ಬೆಂಗಳೂರು ಎಲ್ಲರ ಪಾಲಿಗೂ ಕನಸಿನ ನಗರಿ. ಈ ಮಹಾನಗರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು. ಸಾಧ್ಯವಾದರೆ ಕೆಲಸ ತೆಗೆದುಕೊಂಡು ಇಲ್ಲಿಯೇ ಬದುಕಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ಇಲ್ಲಿಗೆ ಬರುವವರು ಹಲವರು. ಅದರೆ, ಒಂದು ನೌಕರಿ ಹಿಡಿಯಲು ಈ ಊರಿನಲ್ಲಿ ನಡೆಸುವ ಅಲೆದಾಟ, ಆ ಸಂದರ್ಭದಲ್ಲಿ ಎದುರಾಗುವ ಸಂಕಷ್ಟಗಳು ಸಾವಿರಾರು. ಪ್ರತಿದಿನ ಎದ್ದರೆ ಸಾಕು; ತಲೆಯಲ್ಲಿ ಒಂದೇ ಟೆನÒನ್. ಕೆಲಸ, ಕೆಲಸ ಕೆಲಸ… ಎಷ್ಟು ಸಂದರ್ಶನ ಮುಗಿಸಿದರೂ ಸಿಗುವ ಉತ್ತರ ಒಂದೇ. “´ೋನ್ ಮಾಡುತ್ತೀವಿ ಹೋಗಿ ಬನ್ನಿ’! ಇದರ ನಡುವೆ ಕೆಲಮೊಮ್ಮೆ ಸುತ್ತಿದ ಜಾಗದಲ್ಲೇ ಸುತ್ತಿ ಸುತ್ತಿ ಸಿಕ್ಕಾಪಟ್ಟೆ ಬೇಸರಗೊಳ್ಳುವುದು ತೀರಾ ಸಾಮಾನ್ಯ ಎಂಬಂಥ ಸಂಗತಿ.
ಒಮ್ಮೆ ಬೆಂಗಳೂರಿನ ಒಂದು ಪ್ರತಿಷ್ಟಿತ ಕಂಪನಿಯೊಂದರ ಸಂದರ್ಶನಕ್ಕೆ ಹೋಗಬೇಕಾಗಿ ಬಂತು. ಆಗಲೇ ತಿಳಿದಿದ್ದು ಬೆಂಗಳೂರು ಎಷ್ಟು ಕಾಸ್ಟಿ$É ಅಂತ. ಒಂದು ಯೂರಿನ್ ಪಾಸ್‌ಗಾಗಿ ನಾವು ಪಾವತಿಸಿದ್ದು 526 ರೂ. ಆಶ್ಚರ್ಯ ಆಗುತ್ತಿದೆಯಲ್ಲವೇ? ಅರೆರೆ, ಬೆಂಗಳೂರು ಅ,rಂದು ದುಬಾರಿಯೇ? ಶೌಚಾಲಯ ಬಳಸಿದ್ದಕ್ಕೆ 526 ರೂ. ಪಡೆಯುವ ಆ ಜಾಗ ಎಲ್ಲಿದೆ ಅಂತ ಕೇಳುತ್ತೀರಾ? ಅದಿರುವುದು ವಸಂತನಗರದ ರೈಲ್ವೆ ಸ್ಟೇಷನ್‌ನಲ್ಲಿ! ಸಾಮಾನ್ಯವಾಗಿ ರೈಲ್ವೇ ಸ್ಟೇಷನ್ನುಗಳಲ್ಲಿ ಚಿಲ್ಲರೆ ಕಾಸು ತೆಗೆದುಕೊಳ್ಳುತ್ತಾರೆ. ಅಂಥದ್ದರಲ್ಲಿ ನಾನು 526 ರೂ. ಕೊಟ್ಟಿದ್ದೇಕೆ ಎಂಬುದರ ಹಿಂದೆ ಒಂದು ಕತೆ ಇದೆ.
