Advertisement

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಒಂಬತ್ತು ದಿನ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

12:05 PM Aug 06, 2020 | Hari Prasad |

ಮುಂಬಯಿ: ಕೋವಿಡ್ 19 ಸಂಕಷ್ಟ ಕಾಲದಲ್ಲೂ ನಮ್ಮ ದೇಶದಲ್ಲಿರುವ ಬ್ಯಾಂಕ್ ಗಳು ಸಕಲ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾ ತಮ್ಮ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿವೆ.ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲೂ ದೇಶದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಪೂರ್ಣ ಸ್ಥಗಿತಗೊಂಡಿರಲಿಲ್ಲ.

Advertisement

ಬಾರಿ ಆಗಸ್ಟ್ ತಿಂಗಳಿನಲ್ಲಿ ಬಹುತೇಕ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳು ಬಂದಿರುವುದರಿಂದ ತಿಂಗಳಿನಲ್ಲಿ ಯಾವೆಲ್ಲಾ ದಿನ ಬ್ಯಾಂಕ್ ಗಳು ಕಾರ್ಯಾಚರಿಸುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಆಗಸ್ಟ್ ತಿಂಗಳಿನಲ್ಲಿ 09ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತವೆ (ರವಿವಾರ ಮತ್ತು ಎರಡನೇ ಶನಿವಾರವೂ ಸೇರಿದಂತೆ) . ಈ ತಿಂಗಳು ಒಂಬತ್ತು ದಿನ ಬ್ಯಾಂಕ್ ವ್ಯವಹಾರಗಳಿರುವುದಿಲ್ಲ.

ಕುರಿತಾದ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ್ದು ಇವುಗಳ ವಿವರ ಕೆಳಗಿನಂತಿದೆ.

ಆಗಸ್ಟ್ 01 – ಬಕ್ರಿದ್ (ಈದ್ಉಲ್ಫಿತ್ರ್)

Advertisement

ಆಗಸ್ಟ್ 02 – ರವಿವಾರ

ಆಗಸ್ಟ್ 08 – ಎರಡನೇ ಶನಿವಾರ

ಆಗಸ್ಟ್ 09 – ರವಿವಾರ

ಆಗಸ್ಟ್ 15 – ಸ್ವಾತಂತ್ರ್ಯ ದಿನ

ಆಗಸ್ಟ್ 16 – ರವಿವಾರ

ಆಗಸ್ಟ್ 22 – ಗಣೇಶ ಚತುರ್ಥಿ/ಸಂವತ್ಸರಿ ವಿನಾಯಕ ಚತುರ್ಥಿ

ಆಗಸ್ಟ್ 23-ರವಿವಾರ

ಆಗಸ್ಟ್ 30-ರವಿವಾರ

Advertisement

Udayavani is now on Telegram. Click here to join our channel and stay updated with the latest news.

Next