Advertisement
ಕುಂದಾಪುರದ ಗಿರಿಜಾ ಅವರು ಎರಡು ವರ್ಷಗಳ ಹಿಂದೆ ಇಲ್ಲಿನ ಬ್ಯಾಂಕ್ ಒಂದರಲ್ಲಿ ಜನ್‌ಧನ್ ಉಳಿತಾಯ ಖಾತೆಯನ್ನು ತೆರೆದಿದ್ದರು. ಗ್ಯಾಸ್ ಸಬ್ಸಿಡಿಗೋಸ್ಕರ ಆಧಾರ್ ಲಿಂಕ್ಸ ಮಾಡಿದ್ದಲ್ಲದೇ ಉಳಿತಾಯ ಹಣವನ್ನು ಖಾತೆಯಲ್ಲಿ ಇರಿಸಿದ್ದರು. ಆದರೆ ಅವರು ಬ್ಯಾಂಕಿಗೆ ಹಲವು ಸಮಯದಿಂದ ಬಂದಿರಲಿಲ್ಲ. ಮಂಗಳವಾರ ತುರ್ತು ಹಣದ ಆವಶ್ಯಕತೆ ಇರುವುದರಿಂದ ಅವರು ಏಳು ಸಾವಿರ ನಗದೀಕರಣಕ್ಕೆ ಹೋದಾಗ ಅದೇ ವೇಳೆ ಅದೇ ಖಾತೆಯಲ್ಲಿ ವ್ಯವಹಾರ ನಡೆಸುತ್ತಿರುವ ಮಹಿಳೆ ಬ್ಯಾಂಕಿಗೆ ಬಂದಾಗ ನಗದೀಕರಣಕ್ಕೆ ಆಕ್ಷೇಪ ವ್ಯಕ್ತವಾಯಿತು. ಆವಾಗಲೇ ಈ ವಿಷಯ ಬಹಿರಂಗಗೊಂಡಿದೆ. ಗಿರಿಜಾ ಎನ್ನುವ ಇನ್ನೋರ್ವ ಮಹಿಳೆಗೂ ಬ್ಯಾಂಕ್ ನೀಡಿದ ಉಳಿತಾಯ ಖಾತೆಯ ನಂಬ್ರ ಹಾಗೂ ಈ ಮೊದಲು ಗಿರಿಜಾ ಅವರು ತೆರೆದಿರುವ ಖಾತೆಯ ನಂಬ್ರ ಒಂದೇ ಅಗಿರುವುದು ಈ ಅಚಾತುರ್ಯಕ್ಕೆ ಕಾರಣವಾಯಿತು. ಬ್ಯಾಂಕಿನ ಆಚಾತುರ್ಯದಿಂದ ಇಬ್ಬರಿಗೂ ಅದೇ ಖಾತೆಯಲ್ಲಿ ಎಟಿಎಂ ಕಾರ್ಡು ನೀಡಿದೆ.
Advertisement
ಬ್ಯಾಂಕ್ ಸಿಬಂದಿಯ ಅಚಾತುರ್ಯ; ಒಂದೇ ಖಾತೆಯಲ್ಲಿ ಇಬ್ಬರ ವ್ಯವಹಾರ!
11:53 AM Feb 23, 2017 | |
Advertisement
Udayavani is now on Telegram. Click here to join our channel and stay updated with the latest news.