Advertisement

ಶಾಂತಿ ಕದಡುವ ಸಂಘಟನೆಗಳನ್ನು ಬ್ಯಾನ್ ಮಾಡಲಿ; ನಮ್ಮ ವಿರೋಧವಿಲ್ಲ: ಸಿದ್ದರಾಮಯ್ಯ

02:47 PM Apr 22, 2022 | Team Udayavani |

ಹುಬ್ಬಳ್ಳಿ: ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಲಿ. ಇದಕ್ಕೆ ಯಾರ ವಿರೋಧವೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಆರ್ ಎಸ್ಎಸ್, ಎಸ್ ಡಿಪಿಐ, ಎಐಎಂಐಎಂ ಇಂತಹ ಕೆಲ ಸಂಘಟನೆಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಸರ್ಕಾರಕ್ಕೆ ಧಮ್ ಇದ್ದರೆ ಈ ಸಂಘಟನೆಗಳನ್ನು ಬ್ಯಾನ್ ಮಾಡಲಿ. ಅದನ್ನು ಬಿಟ್ಟು ಅನಗತ್ಯ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.

ರಾಜ್ಯ ಗೃಹ ಸಚಿವ ಬಹು ಬೇಜವಾಬ್ದಾರಿತನದ ವ್ಯಕ್ತಿ. ಯಾವುದೇ ಹೇಳಿಕೆ ನೀಡುವ ಮೊದಲು ಜಾಗರೂಕತೆ ಮತ್ತು ಜವಾಬ್ದಾರಿಯುತವಾಗಿರಬೇಕು. ಬೆಳಿಗ್ಗೆ ಒಂದು ಹೇಳಿಕೆ ಸಂಜೆ ಒಂದು ಹೇಳಿಕೆ ನೀಡುತ್ತಿದ್ದಾರೆ. ಹೊಣೆಗಾರಿಕೆ ನಿರ್ವಹಣೆ ಮಾಡಲಾಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಬೇಕು‌. ಇಲಾಖೆ ಜವಾಬ್ದಾರಿ ಸ್ಥಾನದಲ್ಲಿರುವ ಇವರು ಸಮಾಜದಲ್ಲಿ ಶಾಂತಿ ನೆಲೆಸುವ ಕಾರ್ಯ ಮಾಡಬೇಕು. ಆದರೆ ಅಶಾಂತಿ ಮೂಡಿಸುವ, ಗೊಂದಲು ಉಂಟು ಮಾಡುವ ಕೆಲಸ ಮಾಡಬಾರದು ಎಂದು ತಿಳಿಸಿದರು.

ಇದನ್ನೂ ಓದಿ:ಗೋವಾ: 186 ಪಂಚಾಯತಿಗಳಿಗೆ ಚುನಾವಣಾ ದಿನಾಂಕ ಘೋಷಣೆ ಮಾಡಿದ ಪಂಚಾಯತ್ ಸಚಿವ

ಸಚಿವ ಆರ್. ಅಶೋಕನಿಗೆ ಹುಬ್ಬಳ್ಳಿ ಗಲಭೆಯ ಬಗ್ಗೆ ಗೊತ್ತಿದೆಯಾ?  ಅವರೇನು ಘಟನೆಯ ಪ್ರಮುಖ ಸಾಕ್ಷಿಯಾಗಿದ್ದಾರೆಯೇ? ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Advertisement

ರಾಜ್ಯ ಸರ್ಕಾರ ಮೌಲ್ವಿಗಳ ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಮೌಲ್ವಿ ತಪ್ಪು ಮಾಡಿದರೆ ಎಲ್ಲ ಮೌಲ್ವಿಗಳನ್ನು ಅದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಹುಬ್ಬಳ್ಳಿ ಗಲಭೆ ಗೆ ಪ್ರಮುಖ ವ್ಯಕ್ತಿ ಎಂದು ಹೇಳಾಲಾಗುತ್ತಿರುವ ಮೌಲ್ವಿ ಎಂಬುವುದು  ಖಾತರಿಯಿಲ್ಲ. ಸ್ಥಳೀಯರ ಪ್ರಕಾರ ಆ ವ್ಯಕ್ತಿ ಮೌಲ್ವಿ ಅಲ್ಲ. ಕೆಲ ಹೇಳಿಕೆಗಳ ಮೂಲಕ ಇನಷ್ಟು ಕೆಸರು ಎರಚುವ ಕೆಲಸವಾಗುತ್ತಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next