Advertisement

ತಮಿಮ್‌ ಶತಕ; ವಿಂಡೀಸ್‌ ವಿರುದ್ಧ ಬಾಂಗ್ಲಾ ಗೆಲುವು

12:33 PM Jul 24, 2018 | Team Udayavani |

ಗಯಾನಾ: ಆರಂಭಕಾರ ತಮಿಮ್‌ ಇಕ್ಬಾಲ್‌ ಅವರ 10ನೇ ಶತಕ, ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರ 97 ರನ್‌ ಸಾಹಸ, ಮಶ್ರಫೆ ಮೊರ್ತಜಾ ಅವರ ಘಾತಕ ಬೌಲಿಂಗ್‌ ದಾಳಿಯ ನೆರವು ಪಡೆದ ಬಾಂಗ್ಲಾದೇಶ, ಆತಿಥೇಯ ವೆಸ್ಟ್‌ ಇಂಡೀಸ್‌ ಎದುರಿನ ಪ್ರಥಮ ಏಕದಿನ ಪಂದ್ಯವನ್ನು 48 ರನ್ನುಗಳಿಂದ ಜಯಿಸಿದೆ.

Advertisement

ಇಲ್ಲಿನ “ಪ್ರೊವಿಡೆನ್ಸ್‌ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 4 ವಿಕೆಟಿಗೆ 279 ರನ್‌ ಪೇರಿಸಿ ಸವಾಲೊಡ್ಡಿದರೆ, ವೆಸ್ಟ್‌ ಇಂಡೀಸ್‌ 9 ವಿಕೆಟಿಗೆ 231 ರನ್‌ ಮಾತ್ರ ಗಳಿಸಿ ಶರಣಾಯಿತು. ಅನುಭವಿ ಬೌಲರ್‌ ಮೊರ್ತಜಾ 37 ರನ್ನಿತ್ತು 4 ವಿಕೆಟ್‌ ಉರುಳಿಸಿದರು.

ತಮಿಮ್‌ ಇಕ್ಬಾಲ್‌ ಅಜೇಯ ಬೀಸುಗೆಯಲ್ಲಿ 130 ರನ್‌ ಹೊಡೆದರು. 160 ಎಸೆತಗಳ ಈ ಪಂದ್ಯಶ್ರೇಷ್ಠ ಆಟದಲ್ಲಿ 10 ಬೌಂಡರಿ, 3 ಸಿಕ್ಸರ್‌ ಸೇರಿತ್ತು. ಇದು 180ನೇ ಪಂದ್ಯದಲ್ಲಿ ತಮಿಮ್‌ ಬಾರಿಸಿದ 10ನೇ ಶತಕ. ಶಕಿಬ್‌ 121 ಎಸೆತ ಎದುರಿಸಿ 97 ರನ್‌ ಕೊಡುಗೆ ಸಲ್ಲಿಸಿದರು (6 ಬೌಂಡರಿ). ಇವರಿಬ್ಬರ 2ನೇ ವಿಕೆಟ್‌ ಜತೆಯಾಟದಲ್ಲಿ 207 ರನ್‌ ಒಟ್ಟುಗೂಡಿತು. ವೆಸ್ಟ್‌ ಇಂಡೀಸ್‌ ಪರ ಶಿಮ್ರನ್‌ ಹೆಟ್‌ಮೈರ್‌ ಸರ್ವಾಧಿಕ 52 ರನ್‌, ಕ್ರಿಸ್‌ ಗೇಲ್‌ 60 ಎಸೆತಗಳಿಂದ 40 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next