Advertisement
ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಬಾಂಗ್ಲಾದೇಶ ಸೇನೆ ನಿರಾಕರಿಸಿರುವುದಾಗಿ ವರದಿಯಾಗಿದೆ. ಸಭೆಯ ನಂತರ ಜನರಲ್ ವಾಕರ್ ಯುಝ್ ಝಮಾನ್ ಶೇಖ್ ಹಸೀನಾ ಸಚಿವಾಲಯಕ್ಕೆ ತೆರಳಿ, ದೇಶದಲ್ಲಿ ಕರ್ಫ್ಯೂಯಾಗಲಿ, ಲಾಕ್ ಡೌನ್ ಹೇರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ ನಂತರ ಶೇಖ್ ಹಸೀನಾ ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶದ ಬೆಳವಣಿಗೆ ಕುರಿತು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
Related Articles
Advertisement
ದೇಶದ ಜನರ ಜೀವವನ್ನು ರಕ್ಷಿಸಬೇಕಾಗಿದೆ ಎಂದು ಕರೆ ನೀಡಿದ್ದ ಬಾಂಗ್ಲಾ ಸೇನಾ ಮುಖ್ಯಸ್ಥ, ಸೇನೆ ತಾಳ್ಮೆಯನ್ನು ಪ್ರದರ್ಶಿಸಬೇಕು, ದುಡುಕಿನಿಂದ ಗುಂಡಿನ ದಾಳಿ ನಡೆಸಬೇಡಿ ಎಂದು ಸೂಚನೆ ನೀಡಿರುವುದಾಗಿ ಸೇನಾ ವಕ್ತಾರ ಚೌಧುರಿ ತಿಳಿಸಿದ್ದಾರೆ.