ಸಂದರ್ಶನಕ್ಕೆ ಹೊರಟಿದ್ದೆ ಅಂದೆನಲ್ಲವೆ? ದಾರಿಯಲ್ಲಿ ಹೋಗುತ್ತಿದ್ದಾಗ ನನಗೆ ಶೌಚಕ್ಕೆ ಅವಸರವಾಯಿತು. ಶೌಚಾಲಯಕ್ಕೆ ಹೋಗೋಣವೆಂದರೆ ಹತ್ತಿರದಲ್ಲೆಲ್ಲೂ ಕಾಣಲಿಲ್ಲ. ರಸ್ತೆ ಬದಿ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ. ಈಗ ಏನಪ್ಪಾ ಮಾಡೋದು ಅಂತ ಯೋಚನೆ ಮಾಡಿಕೊಂಡು ಕೂತಿದ್ದಾಗ ಹತ್ತಿರದಲ್ಲೇ ರೈಲ್ವೇ ಸ್ಟೇಷನ್ ಇರೋದು ನೆನಪಿಗೆ ಬಂದಿತ್ತು. ಸೀದಾ ಒಳ ನುಗ್ಗಿ ಅಲ್ಲಿನ ಶೌಚಾಲಯಕ್ಕೆ ಹೋದೆ. ಹೋಗುವಾಗ ತಡೆಯದಿದ್ದ ಪೊಲೀಸಮ್ಮ ವಾಪಸ್ಸಾಗುವಾಗ ನಮ್ಮನ್ನು ತಡೆದರು. “ರೈಲು ಟಿಕೆಟ್ ತೋರಿಸಿ’ ಎಂದು ಕೇಳಿದರು. ನಮ್ಮ ಬಳಿ ಟಿಕೆಟ್ ಎಲ್ಲಿತ್ತು?! ನಿಜ ವಿಷಯವನ್ನು ಹೇಳಿದೆ. ಅವಳ ಮನ ಕರಗಲೇ ಇಲ್ಲ. ಬದಲಾಗಿ ಟಿಕೆಟ್ ಇಲ್ಲದೆ ನಿಲ್ದಾಣವನ್ನು ಪ್ರವೇಶಿಸಿದ್ದಕ್ಕೆ ದಂಡ ಹಾಗೂ ಶೌಚಾಲಯದ ಬಿಲ್ಲು ಸೇರಿಸಿ 526 ರೂ. ದಂಡ ವಿಧಿಸಿದರು.
ನಿಜಕ್ಕೂ ನಮಗೆ ರೈಲು ನಿಲ್ದಾಣದ ಒಳಹೋಗಲು ಟಿಕೆಟ್ ತೆಗೆದುಕೊಳ್ಳಬೇಕೆಂದು ಗೊತ್ತಿರಲಿಲ್ಲ. ಎಷ್ಟು ಕೇಳಿಕೊಂಡರೂ ಅವರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನಮ್ಮ ಬಳಿ ಇದ್ದದು ಕೇವಲ 120 ರೂ. ಅಷ್ಟೇ. ಅದನ್ನೂ ಕೊಟ್ಟು ಬರಲು ಸಿದ್ಧರಿದ್ದೆವು. ಆದರೆ, ಅವರು ಪೂರ್ತಿ ಹಣ ಕಟ್ಟುವವರೆಗೂ ಬಿಡಲಿಲ್ಲ. ಕಡೆಗೆ, ಹತ್ತಿರದಲ್ಲಿದ್ದ ಎ.ಟಿ.ಎಂ. ಗೆ ಹೋಗಿ ಸ್ನೇಹಿತನ ಕಾರ್ಡ್‌ನಿಂದ ಹಣ ಡ್ರಾ ಮಾಡಿ ಆ ಪೊಲೀಸಮ್ಮನಿಗೆ ಕೊಟ್ಟು ಬಂದೆವು. ಈ ನಡುವೆ ನನ್ನ ಸ್ನೇಹಿತ ಆ ಬಿಲ್ ´ೋಟೋ ತಗೆದು, ವಾಟ್ಸಪ್ ಗ್ರೂಪ್‌ನಲ್ಲಿ ಹಾಕಿ ಪೂರ್ತಿ ದಿನ ನಗುವಿನಲ್ಲಿ ತೇಲಿಸಿದ್ದ.
– ಚಂದ್ರಶೇಖರ ಜಿ., ಮಧುಗಿರಿ