Advertisement

Kerala ದೇಗುಲಗಳಲ್ಲಿ ವಿಷಕಾರಿ ಅರಳಿ ಹೂಗಳ ಬಳಕೆಗೆ ನಿರ್ಬಂಧ

01:00 AM May 10, 2024 | Team Udayavani |

ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಯು ತನ್ನ ಅಧೀನದಲ್ಲಿರುವ ದೇವಾಲಯಗಳಲ್ಲಿ ಅರಳಿ ಹೂ(ಒಲಿಯಾಂಡರ್‌) ಅರ್ಪಿಸುವ ಸಂಪ್ರದಾಯವನ್ನು ನಿಲ್ಲಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹೂಗಳಲ್ಲಿರುವ ವಿಷಕಾರಕವು ಮನುಷ್ಯ, ಪ್ರಾಣಿಗಳಿಗೆ ಹಾನಿಮಾಡಬಹುದು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. “ಟಿಡಿಬಿ ಅಧೀನದ ದೇವಾಲಯಗಳಲ್ಲಿ ನೈವೇದ್ಯ ಹಾಗೂ ಪ್ರಸಾದದಲ್ಲಿ ಅರಳಿ ಹೂಗಳನ್ನು ಬಳಸದೇ ಇರಲು ನಿರ್ಧರಿಸಲಾಗಿದೆ. ಇದರ ಬದಲಾಗಿ ತುಳಸಿ, ಮಲ್ಲಿಗೆ, ದಾಸವಾಳ, ಗುಲಾಬಿ ಬಳಸಲಾಗುವುದು ಎಂದು ಟಿಡಿಬಿ ಅಧ್ಯಕ್ಷರಾದ ಪಿ.ಎಸ್‌.ಪ್ರಶಾಂತ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next