Advertisement

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

03:17 PM Nov 29, 2024 | Team Udayavani |

ಬೆಂಗಳೂರು: ಭೋವಿ ನಿಗಮದಲ್ಲಿ ನಡೆದ ಅಕ್ರಮ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ.

Advertisement

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಸಿಸಿಬಿ ಪೊಲೀಸರು, ಪ್ರಕರಣದ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ. ಭೋವಿ ನಿಗಮದಲ್ಲಿನ ಅಕ್ರಮ ಆರೋಪ ಸಂಬಂಧ ತನಿಖೆಯ ಭಾಗವಾಗಿ ಉದ್ಯಮಿ ಜೀವಾ ಅವರನ್ನು ವಿಚಾರಣೆಗೆ ಕರೆಯಲು ಕಾರಣವೇನು, ಜೀವಾಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗೆ ಎಷ್ಟು ಕೋಟಿ ಹಣ ವರ್ಗಾವಣೆ ಆಗಿತ್ತು, ವಿಚಾರಣೆಗಾಗಿ ಅವರು ಎಷ್ಟು ಬಾರಿ ಸಿಐಡಿ ಕಚೇರಿಗೆ ಬಂದಿದ್ದರು, ಜೀವಾ ಸಹೋದರಿ ದೂರಿನಲ್ಲಿ ಆರೋಪಿಸಿದ ರೀತಿ ಜೀವಾ ಮೇಲೆ ದೌರ್ಜನ್ಯ ನಡೆದಿದೆಯೇ, ಎಂಬಿತ್ಯಾದಿ ಮಾಹಿತಿಗಳನ್ನು ಪಡೆಯಲು ಡಿವೈಎಸ್ಪಿ ಕನಕಲಕ್ಷ್ಮೀಗೆ ನೋಟಿಸ್‌ ಕೊಡಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಜೀವಾ ಅವರು ಬರೆದಿದ್ದಾರೆನ್ನಲಾದ 13 ಪುಟಗಳ ಡೆತ್‌ನೋಟ್‌ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅದರಲ್ಲಿರುವ ಕೈ ಬರಹ ಜೀವಾ ಅವರದ್ದಾ ಅಥವಾ ಬೇರೆಯವರದ್ದಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಿದ್ದಾರೆ. ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋಟ್‌ ಗೆ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಏಕಸದಸಯ ಪೀಠ ಡೆತ್‌ನೋಟ್‌ನಲ್ಲಿ ಬರೆದಿರುವ ಆರೋಪಿಯನ್ನು ಏಕೆ ವಿಚಾರಣೆ ನಡೆಸಿಲ್ಲ, ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ, ಇನ್ನೂ ಏಕೆ ತನಿಖೆ ಆರಂಭಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿತ್ತು. ಹಾಗಾಗಿ ಇದೀಗ ಕನಕಲಕ್ಷ್ಮೀಗೆ ವಿಚಾರಣೆಗಾಗಿ ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next