Advertisement
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಎಐ ( ಕೃತಕಬುದ್ದಿಮತ್ತೆ) ತಂತ್ರಜ್ಞಾನ ಹೊಂದಿರುವ ಎಎನ್‌ಆರ್‌ಪಿ ಕೆಮರಾಗಳನ್ನು ಅಳವಡಿಸಿದ್ದು, ಇದರೊಂದಿಗೆ ಸ್ಪೀಡ್ ರಾಡಾರ್‌ಗಳನ್ನು ಅಳವಡಿಸಲಾಗಿದೆ. ಕೆಮರಾ ಅಳವಡಿಸಿರುವ ಕಾಮಗಾರಿಯನ್ನು ಮೂರು ದಿನಗಳ ಹಿಂದೆ ರಸ್ತೆ ಸುರಕ್ಷಾ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್ ಭೇಟಿ ಮಾಡಿ ಪರಿಶೀಲಿಸಿದ್ದರು. 15 ದಿನಗಳ ಹಿಂದೆಯೇ ಕೆಮರಾಗಳು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇರಿಸಲು ಆರಂಭಿಸಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ನಿಯಮ ಉಲ್ಲಂ ಸಿರುವ 12,192 ವಾಹನ ಮಾಲಕರ ವಿರುದ್ಧ ಚಿತ್ರ ಸಮೇತ ನೋಟಿಸ್ ಸಿದ್ಧವಾಗಿದೆ. ಗಣಕೀಕೃತ ಇ-ಚಲನ್ ಅನ್ನು ಎಡಿಜಿಪಿ ಆಲೋಕ್‌ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಯಮ ಉಲ್ಲಂ ಸಿರುವ ವಾಹನ ಸವಾರರಿಗೆ ಸದ್ಯದಲ್ಲೇ ಮನೆಗೆ ನೋಟಿಸ್ ಕಳುಹಿಸಲಿದ್ದು, ಆನ್‌ಲೈನ್ ಮೂಲಕ ಅಥವಾ ಸಮೀಪದ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಸಲು ಅವಕಾಶ ಮಾಡಿಕೊಡಲಿರುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
Related Articles
ನಿಮ್ಮ ವಾಹನಕ್ಕೆ ದಂಡ ವಿಧಿಸಲಾಗಿದೆಯೇ ಎಂಬುದನ್ನು ತಿಳಿಯಲು ಪೊಲೀಸ್ ಇಲಾಖೆ ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ತೆರೆದಿದೆ. ಈ ವೆಬ್ ಪೇಜ್‌ನಲ್ಲಿ ನಿಮ್ಮ ವಾಹನದ ಸಂಖ್ಯೆ, ಜಿಲ್ಲೆಯನ್ನು ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ದಂಡ ಬಗ್ಗೆ ತಿಳಿಯುತ್ತದೆ.
Advertisement
ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂ ಸಿ ಪೊಲೀಸ್ ಇಲಾಖೆಯ ಕೆಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಹನ ಚಾಲಕರು ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ದಂಡದಿಂದ ತಪ್ಪಿಸಿಕೊಳ್ಳಿ. ಈ ಕೆಮರಾಗಳು ಹಗಲು -ರಾತ್ರಿ ಕಾರ್ಯನಿರ್ವಹಿಸಲಿವೆ.– ಆಲೋಕ್‌ಕುಮಾರ್, ಎಡಿಜಿಪಿ, ರಸ್ತೆ ಸುರಕ್ಷಾ ವಿಭಾಗ (ತಮ್ಮ ಎಕ್ಸ್ ಖಾತೆಯಲ್ಲಿ) – ಸು.ನಾ.ನಂದಕುಮಾರ್