Advertisement
ಪ್ರಕೃತಿ ವಿರೋಧಿ ಚಟುವಟಿಕೆಗಳು ಹೀಗೆಯೇ ಮುಂದುವರೆದರೆ ಇನ್ನೈದು ವರ್ಷಗಳಲ್ಲಿ ರಾಜಧಾನಿ ಸಮಾಧಿ ನಗರವಾಗಿ (ಡೆಡ್ಲಿ ಸಿಟಿ) ಮಾರ್ಪಡುತ್ತದೆ ಎಂದು ಬೆಂಗಳೂರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಹಿರಿಯ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ಭವಿಷ್ಯ ನುಡಿದರು.
Related Articles
Advertisement
ನಾವೇ ಕೆಡಿಸುತ್ತಿದ್ದೇವೆ: ಐರೋಪ್ಯ ವಿಜ್ಞಾನಿಗಳಾದ ಟೆಸ್ಲಾ ಮತ್ತು ಐನ್‌ಸ್ಟಿನ್ ಅವರೇ ಭಗವಂತನ ಶಕ್ತಿಯನ್ನು ನಂಬಿದ್ದರು. ಸ್ಪಷ್ಟವಾಗಿ ಗೋಚರವಾಗದ ಶಕ್ತಿಯೊಂದಿದೆ ಎಂದು ಉಲ್ಲೇಖೀಸಿದ್ದರು. ಈ ಶಕ್ತಿಯನ್ನು ತಾರ್ಕಿಕ ಪರಾಮರ್ಶೆಗೆ ಒಳಪಡಿಸುತ್ತಿರುವುದು ವಿಪರ್ಯಾಸ. ಪ್ರಾಕೃತಿಕ ಸಂಪತ್ತನ್ನು ವಿವೇಚನಾರಹಿತವಾಗಿ ಬಳಸಿ ಭವಿಷ್ಯದ ಅನಾಹುತಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಡಾ. ಕೆ.ಜೆ. ರಾವ್ ಹೇಳಿದರು.
ಉಡುಪಿಗೂ ಅಪಾಯ ಕಾದಿದೆ: ಕರಾವಳಿ ಸಮುದ್ರ ಮಟ್ಟದಿಂದ 111 ಅಡಿ ಎತ್ತರದಲ್ಲಿದೆ. ಮುಂದಿನ 100-150 ವರ್ಷಗಳಲ್ಲಿ ಪರಿಸರ ಮಾಲಿನ್ಯದಿಂದ ವಾತಾವರಣದ ಉಷ್ಣಾಂಶ 1 ಡಿಗ್ರಿ ಹೆಚ್ಚಲಿದೆ. ಇದು 2 ಡಿಗ್ರಿಗೆ ಏರಿದರೆ ಸಮುದ್ರ ತೀರದ ಪ್ರದೇಶಗಳಿಗೆ ಅಪಾಯವಿದೆ. ಹಿಂದೆ ದ್ವಾರಕೆ ಮುಳುಗಿತು. ಅಲ್ಲಿಂದ ಇಲ್ಲಿಗೆ ಬಂದ ಶ್ರೀಕೃಷ್ಣನ ನಾಡು ಉಡುಪಿಗೂ ಅಪಾಯವಿದೆ ಎಂದು ಡಾ. ರಾವ್ ಎಚ್ಚರಿಸಿದರು.
ರಬ್ಬರ್ ತೋಟದ ಹಸಿರು, ಹಸಿರಲ್ಲ: ವಿಶೇಷ ಉಪನ್ಯಾಸ ನೀಡಿದ ರಾಮಚಂದ್ರ ಅವರು ಶರಾವತಿ ಯೋಜನೆಯನ್ನು 1965ರಲ್ಲಿ ನಿರ್ಮಿಸಲಾಯಿತು. 116 ವರ್ಷಗಳ ಮಳೆ ಅಂಕಿ ಅಂಶ ಇದೆ. 1965ಕ್ಕಿಂತ ಹಿಂದೆ ಮತ್ತು ಅನಂತರದ ಅಂಕಿಅಂಶ ಗಮನಿಸಿದರೆ ಮಳೆ ಕಡಿಮೆಯಾಗಿರುವುದು ತಿಳಿಯುತ್ತದೆ. ಪ. ಘಟ್ಟ ಪ್ರದೇಶದಲ್ಲಿ 3,500ರಿಂದ 4,500 ಮಿ.ಮೀ. ಮಳೆ ಬೀಳುತ್ತಿತ್ತು.
ಎಲ್ಲೆಲ್ಲಿ ಕಾಡು ನಾಶ ಮಾಡಲಾಯಿತೋ ಅಂತಹ ಪ್ರದೇಶಗಳಲ್ಲಿ ಈಗ 1,700ರಿಂದ 1,900 ಮಿ.ಮೀ. ಮಳೆ ಬೀಳುತ್ತಿದೆ. ಉತ್ತಮ ಅರಣ್ಯ ಇರುವಲ್ಲಿ 3,500ರಿಂದ 4,500 ಮಿ.ಮೀ. ಮಳೆ ಬೀಳುತ್ತದೆ ಎನ್ನುವುದು ನನ್ನ ಅಧ್ಯಯನದ ವಿಷಯ. ಸಹಜ ಅರಣ್ಯ ನಾಶ ಮಾಡಿ ರಬ್ಬರ್ ತೋಪು ಬೆಳೆಸುವುದರಿಂದ ಹಸಿರು ಉಳಿದಂತೆ ಆಗುವುದಿಲ್ಲ ಎಂದು ಡಾ.ರಾವ್ ನುಡಿದರು.
