Advertisement

ಬಾಂಗ್ಲಾದಲ್ಲಿ ಇರಿದು ಪತ್ರಕರ್ತೆ ಹತ್ಯೆ

09:44 AM Aug 30, 2018 | Team Udayavani |

ಢಾಕಾ: ಬಾಂಗ್ಲಾದೇಶದ ಟಿವಿ ವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತೆ ಸುಬರ್ಣ ಅಕ್ತರ್‌ ನೋದಿ(32) ಎಂಬವರನ್ನು ಅಪರಿಚಿತ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಇರಿದು ಹತ್ಯೆಗೈದಿದ್ದಾರೆ. 10-12 ಜನರ ಗುಂಪು ಈ ಕೃತ್ಯ ಎಸಗಿದೆ.

Advertisement

ವಾಹಿನಿಯಲ್ಲಿ ವೃತ್ತಿ ನಿರ್ವಹಣೆಯ ಜೊತೆಗೆ, ಡೈಲಿ ಜಾಗ್ರೋತೊ ಬಾಂಗ್ಲಾ ಎಂಬ ಪತ್ರಿಕೆಯಲ್ಲೂ ಕೆಲಸ ಮಾಡುತ್ತಿದ್ದರು. ಅವರಿಗೆ 9 ವರ್ಷ ವಯಸ್ಸಿನ ಮಗಳಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಕುಟುಂಬ ಮೂಲಗಳು ಹೇಳಿವೆ. ಇದಕ್ಕೂ ಮೊದಲು ತನ್ನ ಪರಿತ್ಯಕ್ತ ಪತಿ ತನ್ನ ಮೇಲೆ ದಾಳಿಗೆ ಯತ್ನಿಸಿದ್ದಾಗಿ ಆಕೆ ಹೇಳಿದ್ದರು ಎಂದು ಅವರ ತಾಯಿ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next