Advertisement

Bangladesh Crisis: ಲಂಕಾ ಕ್ರಾಂತಿ ನೆನಪಿಸಿದ ಬಾಂಗ್ಲಾ ದಂಗೆ!

12:08 AM Aug 06, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅತ್ತ ಪ್ರಧಾನಿ ಶೇಖ್‌ ಹಸೀನಾ ಅವರು ದೇಶ ತೊರೆಯುತ್ತಿದ್ದಂತೆ, ಇತ್ತ ಢಾಕಾದಲ್ಲಿ ಸಾವಿ ರಾರು ಪ್ರತಿಭಟನಕಾರರು ಪ್ರಧಾನಮಂತ್ರಿ ಅರಮನೆಗೆ ಮುತ್ತಿಗೆ ಹಾಕಿದ್ದಾರೆ. ಅರಮನೆಯಲ್ಲಿ ಅವರ ಮೋಜು, ಮಸ್ತಿ, ಪುಂಡಾಟಗಳ ದೃಶ್ಯಗಳು ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರಾಂತಿಯನ್ನೇ ನೆನಪಿಸಿದೆ.

Advertisement

2022ರಲ್ಲಿ ಶ್ರೀಲಂಕಾದಲ್ಲಿ ನಡೆದ ದಂಗೆಯ ವೇಳೆ ಸಾವಿರಾರು ಪ್ರತಿಭಟನಕಾರರು ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿ ಕೋಲಾಹಲ ಸೃಷ್ಟಿಸಿದ್ದು ಭಾರೀ ಸುದ್ದಿಯಾಗಿತ್ತು. ಸೋಮವಾರ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರ ನಿವಾಸದಲ್ಲೂ ಇದೇ ಮಾದರಿಯ ದೃಶ್ಯಗಳು ಕಂಡು ಬಂದಿವೆ.

ಕರ್ಫ್ಯೂವನ್ನೂ ಲೆಕ್ಕಿಸದೇ ಬೀದಿಗಿಳಿದ ಪ್ರತಿಭಟನಕಾರರು, ಹಸೀನಾ ಅವರ ಅಧಿಕೃತ ನಿವಾಸ “ಗಣಬಧನ್‌’ ಒಳ ಹೊಕ್ಕು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ದೋಚುತ್ತಿ ರು ವು ದು, ರೆಫ್ರಿಜರೇಟರ್‌ನಲ್ಲಿ ಇಡಲಾಗಿದ್ದ ಮೀನು, ಕೋಳಿ, ತರ ಕಾರಿಗಳನ್ನು ತಿನ್ನುತ್ತಿರುವುದು, ಅಲ್ಲಿದ್ದ ಪೀಠೊಪಕರಣಗಳ ಮೇಲೆ ಹತ್ತಿ ಕುಣಿ ದಾಡುತ್ತಿರುವುದು, ಬೆಡ್‌ ರೂಂನಲ್ಲಿನ ಮಂಚದ ಮೇಲೆ ಮಲಗಿ ಫೋಟೋ ಗ ಳನ್ನು ಕ್ಲಿಕ್ಕಿ ಸಿ ಕೊಳ್ಳುತ್ತಿ ರು ವ ದೃಶ್ಯ ಗಳು, ಕೆಲ ವ ರಂತೂ ತಮಗೆ ಸಿಕ್ಕ ವಸ್ತು ಗ ಳ ನ್ನೆಲ್ಲ ಬಾಚಿ ಕೊಂಡು ಹೊತ್ತೂ ಯ್ಯು ತ್ತಿ ರುವ ಮತ್ತು ಈಜುಕೊಳದಲ್ಲಿ ಈಜುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿವೆ.

ಪ್ರತಿಭಟನಾಕಾರರ ಬೇಡಿಕೆಗಳೇನು ?
* ನಿರುದ್ಯೋಗ ಪ್ರಮಾಣ ಇಳಿಕೆಗೆ ಪರಿಹಾರ ಕಂಡುಕೊಳ್ಳಬೇಕು
* ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ನೀಡಲಾಗುತ್ತಿರುವ ಶೇ.30 ಮೀಸಲಾತಿ ಕೊನೆಗೊಳ್ಳಬೇಕು
* ಮೀಸಲಾತಿಯನ್ನು ಶೇ.5ಕ್ಕೆ ಇಳಿಸಲು ಸುಪ್ರೀಂ ನೀಡಿರುವ ಆದೇಶವನ್ನು ಶೀಘ್ರವೇ ಜಾರಿಗೊಳಿಸಬೇಕು
* ಪ್ರತಿಭಟನೆ ವೇಳೆ ಬಂಧಿತರಾದವರನ್ನು ಬಿಡುಗಡೆ ಮಾಡಬೇ ಕು
* ಹಸೀನಾ ಮತ್ತು ಅವರ ಸಹೋದರಿ ಶೇಖ್‌ ರೆಹಾನಾ ರಾಜೀನಾಮೆ ನೀಡಬೇಕು

