Advertisement

ಬೆಂಗಳೂರು-ಮುಂಬೈಗೆ ಸಿಗಲಿದೆ ಹೊಸ ಹೆದ್ದಾರಿ; ಎಲ್ಲಿಂದ ಶುರು ಮತ್ತು ಮುಕ್ತಾಯ?

05:43 PM Oct 27, 2022 | Team Udayavani |

ಬೆಂಗಳೂರು ಮತ್ತು ಮುಂಬೈ ನಮ್ಮ ದೇಶದ ಎರಡು ಪ್ರಧಾನ ನಗರಗಳು. ಎರಡೂ ನಗರ ನಡುವೆ ರಸ್ತೆ ಮತ್ತು ರೈಲು ಮಾರ್ಗವಾಗಿ ಸಂಚರಿಸಲು ಏನಿಲ್ಲವೆಂದರೂ 14ರಿಂದ 24 ಗಂಟೆ ಬೇಕಾಗುತ್ತದೆ. ಪ್ರಮುಖ ನಗರಗಳ ನಡುವೆ ತ್ವರಿತವಾಗಿ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ಎಕ್ಸ್‌ಪ್ರೆಸ್‌ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪೈಕಿ ಬೆಂಗಳೂರು-ಮುಂಬೈ ಕೂಡ ಒಂದು. ಪುಣೆ ಮೂಲಕ ಮುಂಬೈಗೆ ಬೆಂಗಳೂರಿಗೆ ವಿಶೇಷ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದಾಗಿ 2 ನಗರಗಳ ನಡುವಿನ ಪ್ರಯಾಣದ ಸಮಯ ಮತ್ತು ದೂರ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ.

Advertisement

12 ಜಿಲ್ಲೆಗಳು; ಕರ್ನಾಟಕದಲ್ಲಿ-ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರ ದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ಬೆಳಗಾವಿ. ಮಹಾರಾಷ್ಟ್ರದಲ್ಲಿ- ಸಾಂಗ್ಲಿ, ಸತಾರಾ, ಪುಣೆ.

ಎಲ್ಲಿಂದ ಶುರು ಮತ್ತು ಮುಕ್ತಾಯ?
ಪುಣೆಯ ಕಂಜಾಲೆ ಎಂಬಲ್ಲಿಂದ ಯೋಜನೆ ಶುರುವಾಗಲಿದೆ. ಅಲ್ಲಿ ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ರಿಂಗ್‌ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯ ಕುರ್ಶೇ ಎಂಬಲ್ಲಿಂದ ಈ ರಿಂಗ್‌ ರಸ್ತೆ ಸಮಾನಾಂತರವಾಗಿ ಹೊಸ ಕಾಮಗಾರಿ ಶುರುವಾಗಲಿದ್ದು, ಕರ್ಜಾತ್‌ ಎಂಬಲ್ಲಿಯ ವರೆಗೆ ನಿರ್ಮಾಣವಾಗಲಿದೆ. ಅಲ್ಲಿಂದ ಬೆಂಗಳೂರಿನ ಮುತ್ತಗದ ಹಳ್ಳಿಯವರೆಗೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ ಎಚ್‌ಎಐ) ಕಾಮಗಾರಿ ಕೈಗೆತ್ತಿಕೊಳ್ಳಲಿದೆ.

2 ಬದಿಗಳಲ್ಲಿ ಗಿಡ ನೆಡಲು ಕ್ರಮ
*ಪುಣೆ ಮತ್ತು ಬೆಂಗಳೂರಿಗೆ ಸಮೀಪವಾಗಿ ಎಕ್ಸ್‌ ಪ್ರೆಸ್‌ ವೇಗೆ ಸಮಾನಾಂತರವಾಗಿ ತುರ್ತು ಸಂದರ್ಭಗಳಲ್ಲಿ ವಿಮಾನ ಇಳಿದಾಣಗಳ ನಿರ್ಮಾಣಕ್ಕೆ ಪ್ರಸ್ತಾಪ.
* ಮುಂದಿನ ರಸ್ತೆ ವಿಸ್ತರಣೆಗೆ ಬೇಕಾಗುವ ನಿಟ್ಟಿನಲ್ಲಿ 100 ಮೀಟರ್‌ ಪ್ರದೇಶವನ್ನು ವಶಪಡಿಸಿಕೊಳ್ಳಲಾಗುತ್ತದೆ.

ಏನು ಅನುಕೂಲ, ವಿಶೇಷ
*ಆರು ಲೇನ್‌ಗಳ ಹೆದ್ದಾರಿ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಎಂಟು ಲೇನ್‌ಗಳಿಗೆ ವಿಸ್ತರಣೆಗೆ ಅವಕಾಶ.
* ಸಂಚಾರ ದಟ್ಟಣೆ ತಗ್ಗುವುದರಿಂದ ವಾಣಿಜ್ಯಿಕ ಚಟುವಟಿಕೆ ಹೆಚ್ಚಳಕ್ಕೆ ಅನುಕೂಲ
* ಗುಜರಾತ್‌, ನಾಸಿಕ್‌, ಪುಣೆ, ಸತಾರಾ, ಕೊಲ್ಹಾಪುರ ವಲಯಗಳಲ್ಲಿ ಮತ್ತಷ್ಟು ಬೆಳವಣಿಗೆ

Advertisement

ಕಾಮಗಾರಿಯ ಸದ್ಯದ ಸ್ಥಿತಿ
*ಮಹಾರಾಷ್ಟ್ರದ ಭಾಗದಲ್ಲಿ ಯೋಜನೆಯ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲಾಗುತ್ತಿದೆ. ಡಿಸೆಂಬರ್‌
ನಲ್ಲಿ ಅದನ್ನು ಸಲ್ಲಿಕೆ ಮಾಡಿ ಅಂತಿಮ ಒಪ್ಪಿಗೆ ಪಡೆಯಲಾಗುತ್ತದೆ.

* 95 ಕಿ.ಮೀ.: ಬೆಂಗಳೂರಿನಿಂದ ಮುಂಬೈ ನಡುವೆ ಕಡಿಮೆಯಾಗಲಿರುವ ದೂರ
*12-14 ಗಂಟೆ: ಸದ್ಯ ಬೇಕಾಗುವ ಪ್ರಯಾಣದ ಅವಧಿ
* 6 8 ಗಂಟೆ: ರಸ್ತೆ ಕಾಮಗಾರಿ ಮುಕ್ತಾಯದ ಬಳಿಕ

*699 ಕಿ.ಮೀ. ಪುಣೆಯಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್‌ ವೇ
*50ಸಾವಿರಕೋಟಿ ರೂ.ಅಂದಾಜು ವೆಚ್ಚ
*2024ರ ಮಧ್ಯಭಾಗ:ಯೋಜನೆಯ ಬಗ್ಗೆ ಟೆಂಡರ್‌ ಮತ್ತು ವರ್ಕ್‌ ಆರ್ಡರ್‌ ನೀಡಲಾಗುವ ಅಂದಾಜು ವರ್ಷ
*2028ಯೋಜನೆ ಪೂರ್ತಿಗೊಳ್ಳಲಿರುವಅಂದಾಜು ವರ್ಷ ಪ್ರತಿ ಗಂಟೆಗೆ120 ಕಿ.ಮೀ.ವೇಗ: ವಾಹನಗಳಿಗೆಸಂಚರಿಸಲಿರುವ ವೇಗ

Advertisement

Udayavani is now on Telegram. Click here to join our channel and stay updated with the latest news.

Next