Advertisement

ಹಿಂದೂ ಮಹಿಳೆಯ ಮೃತದೇಹಕ್ಕೆಅವಮಾನ, ಆಕ್ರೋಶ

07:46 PM Oct 03, 2022 | Team Udayavani |

ಕರಾಚಿ: ಹಿಂದೂ ಮಹಿಳೆಯ ಮೃತದೇಹದ ಅವಶೇಷಗಳನ್ನು ಅಪವಿತ್ರಗೊಳಿಸಿದ ಕೃತ್ಯವನ್ನು ಖಂಡಿಸಿ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕಲಾಟ್‌ ಪಟ್ಟಣದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

“ಇತ್ತೀಚೆಗೆ ಹಿಂದೂ ಸಮುದಾಯದ ಮಹಿಳೆಯೊಬ್ಬರು ಮೃತಪಟ್ಟರು. ಸಂಪ್ರದಾಯದಂತೆ ಆಕೆಯ ಮೃತದೇಹವನ್ನು ಹೂಳಲಾಯಿತು. ಆದರೆ ಕೆಲವು ಕಿಡಿಗೇಡಿಗಳು ಮೃತದೇಹದ ಅವಶೇಷಗಳನ್ನು ಹೊರಗೆ ತೆಗೆದು, ಕೆಲವು ಭಾಗವನ್ನು ಸುಟ್ಟು ಹಾಕಿದ್ದಾರೆ ಮತ್ತು ಉಳಿದ ಭಾಗವನ್ನು ಬಿಸಾಡಿದ್ದಾರೆ,’ ಎಂದು ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ. “ಈ ಹಿಂದೆ ಸ್ಮಶಾನದ ದ್ವಾರವನ್ನು ಕಳುವು ಮಾಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದರು.

ಮಹಿಳೆಯ ಮೃತದೇಹವನ್ನು ಅಪವಿತ್ರಗೊಳಿಸಿದ್ದನ್ನು ಖಂಡಿಸಿ ಹಿಂದೂ ಸಮುದಾಯದ ನೂರಾರು ಜನರು ಪ್ರತಿಭಟನೆ ನಡೆಸಿದರು.  ಕಿಡಿಗೇಡಿಗಳನ್ನು ಬಂಧಿಸಿ, ಕಾನೂನುರೀತಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಪಾಕಿಸ್ತಾನದಲ್ಲಿ ಪದೇ ಪದೆ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ, ದಬ್ಟಾಳಿಕೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next