ಬಿ.ಸಿ. ರೋಡ್ ನಗರ ಕೇಂದ್ರವನ್ನು ಸುಂದರಗೊಳಿಸುವ ಯೋಜನೆ ಸಿದ್ಧವಾಗುತ್ತಿದೆ. ಪ್ರಯಾಣಿಕರ ತಂಗುದಾಣಕ್ಕೆ ಅನುಕೂಲ ಕಲ್ಪಿಸಲು ಯೋಜನೆಯಲ್ಲಿ ಕ್ರಮ ಕೈಗೊಂಡಿದೆ. ಇದಕ್ಕೆ ಬೇಕಾದ ಅನುದಾನ ಹೊಂದಿಸಿ ಅನುಷ್ಠಾನಕ್ಕೆ ತರಲಾಗುತ್ತದೆ. ರೂಪುರೇಷೆ ಸಿದ್ಧಗೊಳ್ಳುತ್ತಿದೆ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು •ರಾಜಾ ಬಂಟ್ವಾಳ