Advertisement

ರೈತರಿಂದ ಬಲವಂತದ ಸಾಲ ವಸೂಲಿ ಸಲ್ಲದು: ಸುಪ್ರೀಂ ಕೋರ್ಟ್‌

11:40 AM Jul 08, 2017 | Team Udayavani |

ಹೊಸದಿಲ್ಲಿ : ಬೆಳೆ ವೈಫ‌ಲ್ಯ ಉಂಟಾದ ಸಂದರ್ಭಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ರೈತರ ಸಾಲಗಳನ್ನು ಬಲವಂತದಿಂದ ವಸೂಲಿ ಮಾಡಬಾರದು; ಅಂತಹ ಸನ್ನಿವೇಶಗಳಲ್ಲಿ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

Advertisement

ಸರಕಾರ ರೈತರಿಗೆ ಪರಿಹಾರ ಕೊಡುವುದಕ್ಕಿಂತಲೂ ಮಿಗಿಲಾಗಿ ಅವರ ಕೃಷಿ ಸಂಕಷ್ಟಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯವೆಸಗಬೇಕು. ಈ ದಿಶೆಯಲ್ಲಿ ಸರಕಾರ ರೈತರಿಗೆ ನೆರವಾಗಲು ಕೊನೇ ಹಂತದ ವರೆಗೂ ಸಾಗಬೇಕು ಎಂದು ಜಸ್ಟಿಸ್‌ ದೀಪಕ್‌ ಮಿಶ್ರಾ ಮತ್ತು ಜಸ್ಟಿಸ್‌ ಎ ಎಂ ಖಾನ್ವಿಲ್ಕರ್‌ ಅವರನ್ನು ಒಳಗೊಂಡ ಪೀಠವು ಹೇಳಿದೆ. 

ತಮಿಳು ನಾಡಿನ ರೈತರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯ ವಿಚರಾಣೆ ವೇಳೆ ಸುಪ್ರೀಂ ಕೋರ್ಟ್‌ ಈ ರೀತಿಯಾಗಿ ಹೇಳಿದೆ.  

Advertisement

Udayavani is now on Telegram. Click here to join our channel and stay updated with the latest news.

Next