ಅರಾಜಕತೆಯ ದರ್ಶನ!
ಹಸೀನಾ ರಾಜೀನಾಮೆ ಬಳಿಕ ಢಾಕಾದ ಬೀದಿ ಬೀದಿಗಳಲ್ಲೂ ಅರಾಜಕತೆಯ ದರ್ಶನವಾಯಿತು. ಪ್ರಧಾನಿ ನಿವಾಸದತ್ತ ಪ್ರತಿಭಟನಕಾರರು ಬರ ದಂತೆ ತಡೆ ಯಲು ಆ ಮಾರ್ಗದಲ್ಲಿ ಬ್ಯಾರಿ ಕೇ ಡ್‌ಗಳನ್ನು ಹಾಕಲಾಗಿತ್ತು. ಆದರೆ ಸಾಗರದಂತೆ ಎರ ಗಿದ ಪ್ರತಿಭಟನಕಾರರು, ಬ್ಯಾರಿಕೇ ಡ್‌ಗಳನ್ನು ಕ್ಷಣಮಾತ್ರದಲ್ಲಿ ನುಚ್ಚು ನೂರು ಮಾಡಿದರು.

Advertisement

ಅವಾಮಿ ಲೀಗ್‌ ಪಕ್ಷದ ಢಾಕಾ ಜಿಲ್ಲಾ ಕಚೇರಿಗೆ, ಪ ಕ್ಷ ದ ಅಧ್ಯ ಕ್ಷರ ಕಚೇ ರಿಗೆ, ದೇಶದ ಮುಖ್ಯ ನ್ಯಾಯ ಮೂ ರ್ತಿ ಗಳ ಮನೆಗೂ ಬೆಂಕಿ ಹಚ್ಚಿದರು. ಸೇನಾ ಟ್ಯಾಂಕ್‌ ಗಳ ಮೇಲೂ ಕೆಲ ವರು ಹತ್ತಿ ಧ್ವಜ ಗ ಳನ್ನು ಬೀಸುತ್ತಾ, ಘೋಷ ಣೆ ಗ ಳನ್ನು ಕೂಗಿದರು. ಹಸೀನಾ ಅವರ ತಂದೆ, ಮಾಜಿ ಅಧ್ಯಕ್ಷ ಶೇಖ್‌ ಮುಜೀಬುರ್‌ ರೆಹಮಾನ್‌ ಪ್ರತಿ ಮೆ ಧ್ವಂಸಗೊಳಿಸಿದರು. ಈ ವೇಳೆ ಢಾಕಾದ ಬೀದಿಗಳಲ್ಲಿ ಸುಮಾರು 4 ಲಕ್ಷ ಪ್ರತಿ ಭ ಟ ನ ಕಾ ರರು ಇದ್ದರು ಎಂದು ಸ್ಥಳೀಯ ಮಾಧ್ಯ ಮ ಗಳು ವರದಿ ಮಾಡಿವೆ.

ಇಂದಿರಾ ಗಾಂಧಿ ಕೇಂದ್ರಕ್ಕೂ ಹಾನಿ: ಢಾಕಾದಲ್ಲಿರುವ ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರ ಮತ್ತು ಬಂಗ ಬಂಧು ಸ್ಮಾರಕ ವಸ್ತು ಸಂಗ್ರಹಾಲಯವನ್ನೂ ಪ್ರತಿಭಟನಕಾರರು ಬಿಟ್ಟಿಲ್ಲ. ಮ್ಯೂಸಿ ಯಂಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ಇಂದಿರಾ ಗಾಂಧಿ ಕೇಂದ್ರ ವನ್ನೂ ಹಾನಿಗೊಳಿಸಿದರು.

ಬಾಂಗ್ಲಾ ರಾಷ್ಟ್ರಪಿತ ಮುಜಿಬುರ್‌ ರೆಹಮಾನ್‌ ಪ್ರತಿಮೆ ಧ್ವಂಸ
ಶೇಖ್‌ ಹಸೀನಾ ರಾಜಿನಾಮೆ ನೀಡಿ, ದೇಶ ತೊರೆದು ಹೋದಂತೆ ಅವಾಮಿ ಲೀಗ್‌ ಪಕ್ಷದ ಕಚೇರಿಗೆ ಪ್ರತಿಭಟನ ಕಾರರು ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಬಾಂಗ್ಲಾ ವಿಮೋಚನೆಯ ಹರಿಕಾರ, ಶೇಖ್‌ ಹಸೀನಾ ಅವರ ತಂದೆ, ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಪ್ರತಿಮೆಯನ್ನು ಢಾಕಾದಲ್ಲಿ ಪ್ರತಿಭಟ ನಕಾರರು ಹಾನಿಗೊಳಿಸಿದ್ದಾರೆ. ಪ್ರತಿಮೆಗೆ ದಂಗೆಕೋರರು ದಾಳಿ ನಡೆಸಿರುವ ವೀಡಿಯೋ ವೈರಲ್‌ ಆಗಿದೆ.

