Advertisement

Bangladesh; ನಿಲ್ಲದ ದೌರ್ಜನ್ಯ: ಮತ್ತೊಬ್ಬ ಅರ್ಚಕನ ಬಂಧನ

12:35 AM Dec 01, 2024 | Team Udayavani |

ಢಾಕಾ: ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಡೆಸು ತ್ತಿರುವ ದಾಳಿಗಳು ಮುಂದುವರಿದಿದ್ದು, ಇಸ್ಕಾನ್‌ ಅರ್ಚಕ ಚಿನ್ಮಯ್‌ ಕೃಷ್ಣ ದಾಸ್‌ ಬಂಧನದ ಬೆನ್ನಲ್ಲೇ ಶನಿವಾರ ಮತ್ತೋರ್ವ ಅರ್ಚಕರಾದ ಶ್ಯಾಮ್‌ ದಾಸ್‌ ಪ್ರಭು ಎಂಬವರನ್ನು ಬಂಧಿಸ ಲಾಗಿದೆ. ಅಲ್ಲದೆ ಬಾಂಗ್ಲಾದ ಭೈರವ್‌ನಲ್ಲಿರುವ ಇಸ್ಕಾನ್‌ ಕೇಂದ್ರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಚಿನ್ಮಯ್‌ದಾಸ್‌ ಬಂಧನವನ್ನು ಖಂಡಿಸಿ ವಿಶ್ವಾ ದ್ಯಂತ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

ಇಸ್ಕಾನ್‌ನ ಕೋಲ್ಕತ ವಕ್ತಾರ ರಾಧಾರಮಣ್‌ ದಾಸ್‌ ಈ ಬಗ್ಗೆ ಟ್ವೀಟ್‌ ಮಾಡಿ, “ಚಿನ್ಮಯ್‌ ದಾಸರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಶ್ಯಾಮ್‌ ದಾಸ್‌ ಅವರನ್ನು ಬಂಧಿಸಿದ್ದಾರೆ.

ಅವರೇನು ಪೊಲೀಸರ ಕಣ್ಣಿಗೆ ಭಯೋತ್ಪಾದಕರಂತೆ ಕಾಣುತ್ತಿದ್ದರೇ? ಬಂಧನದ ಬಗ್ಗೆ ಯಾವುದೇ ನೋಟಿಸ್‌ ಕೂಡ ನೀಡದೆ ವಿನಾಕರಣ ಇಸ್ಕಾನ್‌ ಅರ್ಚಕರನ್ನು ಬಂಧಿಸುತ್ತಿರುವ ಈ ಪ್ರವೃತ್ತಿ ಆಘಾತಕಾರಿಯಾಗಿದೆ’ ಎಂದಿದ್ದಾರೆ. ಜತೆಗೆ ಭೈರವ್‌ ಪ್ರದೇಶದಲ್ಲಿರುವ ಇಸ್ಕಾನ್‌ ದೇಗುಲವನ್ನೂ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದೂ ರಾಧಾರಮಣ್‌ ಆರೋಪಿಸಿದ್ದು, ಆ ಸಂಬಂಧಿಸಿದ ವೀಡಿಯೋವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವ್ಯವಸ್ಥಿತ ದಾಳಿಯಲ್ಲ, ನಿರ್ದಿಷ್ಟ ಕಾರಣದೊಂದಿಗೆ ಸೆರೆ: ಬಾಂಗ್ಲಾ
ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣದಾಸ್‌ ಬಂಧನದ ವಿಚಾರ ವಿವಾದಕ್ಕೀಡಾಗಿರುವಂತೆಯೇ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳನ್ನು ಗುರಿಯಾಗಿಸಿ ಯಾವುದೇ ವ್ಯವಸ್ಥಿತ ದಾಳಿ ನಡೆಸಲಾಗಿಲ್ಲ. ನಿರ್ದಿಷ್ಟ ಆರೋಪದ ಆಧಾರದಲ್ಲಿಯೇ ಹಿಂದೂ ನಾಯಕರನ್ನು ಬಂಧಿಸಲಾಗಿದೆ. ನಮ್ಮ ದೇಶದ ಕಾನೂನಿನ ಅನ್ವಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ಸರಕಾರವು ವಿಶ್ವಸಂಸ್ಥೆಗೆ ತಿಳಿಸಿದೆ. ಜಿನಿವಾದಲ್ಲಿ ನಡೆದ ಅಲ್ಪಸಂಖ್ಯಾಕರ ಸಮಸ್ಯೆಗಳ ಶೃಂಗಸಭೆಯ 17ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಗೆ ಬಾಂಗ್ಲಾದ ಖಾಯಂ ಪ್ರತಿನಿಧಿ ಆಗಿರುವ ತಾರೀಖ್‌ ಮೊಹಮ್ಮದ್‌ ಆರಿಫುಲ್‌ ಇಸ್ಲಾಮ್‌ ಈ ಹೇಳಿಕೆ ನೀಡಿದ್ದಾರೆ.

ದಾಸ್‌ ಬಿಡುಗಡೆಗೆ ಆರೆಸ್ಸೆಸ್‌ ಆಗ್ರಹ
ಹಿಂದೂ ನಾಯಕ ಚಿನ್ಮಯ್‌ ಕೃಷ್ಣ ದಾಸ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಆರೆಸ್ಸೆಸ್‌ನ ಪ್ರಧಾನ ಕಾರ್ಯ ದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next