Advertisement

ಬಾಂಗ್ಲಾ ಮಹಾ ಚುನಾವಣೆ ಡಿ.30ಕ್ಕೆ; ಮುಂದೂಡಿಕೆ ಇಲ್ಲ : ಚು.ಆ.

04:14 PM Nov 13, 2018 | Team Udayavani |

ಢಾಕಾ :  ಬಾಂಗ್ಲಾ ಸಾರ್ವತ್ರಿಕ ಚುನಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿ ಡಿಸೆಂಬರ್‌ 30ಕ್ಕೆ ನಿಗದಿಸಿದ ಒಂದು ದಿನದ ತರುವಾಯ, ಚುನಾವಣೆಗಳನ್ನು ಇನ್ನಷ್ಟು ಮುಂದೂಡಬೇಕೆಂದು ವಿರೋಧ ಪಕ್ಷಗಳು ಮಾಡಿಕೊಂಡಿರುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

Advertisement

ಕಳೆದ ವಾರ ಬಾಂಗ್ಲಾದೇಶ ಚುನಾವಣಾ ಆಯೋಗ ದೇಶದ 11ನೇ ಸಾರ್ವತ್ರಿಕ ಚುನಾವಣೆಯನ್ನು ಡಿ.23ಕ್ಕೆ ನಡೆಸುವುದಾಗಿ ಹೇಳಿತ್ತು. ಅನಂತರದಲ್ಲಿ ಅದನ್ನು ಡಿ.30ಕ್ಕೆ ನಿಗದಿಸಿತ್ತು. 

ಸಾರ್ವತ್ರಿಕ ಚುನಾವಣೆಗಳನ್ನು ಒಂದು ತಿಂಗಳ ಮಟ್ಟಿಗಾದರೂ ಮುಂದೂಡುವಂತೆ ಪ್ರಧಾನ ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಸೇರಿರುವ ವಿಪಕ್ಷ ಮೈತ್ರಿ ಕೂಟ ಜಾತೀಯ ಐಕ್ಯ ಫ್ರಂಟ್‌ (ಎನ್‌ಯುಎಫ್) ಆಗ್ರಹಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next