ಬಾಂಗ್ಲಾದ “ಉಕ್ಕಿನ ಮಹಿಳೆ’ ಶೇಖ್‌ ಹಸೀನಾ
ಬಾಂಗ್ಲಾ ದೇಶದ “ಉಕ್ಕಿನ ಮಹಿಳೆ’ ಎಂದೇ ಖ್ಯಾತರಾಗಿ, ಬಾಂಗ್ಲಾದ ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ 5 ವರ್ಷಗಳ ಕಾಲ ಪೂರ್ಣಾವ ಧಿ ಸರ್ಕಾರವನ್ನು ನಡೆಸಿದ ಹಾಗೂ 5 ಬಾರಿ ಪ್ರಧಾನಿಯಾದ ಗರಿ ಹೊತ್ತವರು ಶೇಖ್‌ ಹಸೀನಾ. ಬಾಂಗ್ಲಾ ಸ್ಥಾಪಕರಾದ ಶೇಖ್‌ ಮುಜೀಬುರ್‌ ರೆಹಮಾನ್‌ ಅವರ ಪುತ್ರಿ ಹಸೀನಾ, ದೇಶದ ಸ್ವಾತಂತ್ರ್ಯಕ್ಕಾಗಿ ತಂದೆಯ ಹೋರಾಟವನ್ನು ನೋಡುತ್ತಾ ಬೆಳೆದವರು.

ಹಸೀನಾ ತಂದೆ ಮುಜಿಬುರ್‌ ಬಾಂಗ್ಲಾದ ಮೊದಲ ಅಧ್ಯಕ್ಷರು. 1975ರಲ್ಲಿ ಮುಜಿಬುರ್‌ ಅವರ ಪತ್ನಿ ಮತ್ತು 3 ಪುತ್ರರನ್ನು ಹತ್ಯೆಗೈಯ್ಯಲಾಯಿತು. ಬಳಿಕ 6 ವರ್ಷ ವಿದೇಶದಲ್ಲಿದ್ದುಕೊಂಡೇ ತಮ್ಮ ತಂದೆ ಸ್ಥಾಪಿಸಿದ್ದ ಅವಾಮಿ ಲೀಗ್‌ ಪಕ್ಷವನ್ನು ಮುನ್ನಡೆಸಿ, 1981ರಲ್ಲಿ ಬಾಂಗ್ಲಾಗೆ ಹಸೀನಾ ವಾಪಸಾದರು. ಮಿಲಿಟರಿ ಆಡಳಿತವನ್ನು ವಿರೋಧಿಸಿದ ಅವರಿಗೆ ಅತೀವ ಬೆಂಬಲ ಸಿಕ್ಕ ಕಾರಣ 1990ರಲ್ಲಿ ಲೆ.ಜ.ಹುಸ್ಸೆ„ನ್‌ ಮೊಹಮ್ಮದ್‌ ಇರ್ಷಾದ್‌ ರಾಜೀನಾಮೆ ನೀಡಿದರು .

ನಂತರ ಬಿಎನ್‌ಪಿ ಪಕ್ಷ ಅಧಿಕಾರಕ್ಕೆ ಬಂತು. ಮತ್ತೆ ರಾಜಕೀಯ ಸಂಘರ್ಷದಿಂದ ಆ ಪಕ್ಷ ಕೆಳಗಿಳಿಯಿತು. ನಂತರ 1996ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಹಸೀನಾ ಬಾಂಗ್ಲಾ ಪ್ರಧಾನಿ ಪಟ್ಟವೇರಿದರು. ಈ ವೇಳೆ ದೇಶ ಆರ್ಥಿಕವಾಗಿ ಅಭಿ ವೃ ದ್ಧಿ ಹೊಂದಿತು, ಬಡತನವೂ ಇಳಿಕೆ ಕಂಡಿತು. 2001ರಲ್ಲಿ ಅವರ ಅಧಿಕಾರಾವಧಿ ಮುಗಿದು ನಂತರದ ಚುನಾವಣೆಯಲ್ಲಿ ಸೋತರು. ಮತ್ತೆ 2008, 2014, 2018 ಮತ್ತು 2024ರಲ್ಲಿ ಸತತ 4ನೇ ಬಾರಿಗೆ ಹಸೀನಾ ಪ್ರಧಾನಿಯಾಗಿ ಒಟ್ಟು 5 ಬಾರಿ ಪ್ರಧಾನಿ ಪಟ್ಟವೇರಿದರು. ಈಗ ನಡೆದ ದಂಗೆಯು ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಿದ್ದಲ್ಲದೇ, ದೇಶ ಬಿಟ್ಟು ಪರಾರಿಯಾಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next