ಬ್ರಹ್ಮಾವರ: ಬಾರಕೂರು ಬಂಡೀಮಠ ಶ್ರೀಕ್ಷೇತ್ರ ನಾಗರಡಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಮತ್ತು ಚತುಃಪವಿತ್ರ ನಾಗಮಂಡಲದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.
ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕೃತ ಬಾಲಕೃಷ್ಣ ವೈದ್ಯ ಮುದ್ದೂರು, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸಮ್ಮಾನಿಸಲಾಯಿತು.
ಅತಿಥಿಯಾಗಿ ದೆಹಲಿ ಕನ್ನಡಿಗ ಪತ್ರಿಕೆಯ ಬಾಲಕೃಷ್ಣ ಸಾಮಗ ಮಾತನಾಡಿ, ರಾಜ್ಯ ಸರಕಾರ ಕನ್ನಡ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಪ್ರೋತ್ಸಾಹ ನೀಡಿದಲ್ಲಿ ಕನ್ನಡ ಶಾಲೆ ಉಳಿಯಲು ಸಹಕಾರಿಯಾಗುತ್ತದೆ. ಕೇವಲ ಭಾಷೆ ಉಳಿಸಬೇಕು ಎಂದು ಭಾಷಣದಲ್ಲಿ ಹೇಳಿದರೆ ಕನ್ನಡ ಉಳಿಯಲು ಸಾಧ್ಯವಿಲ್ಲ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ| ಪ್ರಥ್ವಿ ಭಟ್ ಬಂಡೀಮಠ, ಶ್ವೇತಾ ಎಸ್. ಪೂಜಾರಿ ಬಂಡೀಮಠ ಮೊದಲಾದವರನ್ನು ಗೌರವಿಸಲಾಯಿತು. ಬಾ. ಸಾಮಗ ಅವರನ್ನು ಸಮ್ಮಾನಿಸಲಾಯಿತು. ಪುರೋಹಿತ್ ದಾಮೋದರ ಶರ್ಮ, ತಾ.ಪಂ. ಸದಸ್ಯ ಸು ಧೀರ್ ಕುಮಾರ್ ಶೆಟ್ಟಿ, ವಿಟuಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿ ಬಿ.ಎಂ. ಭಟ್ ಪ್ರಸ್ತಾವನೆಗೈದರು. ಪದ್ಮನಾಭ್ ಭಟ್, ಶ್ರೀಧರ ಆಚಾರ್ಯ ಸಮ್ಮಾನಿತರನ್ನು ಪರಿಚಯಿಸಿ, ಶಿವರಾಮ್ ಆಚಾರ್ಯ ವಂದಿಸಿದರು. ಟಿ.ಜಿ. ಆಚಾರ್ಯ ನಿರೂಪಿಸಿದರು.
ಸ್ಥಳೀಯರಿಂದ ಮನೋರಂಜನೆ ಕಾರ್ಯಕ್ರಮ ಜರಗಿತು.