Advertisement

ಸಿಬಿಎಸ್‌ಇ ಪರೀಕ್ಷೆಯಲ್ಲಿ ಚಾಟ್‌ ಜಿಪಿಟಿಗೆ ನಿಷೇಧ

09:09 PM Feb 14, 2023 | Team Udayavani |

ನವದೆಹಲಿ : ಮುಂಬರಲಿರುವ 10 ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಕೃತಿಕಬುದ್ಧಿಮತ್ತೆ ಆಧರಿತ ಚಾಟ್‌ ಜಿಪಿಟಿ ಸೇರಿದಂತೆ ಯಾವುದೇ ತಂತ್ರಜ್ಞಾನ ಅಧರಿತ ವಸ್ತುಗಳನ್ನು ತರುವಂತಿಲ್ಲ ಎಂದು ಸೆಂಟ್ರಲ್‌ ಬೋರ್ಡ್‌ ಆಫ್ ಸೆಕೆಂಡರಿ ಎಜುಕೇಶನ್‌ (ಸಿಬಿಎಸ್‌ಇ) ಮಂಗಳವಾರ ಪ್ರಕಟಿಸಿದೆ.

Advertisement

ಪರೀಕ್ಷೆ ಕೇಂದ್ರಗಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ಗಳನ್ನು ತರುವಂತಿಲ್ಲ ಎಂದು ಇಷ್ಟು ವರ್ಷ ತಿಳಿಸಲಾಗುತ್ತಿತ್ತು. ಈ ವರ್ಷ ಅವುಗಳೊಂದಿಗೆ ಚಾಟ್‌ ಜಿಪಿಟಿ ಕೂಡ ಸೇರಿದೆ.

ಎಐ ಆಧಾರಿತ ತಂತ್ರಜ್ಞಾನವಾಗಿರುವ ಚಾಟ ಜಿಪಿಟಿ ಸಹಾಯದಿಂದ ಪರೀಕ್ಷೆಯಲ್ಲಿ ನಕಲು ಮಾಡುವ ಸಾಧ್ಯತೆಗಳಿರುವುದರಿಂದ ವಿದ್ಯಾರ್ಥಿಗಳಿಗೆ ಅವುಗಳನ್ನು ತರದಂತೆ ಸೂಚನೆ ನೀಡಲಾಗಿದೆ.

ಇನ್ನು ಪರೀಕ್ಷೆ ಹತ್ತಿರವಾಗುತ್ತಿರುವ ಹಿನ್ನೆಲೆ, ಪರೀಕ್ಷೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ನಂಬದಂತೆಯೂ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next