Advertisement
ನಾಗಪಂಚಮಿ, ಅಷ್ಟಮಿ. ಸೋಣ ತಿಂಗಳು, ಚೌತಿ ಹಬ್ಬಗಳೆಂದು ಒಂದರ ಹಿಂದೆ ಮತ್ತೂಂದು ಹಬ್ಬ ಸಾಲಾಗಿ ಬರುತ್ತಿವೆ. ಈ ಸಂದರ್ಭದಲ್ಲಿ ಬಾಳೆ ಹಣ್ಣಿಗೂ ಹೆಚ್ಚಿನ ಬೇಡಿಕೆ ಇರಲಿದೆ. ದೇವಸ್ಥಾನಗಳಲ್ಲಿ ಹೆಚ್ಚಾಗಿ ಕದಳಿ ಬಾಳೆ ಹಣ್ಣುಗಳನ್ನೇ ಬಳಸುವುದರಿಂದ ದರ ಏರಿಕೆಯಾಗಿದೆ.
ಬಾಳೆಹಣ್ಣಿಗೆ ಬೆಲೆ ಬಂದಿರುವುದು ಗ್ರಾಹಕರಿಗೆ ಕೊಂಚ ನಿರಾಸಕ್ತಿ ಮೂಡಿಸಿದ್ದರೂ ಕೃಷಿಕರಿಗೆ ಆಸಕ್ತಿ ಮೂಡಿಸಿದೆ. ಬಾಳೆ ಗಿಡಕ್ಕೆ ಬೇಡಿಕೆ ಹೆಚ್ಚಿದೆ. ಹಾಗಾಗಿ 15 ರೂ. ಗೆ ಇದ್ದ ಬಾಳೆಸಸಿಗೆ 25 ರೂ. ಆಗಿದೆ. ಎಲ್ಲ ಕೃಷಿಕರು ಬಾಳೆ ಕೃಷಿಯತ್ತ ಒಲವು ತೋರುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ದರ ಕಡಿಮೆಯಾಗಬಹುದು ಎನ್ನುತ್ತಾರೆ ಪಡುಪೆರಾರ ಕತ್ತಲ್‌ಸಾರ್‌ನ ಕೃಷಿಕ ಆಶೋಕ್ ಶೇಣವ.
Related Articles
ಸುಮಾರು 15 ರಿಂದ 20 ಬಾಳೆ ಗೊನೆಗಳು ಸದಾ ನೇತಾಡುತ್ತಿದ್ದವು. ಕದಳಿ ಬಾಳೆಹಣ್ಣಿಗೆ ಹೆಚ್ಚು ಬೇಡಿಕೆಯಿದೆ. ಅರಸೀಕೆರೆ, ಪುತ್ತೂರು, ತಮಿಳುನಾಡು ಕಡೆಯಿಂದ ಈ ಬಾಳೆಹಣ್ಣುಗಳು ಬರುತ್ತಿದ್ದವು.ಈಗ ಫಸಲು ಕಡಿಮೆಯಾಗಿದೆ. ತಮಿಳುನಾಡಿನ ಬಾಳೆಹಣ್ಣು ಬರುವುದಿಲ್ಲ. ಅರಸೀಕೆರೆ ಬಾಳೆಹಣ್ಣು 48 ರಿಂದ 78 ಕ್ಕೆ ಏರಿದೆ. ಈ ತನಕ ಕೆ.ಜಿ.ಗೆ 100 ರೂ.ನಂತೆ ಇದುವರೆಗೆ ಮಾರಿಲ್ಲ. ಇದೇ ಪ್ರಥಮ ಬಾರಿ ಎಂಬುದು ಬಜಪೆ ಮಾರುಕಟ್ಟೆಯ ವ್ಯಾಪಾರಿ ಫಾರೂಕ್ ಅಭಿಪ್ರಾಯ.
Advertisement