Advertisement

ಮೊಮಿನುಲ್‌ 175; ಬಾಂಗ್ಲಾ ಭಾರೀ ಮೊತ್ತ

06:25 AM Feb 01, 2018 | |

ಚಿತ್ತಗಾಂಗ್‌: ಶ್ರೀಲಂಕಾ ವಿರುದ್ಧ ಚಿತ್ತಗಾಂಗ್‌ನಲ್ಲಿ ಬುಧವಾರ ಮೊದಲ್ಗೊಂಡ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಭಾರೀ ಮೊತ್ತದತ್ತ ಮುನ್ನುಗ್ಗಿದೆ. ವನ್‌ಡೌನ್‌ ಬ್ಯಾಟ್ಸ್‌ಮನ್‌ ಮೊಮಿನುಲ್‌ ಹಕ್‌ ಅವರ ಪ್ರಚಂಡ ಬ್ಯಾಟಿಂಗ್‌ ಸಾಹಸದಿಂದ 4 ವಿಕೆಟ್‌ ನಷ್ಟಕ್ಕೆ 374 ರನ್‌ ರಾಶಿ ಹಾಕಿದೆ.

Advertisement

ಎಡಗೈ ಬ್ಯಾಟ್ಸ್‌ಮನ್‌ ಮೊಮಿನುಲ್‌ ಹಕ್‌ 175 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು ಅವರ 5ನೇ ಶತಕವಾಗಿದ್ದು, ಜೀವನಶ್ರೇಷ್ಠ ಗಳಿಕೆಗಿಂತ ಕೇವಲ 6 ರನ್‌ ಹಿಂದಿದ್ದಾರೆ. ಈ 175 ರನ್‌ ಕೇವಲ 203 ಎಸೆತಗಳಿಂದ ದಾಖಲಾಗಿದೆ. ಬೀಸಿದ್ದು 16 ಬೌಂಡರಿ ಹಾಗೂ ಒಂದು ಸಿಕ್ಸರ್‌. ಮಾಜಿ ನಾಯಕ ಮುಶ್ಫಿಕರ್‌ ರಹೀಂ ಕೇವಲ 8 ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು (92). ಒಟ್ಟು 192 ಎಸೆತ ನಿಭಾಯಿಸಿದ ರಹೀಂ 10 ಬೌಂಡರಿ ಹೊಡೆದರು. ಮೊಮಿನುಲ್‌-ರಹೀಂ ಜೋಡಿಯಿಂದ 3ನೇ ವಿಕೆಟಿಗೆ 236 ರನ್‌ ಒಟ್ಟುಗೂಡಿತು.

ಬಾಂಗ್ಲಾ ಆರಂಭ ಕೂಡ ಉತ್ತಮ ಮಟ್ಟದಲ್ಲಿತ್ತು. ತಮಿಮ್‌ ಇಕ್ಬಾಲ್‌ (52) ಮತ್ತು ಇಮ್ರುಲ್‌ ಕಯೆಸ್‌ (40) 72 ರನ್‌ ಜತೆಯಾಟ ನಿಭಾಯಿಸಿದರು. ಲಿಟನ್‌ ದಾಸ್‌ ಮಾತ್ರ ಖಾತೆ ತೆರಯದೆ ನಿರ್ಗಮಿಸಿದರು. ರಹೀಂ ಮತ್ತು ದಾಸ್‌ ಅವರನ್ನು ಸುರಂಗ ಲಕ್ಮಲ್‌ ಸತತ ಎಸೆತಗಳಲ್ಲಿ ಕೆಡವಿದರು. ಆಗ ದಿನದಾಟದ ಮುಕ್ತಾಯಕ್ಕೆ ಕೇವಲ 6 ಓವರ್‌ ಬಾಕಿ ಇತ್ತು. ಮೊಮಿನುಲ್‌ ಹಕ್‌ ಜತೆಗೆ 9 ರನ್‌ ಮಾಡಿರುವ ನಾಯಕ ಮಹಮದುಲ್ಲ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next