Advertisement
ನಮ್ಮ ಮೆಟ್ರೋವು ತನ್ನ ನಿಲ್ದಾಣ, ಮೆಟ್ರೋ ಕಂಬ ಮತ್ತು ತನಗೆ ಸೇರಿದ ಜಾಗಗಳಲ್ಲಿ ಜಾಹೀರಾತು ಫಲಕಗಳನ್ನು ಹಾಕುವುದರ ಮೂಲಕ ಆದಾಯ ಸಂಗ್ರಹಣೆ ನಡೆಸುವ ಪ್ರಯತ್ನ ನಡೆಸಿತ್ತು. ಆದರೆ, ಜಾಹೀರಾತು ಫಲಕಗಳನ್ನು ನಿಷೇಧಿಸಿ ಹೈಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋದ ಮುಂದಿದ್ದ ಜಾಹೀರಾತು ಫಲಕಗಳ ಮೂಲಕ ಆದಾಯ ಸಂಗ್ರಹದ ದಾರಿ ಸದ್ಯಕ್ಕೆ ಮುಚ್ಚಿದೆ.
Related Articles
Advertisement
ಎಟಿಎಂ, ಪುಸ್ತಕದ ಅಂಗಡಿ, ತಿನಿಸುಗಳ ಅಂಗಡಿ, ಮಾಹಿತಿ ಕೇಂದ್ರ, ಉಡುಗೊರೆಗಳ ಅಂಗಡಿ, ಸ್ಮರಣಿಕೆಗಳ ಅಂಗಡಿ ಮುಂತಾದವುಗಳ ವ್ಯಾಪಾರಕ್ಕೆ ಮೆಟ್ರೋ ನಿಲ್ದಾಣ ಹೆಚ್ಚು ಸೂಕ್ತ ಎಂಬ ಅಭಿಪ್ರಾಯವಿದೆ.
ಪಾರ್ಕಿಂಗ್ ಜಾಗ ಅಭಿವೃದ್ಧಿಪಡಿಸಲಿ ಮೆಟ್ರೋ ಆದಾಯ ವೃದ್ಧಿಸಿಕೊಳ್ಳಲು ನಿಗಮದ ಸ್ವಾಧೀನದಲ್ಲಿರುವ ಖಾಲಿ ಜಾಗವನ್ನು ಪಾರ್ಕಿಂಗ್ ಗಾಗಿ ಅಭಿವೃದ್ಧಿ ಪಡಿಸುವ ಅವಕಾಶವಿದೆ. ಕೆಲ ನಿಲ್ದಾಣಗಳಲ್ಲಿ ಈಗಾಗಲೇ ಪಾರ್ಕಿಂಗ್‌ಗೆ ಅವಕಾ ಶ ಇದೆ. ಇದರಿಂದ ಮೆಟ್ರೋ ದಲ್ಲಿನ ಜನ ಸಂಚಾರ ಹೆಚ್ಚುವುದರ ಜೊತೆಗೆ ಪಾರ್ಕಿಂಗ್ ಮೂಲಕವೂ ಹಣ ಸಂಗ್ರಹಿಸಲು ಸಾಧ್ಯವಿದೆ. ಇದರ ಜೊತೆಗೆ ಕಾರ್ಪೊರೇಟ್ ಕಂಪನಿಗಳ ಹೆಸರನ್ನು ಮೆಟ್ರೋ ನಿಲ್ದಾಣದ ಹೆಸರಿಗೆ ಜೋಡಿಸುವ ಮೂಲಕ ಆದಾಯ ಗಳಿಸುವ ಚಿಂತನೆಯಿದೆ. ಮೆಜೆಸ್ಟಿಕ್‌ನ ನಿಲ್ದಾಣದ ಮೇಲೆ 4 ಮಳಿಗೆ ಖಾಸಗಿ ಸಹಭಾಗಿ ತ್ವದಲ್ಲಿ ಕಟ್ಟುವ ಯೋಜನೆ ನಿಗಮ ಹೊಂದಿದೆ.
ಈ ನಿಲ್ದಾಣಗಳಲ್ಲಿ ಮಳಿಗೆಗೆ ಸ್ಥಳಾವಕಾಶ ಮಳಿಗೆ ತೆರೆಯಲು ಸ್ಥಳಾವಕಾಶ ನೀಡಲು ನಿರ್ಧರಿಸಿರುವ ನೇರಳೆ ಮಾರ್ಗದ ನಿಲ್ದಾಣ ಗಳು ಬೈಯ್ಯಪ್ಪನಹಳ್ಳಿ, ಎಸ್.ವಿ.ರೋಡ್, ಇಂದಿರಾನಗರ, ಹಲಸೂರು, ಟ್ರಿನಿಟಿ, ಎಂ.ಜಿ.ರೋಡ್, ವಿಜಯನಗರ, ಅತಿಗುಪ್ಪೆ, ಕೆಂಗೇರಿ. ಹಸಿರು ಮಾರ್ಗದಲ್ಲಿ ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್, ರಾಜಾಜಿನಗರ, ಶ್ರೀರಾಮಪುರ, ಮಂತ್ರಿ ಸ್ಕ್ವಾರ್ ಸಂಪಿಗೆ ರಸ್ತೆ, ನಾಡಪ್ರಭು ಕೇಂಪೇಗೌಡ, ಚಿಕ್ಕಪೇಟೆ, ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಜಯನಗರ, ಬನಶಂಕರಿ ಮತ್ತು ಜೆ.ಪಿ.ನಗರ.
ಮೆಟ್ರೋ ನಿಲ್ದಾಣಕ್ಕೆ ಬರುವಾಗ ಅಥವಾ ಮೆಟ್ರೋ ನಿಲ್ದಾಣದಿಂದ ಹೊರ ಹೋಗುವಾಗ ಧಾವಂತದಲ್ಲೇ ಹೆಚ್ಚು ಮಂದಿ ಇರುತ್ತಾರೆ. ಆದರೆ, ಮೆಟ್ರೋ ನಿಲ್ದಾಣಗಳನ್ನು ಒಂದು ರೀತಿಯಲ್ಲಿ ಶಾಪಿಂಗ್ ಹಬ್ ಅಥವಾ ಟೈಂ ಪಾಸ್ ಮಾಡುವ ಜಾಗದಂತೆ ಅಭಿವೃದ್ಧಿಪಡಿಸಿದರೆ ಆಗ ಹೆಚ್ಚಿನ ಸಮಯ ನಿಲ್ದಾಣದಲ್ಲಿ ಕಳೆಯಬಹುದು. ಇದರಿಂದ ಮೆಟ್ರೋ ನಿಲ್ದಾಣದಲ್ಲಿನ ಅಂಗಡಿಗಳಿಗೂ ವ್ಯಾಪಾರವಾಗುತ್ತದೆ. ● ಶೈಲಜಾ ರಾವ್, ಮೆಟ್ರೋ ರೈಲು ಪ್ರಯಾಣಿಕರು, ಪೀಣ್ಯ.
-ರಾಕೇಶ್ ಎನ್.ಎಸ್