Advertisement
ಫೆ.21ರಿಂದ 28ರವರೆಗೆ ನಡೆಯುವ ಉತ್ಸವದಲ್ಲಿ ಸುಮಾರು 60 ರಾಷ್ಟ್ರಗಳ 225ಚಲನಚಿತ್ರಗಳು ಪ್ರದರ್ಶನವಾಗಲಿವೆ. “ವಲ್ಡ…ì ಸಿನಿಮಾ’, “ಏಷ್ಯಾ ಸಿನಿಮಾ’, “ಭಾರತೀಯ
ಸಿನಿಮಾ’ ಹಾಗೂ “ಕನ್ನಡ ಸಿನಿಮಾ’ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಫೆ.28ರಂದು
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಚಿತ್ರೋತ್ಸವದ ವಿಜೇತ ಚಿತ್ರಗಳಿಗೆ ಪ್ರಶಸ್ತಿ
ಪ್ರದಾನ ಮಾಡಲಿದ್ದಾರೆ.
ಪ್ರದರ್ಶನ ಕಾಣಲಿವೆ.
Related Articles
Advertisement
“ಕನ್ನಡ ಸಿನಿಮಾ ವಿಭಾಗ’ಕ್ಕೆ 13 ಚಿತ್ರಗಳು ಆಯ್ಕೆಯಾಗಿದ್ದು, “ಅನಂತು ವರ್ಸಸ್ ನುಸ್ರತ್’, “ಅನುತ್ತರ’, “ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’, “ಬೆಳಕಿನ ಕನ್ನಡಿ’, “ಕಾನೂರಾಯಾಣ’, “ನಾತಿಚರಮಿ’, “ನೀರು’, “ಮೂಕಜ್ಜಿಯ ಕನಸುಗಳು’, “ಒಂದಲ್ಲಾ ಎರಡಲ್ಲಾ’, “ರಾಮನ ಸವಾರಿ’, “ಸಮಾನತೆಯ ಕಡೆಗೆ’, “ಸ್ಮಶಾನ ಮೌನ’, “ಸಾವಿತ್ರಿ ಬಾಯಿ ಫುಲೆ’ ಮತ್ತು “ವಿಶ್ವಮಾನವ’ ಚಿತ್ರಗಳುಇಲ್ಲಿ ಪ್ರದರ್ಶನಗೊಳ್ಳಲಿವೆ. ಅಂಬಿ ಚಿತ್ರಗಳ ಪ್ರದರ್ಶನ ಈ ಬಾರಿಯ ಚಲನ ಚಿತ್ರೋತ್ಸವದಲ್ಲಿ ರೆಬಲ್‌ಸ್ಟಾರ್ ಅಂಬರೀಶ್ ಸಿನಿಮಾ
ಜೀವನದ ಮಾಸ್ಟರ್‌ಪೀಸ್ ಚಿತ್ರಗಳಾದ “ನಾಗರಹಾವು’, “ಏಳು ಸುತ್ತಿನ ಕೋಟೆ’, “ಅಂತ’, “ಪಡುವಾರಳ್ಳಿ ಪಾಂಡವರು’, “ಶುಭಮಂಗಳ’, “ರಂಗನಾಯಕಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಪ್ರದರ್ಶನ ಸ್ಥಳ ರಾಜಾಜಿನಗರದ ಓರಾಯನ್ ಮಾಲನ ಪಿವಿಆರ್ ಸಿನಿಮಾಸ್‌ನ ಹನ್ನೊಂದು
ಸ್ಕ್ರೀನ್‌ಗಳಲ್ಲಿ ಹಾಗೂ ಚಾಮರಾಪೇಟೆಯ ಕಲಾವಿದರ ಸಂಘದ ಒಂದು ಸ್ಕ್ರೀನ್‌ನಲ್ಲಿ
ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪಾಸ್ ಶುಲ್ಕ 800 ರೂ. ಕಳೆದ ಬಾರಿಗಿಂತ, ಈ ಬಾರಿಯ ಚಲನ ಚಿತ್ರೋತ್ಸವದ ಪ್ರವೇಶ ಶುಲ್ಕ ಕಡಿಮೆ ಆಗಿದ್ದು, ಎಂಟು ದಿನದ ಪಾಸ್ 800 ರೂ.ಗೆ ಲಭ್ಯವಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ, ಚಿತ್ರೋದ್ಯಮದ ಸದಸ್ಯರಿಗೆ 400 ರೂ. ನಿಗದಿಪಡಿಸಲಾಗಿದೆ.