ಸೌರ ವಿದ್ಯುತ್ ಹೇರಳ ಉತ್ಪಾದನೆ ಸಾಧ್ಯವಿದ್ದರೂ ಇದರ ಸಂಗ್ರಹ ಕಷ್ಟವಾಗುತ್ತಿದೆ. ಇದಕ್ಕೆ ಬೇಕಾದ ಸಿಲಿಕಾನ್ ಸೆಲ್‌ಗಳು ದುಬಾರಿ. ಈಗ ಇದಕ್ಕೆ ಪರ್ಯಾಯವಾಗಿ ಪೆರೋಸೈಟ್ಸ್ ಬರುತ್ತಿದೆ. ಇದು ಅಗ್ಗ. ಅದಾನಿ ಸಂಸ್ಥೆಯವರು ತಮಿಳುನಾಡಿನಲ್ಲಿ ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದಾರೆ. ಭಾರತ, ಸ್ಪೇಯ್ನ, ಅಮೆರಿಕದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಬಂಡವಾಲ ಹೂಡಿಕೆ ವೃದ್ಧಿಸಿದೆ ಆಗಿದೆ ಎಂದು ಡಾ. ರಾವ್ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಬೆಂಗಳೂರಿನ ಕೆರೆ ಉಳಿಸಿಕೊಂಡಿದ್ದರೆ!: “ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸಿ ತಮ್ಮ ತಮ್ಮ ಪ್ರದೇಶದಲ್ಲಿ ಕೆರೆ, ಮದಗಗಳನ್ನು ಉಳಿಸಬೇಕು, ನಿರ್ಮಿಸಬೇಕು. ಇದರಿಂದ ನೀರಿನ ಒರತೆ ಹೆಚ್ಚಿ ನೆಲ, ಜಲ ಉಳಿಯುತ್ತದೆ. ಬೆಂಗಳೂರಿನಲ್ಲಿದ್ದ ಸಾವಿರಕ್ಕೂ ಹೆಚ್ಚಿನ ಕೆರೆಗಳನ್ನು ಉಳಿಸಿಕೊಂಡಿದ್ದರೆ ಎತ್ತಿನಹೊಳೆ ಯೋಜನೆಯ ಅಗತ್ಯವೇ ಬರುತ್ತಿರಲಿಲ್ಲ.
ಗೋಕರ್ಣದ ಕೋಟಿತೀರ್ಥವನ್ನು ಉಳಿಸಿದ ಬಗೆಯನ್ನು ನೋಡಿ. ಹಿಂದೆ ಅದು ಮಲಿನವಾಗುತ್ತಿತ್ತು. ಈಗ ಸಣ್ಣ ಎರಡು ಹೊಸ ನೀರಿನ ಹೊಂಡಗಳನ್ನು ನಿರ್ಮಿಸಿ, ಅಲ್ಲಿಗೆ ಅನ್ನ ಹಾಕಲು ತಿಳಿಸಿ ಕೋಟಿತೀರ್ಥವನ್ನು ಶುಚಿಯಾಗಿರಿಸಲು ಸೂಚಿಸಿದೆ. ಪರಿಣಾಮವಾಗಿ ಕೋಟಿತೀರ್ಥ ಪರಿಶುದ್ಧವಾಗಿ ಉಳಿದಿದೆ. ಯಾವುದೇ ನೀರು ಮಲಿನವಾದರೆ ನಾಶವಾಗುತ್ತದೆ,’ ಎಂದು ಪ್ರೊ. ಟಿ.ವಿ. ರಾಮಚಂದ್ರ ಹೇಳಿದರು.
ಹಿಂದೆ ಕೊಬ್ಬರಿ ಎಣ್ಣೆಯಿಂದ ಕೊಲೆಸ್ಟರಾಲ್ ಹೆಚ್ಚುತ್ತದೆ ಎಂಬ ಸುದ್ದಿ ಹಬ್ಬಿಸಿದ್ದರು. ಆದರೆ ಕೊಬ್ಬರಿ ಎಣ್ಣೆಯಿಂದ ಕೊಲೆಸ್ಟರಾಲ್ ಹೆಚ್ಚುವುದಿಲ್ಲ ಎಂದು ಸಂಶೋಧನಾ ವರದಿ ಬರುವುದರೊಳಗೆ 4 ಕೋಟಿ ರೂ. ಮೌಲ್ಯದ ಮಾತ್ರೆಗಳ ವ್ಯಾಪಾರ ನಡೆಯಿತು. ಡಾ. ಬಿ.ಎಂ. ಹೆಗ್ಡೆಯವರು ವಿದೇಶಗಳಲ್ಲೂ ಭಾಷಣ ಮಾಡಿ ಕೊಬ್ಬರಿ ಎಣ್ಣೆಯಿಂದ ಕೊಲೆಸ್ಟರಾಲ್ ಹೆಚ್ಚುವುದಿಲ್ಲ ಎಂದು ಹೇಳಿದ್ದಾರೆ.-ಡಾ. ಕೆ.ಜೆ. ರಾವ್, ನಿವೃತ್ತ ವಿಜ್ಞಾನಿ