Advertisement

ಬಂಡೀಪುರ ರಸ್ತೆಗೆ ಕೇರಳ ಬಜೆಟ್‌ನಲ್ಲಿ ಹಣ

12:30 AM Feb 01, 2019 | Team Udayavani |

ತಿರುವನಂತಪುರ: ಬಂಡೀಪುರದಲ್ಲಿ ಯಾವುದೇ ಕಾರಣಕ್ಕೂ ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಕರ್ನಾಟಕದ ಖಡಕ್‌ ಮಾತಿನ ಹೊರತಾಗಿಯೂ ಕೇರಳ ಸರಕಾರವು ಎಲಿವೇಟೆಡ್‌ ಮಾರ್ಗಕ್ಕಾಗಿ 500 ಕೋಟಿ ರೂ. ನೀಡಿದೆ. ಗುರುವಾರ ವಿತ್ತ ಸಚಿವ ಥಾಮಸ್‌ ಐಸಾಕ್‌ ಮಂಡಿಸಿದ 2019-20ನೇ ಸಾಲಿನ ಬಜೆಟ್‌ನಲ್ಲಿ ಈ ಪ್ರಸ್ತಾವ ಮಾಡಿದ್ದಾರೆ. ಬಂಡೀಪುರದಿಂದ ವಯನಾಡು ವರೆಗೆ ಈ ಹೆದ್ದಾರಿ ನಿರ್ಮಿಸಲಾಗುತ್ತದೆ ಎಂದು ಐಸಾಕ್‌ ಪ್ರಕಟಿಸಿದ್ದಾರೆ.

Advertisement

ಆದರೆ ಈ ಯೋಜನೆಗೆ ಕರ್ನಾಟಕ ಸರಕಾರದ ತೀವ್ರ ವಿರೋಧವಿದೆ. ಎತ್ತರಿಸಿದ ಮಾರ್ಗ ಮಾಡಿದರೂ ಆನೆ, ಹುಲಿಯಂಥ ಪ್ರಾಣಿಗಳಿಗೆ ಅನನುಕೂಲವಾಗುತ್ತದೆ ಎಂದು ಹೇಳಿದೆ. ಅಲ್ಲದೆ ಈಗಾಗಲೇ ಅಭಯಾರಣ್ಯದಲ್ಲಿ ಸದ್ಯ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹತ್ತು ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ. 

ಕೇರಳ ಸರಕಾರ ಅದನ್ನು ತೆರವುಗೊಳಿಸಲು ಹಲವು ರೀತಿಯಲ್ಲಿ ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಈ ಬಗ್ಗೆ ಮೊಕದ್ದಮೆ ಹೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next