ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಜ್ಞಾನ ಮಂದಿರ ಸಮಿತಿಯ 8ನೇ ಕಾರ್ಯಾಧ್ಯಕ್ಷರಾಗಿ ಹೊಟೇಲ್ ಉದ್ಯಮಿ, ಸಮಾಜ ಸೇವಕ ಕೃಷ್ಣ ವಿ. ಶೆಟ್ಟಿ ಅವರು ನೇಮಕಗೊಂಡಿದ್ದಾರೆ.
ಸಂಚಾಲಕರಾಗಿ ಜ್ಞಾನ ಮಂದಿರದ ನಿಕಟಪೂರ್ವ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಉಪ ಕಾರ್ಯಾಧ್ಯಕ್ಷರಾಗಿ ಹೊಟೇಲ್ ಉದ್ಯಮಿ ದಿವಾಕರ ಬಿ. ಶೆಟ್ಟಿ ಕುರ್ಲಾ, ಕಾರ್ಯದರ್ಶಿಯಾಗಿ ಸುರೇಶ್ ಎಲ್. ಶೆಟ್ಟಿ ಪನ್ವೆಲ್, ಕೋಶಾಧಿಕಾರಿಯಾಗಿ ಬಿ. ಬಾಲಕೃಷ್ಣ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಸಮಿತಿಯ ಸಲಹೆಗಾರರಾಗಿ ಜ್ಞಾನ ಮಂದಿರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಎಂ. ರೈ ಮತ್ತು ಜಗನ್ನಾಥ ಎನ್. ರೈ ಅವರು ಆಯ್ಕೆಯಾಗಿದ್ದಾರೆ.
ಸಮಿತಿಯ ಸದಸ್ಯರಾಗಿ ಅಶೋಕ್ ಪಕ್ಕಳ, ಲತಾ ಪಿ. ಶೆಟ್ಟಿ, ಲತಾ ಜೆ. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ, ಅರುಣ ಪ್ರಭಾ ಬಿ. ಶೆಟ್ಟಿ, ಕೆ. ಕೆ. ಶೆಟ್ಟಿ, ಪಿ. ಧನಂಜಯ ಶೆಟ್ಟಿ, ನವೀನ್ ಶೆಟ್ಟಿ ಇನ್ನಬಾಳಿಕೆ, ಭಾಸ್ಕರ್ ಡಿ. ಶೆಟ್ಟಿ, ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ, ಮನೋರಮಾ ಎನ್. ಶೆಟ್ಟಿ, ಪ್ರಮೀಳಾ ಎಸ್. ಶೆಟ್ಟಿ ಅವರನ್ನು ನೇಮಿಸಲಾಗಿದೆ.
ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಅವರು ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಪ್ರಗತಿಗಾಗಿ ಅಹರ್ನಿಶಿಯಾಗಿ ಸೇವೆ ಸಲ್ಲಿಸಿದ್ದು, ಮೂರು ವರ್ಷ ಸಮಿತಿಯ ಕೋಶಾಧಿಕಾರಿಯಾಗಿ, ಬಳಿಕ ಕಾರ್ಯಾಧ್ಯಕ್ಷರಾಗಿ, ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂಘದ ಕೆಟರಿಂಗ್ ಮತ್ತು ಡೆಕೊರೇಷನ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮೂರು ವರ್ಷ ದುಡಿದಿರುವ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಸಂಘದ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳು 2021-23ರ ಅವಧಿಗೆ ಶ್ರೀ ಮಹಾವಿಷ್ಣು ದೇವಸ್ಥಾನ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಮಾ. 9ರಿಂದ ಮಾ. 11ರ ವರೆಗೆ ನಡೆದ ಶ್ರೀ ಮಹಾವಿಷ್ಣು ಮಂದಿರದ ಜಾತ್ರಾ ಮಹೋತ್ಸವ ಅದ್ದೂರಿ ಆಚರಣೆಯಲ್ಲಿ ಅವರ ಪಾತ್ರ ಹಿರಿದಾಗಿದ್ದು, ಜ್ಞಾನ ಮಂದಿರದ ನಿಕಟಪೂರ್ವ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಮೊದಲ್ಗೊಂಡು ಮಂದಿರದ ಮಾಜಿ ಕಾರ್ಯಾಧ್ಯಕ್ಷರಾದ ಡಾ| ಪಿ. ವಿ. ಶೆಟ್ಟಿ, ಜಯ ಎ. ಶೆಟ್ಟಿ ಮೇರ್ಕಳ ತ್ಯಾಂಪಣ್ಣ ಶೆಟ್ಟಿ, ಶಿವರಾಮ ಜಿ. ಶೆಟ್ಟಿ, ಜಗನ್ನಾಥ ಎನ್. ರೈ, ಚಂದ್ರಹಾಸ ಎಂ. ರೈ ಅವರ ಸಂಪೂರ್ಣ ಪ್ರೋತ್ಸಾಹದೊಂದಿಗೆ ಅವರು ಈ ಪದವಿಯನ್ನು ಸ್ವೀಕರಿಸಿದರು.
ಮಾ. 10ರಂದು ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಜರಗಿದ ಪದವಿ ಹಸ್ತಾಂತರ ಕಾರ್ಯಕ್ರಮದಲ್ಲಿ ನಿಕಟಪೂರ್ವ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಂ. ಭಂಡಾರಿ ಅವರಿಂದ ಪದವಿ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಸಮನ್ವಯಕರು, ಪ್ರಾದೇಶಿಕ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಈ ಸಂದರ್ಭ ಭಾಗವಹಿಸಿದ್ದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.
-ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.