Advertisement

BANvsAFG: ಅಫ್ಘಾನಿಸ್ತಾನದ ವಿರುದ್ಧ ಬಾಂಗ್ಲಾಗೆ ಭರ್ಜರಿ ಟೆಸ್ಟ್ ವಿಕ್ಟರಿ

03:13 PM Jun 17, 2023 | Team Udayavani |

ಢಾಕಾ: ಅಫ್ಘಾನಿಸ್ತಾನ ವಿರುದ್ದದ ಏಕೈಕ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶವು ಭರ್ಜರಿಯಾಗಿ ಗೆದ್ದುಕೊಂಡಿದೆ. ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯವನ್ನು ಲಿಟ್ಟನ್ ದಾಸ್ ಪಡೆ 546 ರನ್ ಅಂತರದಿಂದ ಗೆದ್ದು ಬೀಗಿದೆ.

Advertisement

ಟೆಸ್ಟ್ ಪಂದ್ಯ ಗೆಲ್ಲಲು 662 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನವು ಕೇವಲ 115 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು. 2019ರ ಟೆಸ್ಟ್ ಸೋಲಿನ ಸೇಡನ್ನು ಬಾಂಗ್ಲಾ ಭರ್ಜರಿಯಾಗಿ ತೀರಿಸಿಕೊಂಡಿತು.

ಬಾಂಗ್ಲಾ ದೇಶವು ಮೊದಲ ಇನ್ನಿಂಗ್ಸ್ ನಲ್ಲಿ 382 ರನ್ ಗಳಿಸಿದ್ದರೆ, ಅಫ್ಘಾನಿಸ್ತಾನವು ಕೇವಲ 146 ರನ್ ಮಾಡಿತ್ತು. ಎರಡನೇ ಇನ್ನಿಂಗ್ಸ್ ಆಡಿದ್ದ ಬಾಂಗ್ಲಾ ನಾಲ್ಕು ವಿಕೆಟ್ ನಷ್ಟಕ್ಕೆ 425 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು.

ಇದನ್ನೂ ಓದಿ:ಪಠ್ಯಕ್ಕೆ ಕೊಕ್…ನ್ಯೂಟನ್‌ ನ 3ನೇ ನಿಯಮ ಉಲ್ಲೇಖಿಸಿ ʼಕೈʼ ಗೆ ಸಾವರ್ಕರ್‌ ಮೊಮ್ಮಗ ತಿರುಗೇಟು!

ಬಾಂಗ್ಲಾದ ನಜ್ಮುಲ್ ಹುಸೇನ್ ಶಂಟೋ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಮೊದಲ ಇನ್ನಿಂಗ್ಸ್ ನಲ್ಲಿ 146 ರನ್ ಮಾಡಿದರೆ, ಎರಡನೇ ಇನ್ನಿಂಗ್ಸ್ ನಲ್ಲಿ 124 ರನ್ ಬಾರಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಮೊಮಿನಲ್ ಹಕ್ 121 ರನ್ ಗಳಿಸಿದ್ದರು.

Advertisement

ನಜ್ಮುಲ್ ಹುಸೇನ್ ಶಂಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಬಾಂಗ್ಲಾ ಪ್ರವಾಸದಲ್ಲಿ ಅಫ್ಘಾನ್ ತಂಡವು ಮೂರು ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next