Advertisement
ರಾಹುಲ್ ಗಾಂಧಿ ಸಮಾವೇಶ ಹಿನ್ನೆಲೆ ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಎಐಸಿಸಿ ಅಧ್ಯಕ್ಷರು ಬರಲಿದ್ದಾರೆ. ಜೊತೆಗೆ ಅವಳಿ ಜಿಲ್ಲೆಯ ಎಲ್ಲಾ ಶಾಸಕರು, ಕೊಪ್ಪಳದ ಅಭ್ಯರ್ಥಿ ಕೂಡ ಬರಲಿದ್ದಾರೆ ಸಮಾವೇಶಕ್ಕೆ ಲಕ್ಷಕ್ಕಿಂತ ಅಧಿಕ ಜನ ಸೇರಲಿದ್ದಾರೆ ಎಂದರು.
Related Articles
Advertisement
ಬಳ್ಳಾರಿ: ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ನಡೆದುಕೊಂಡಿದೆ. ಈ ಹಿಂದಿನ ಎಲ್ಲಾ ಕಾಂಗ್ರೆಸ್ ಸರ್ಕಾರಗಳಲ್ಲು ನಾವು ಪ್ರಣಾಳಿಕೆಯನ್ನು ನೆರವೇರಿಸಿದೀವಿ. ಸಂವಿಧಾನದ ಮೌಲ್ಯಗಳನ್ನು ಕಾಂಗ್ರೆಸ್ ಎತ್ತಿ ಹಿಡಿಯುತ್ತದೆ ಎಂದು ಕಾಂಗ್ರಸ್ ಅಭ್ಯರ್ಥಿ ಈ ತುಕಾರಾಂ ಹೇಳಿದರು.
ಕಾಂಗ್ರೆಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಗೆ ನಾಯಕರಾದ ರಾಹುಲ್ ಗಾಂಧಿ ಬರ್ತಿದಾರೆ. ಉತ್ತರ ಕರ್ನಾಟಕಕ್ಕೆ ಇದು ಸಂದೇಶ ನೀಡುವ ಕಾರ್ಯ ಆಗಲಿದೆ. ಜನರ ಪ್ರೀತಿಯನ್ನು ಕೇಳಲು ರಾಹುಲ್ ಗಾಂಧಿ ಬರ್ತಿದಾರೆ.
ಶ್ರೀರಾಮುಲು ನಾಲ್ಕು ಬಾರಿ ಸಂಸದರಾಗಿ ವಿಫಲರಾಗಿದಾರೆ. ಕರ್ನಾಟಕ ಅತಿಹೆಚ್ಚು ತೆರಿಗೆ ಕಟ್ಟುವ ದೇಶ. ನೀತಿ ಆಯೋಗವನ್ನೇ ಬಿಜೆಪಿಯವರು ತೆಗೆದು ಹಾಕಿದಾರೆ. ನಮಗೆ ಜಿಎಸ್ ಟಿ ಹಾಗೂ ಸೆಸ್ ಅಲ್ಲಿ ಅನ್ಯಾಯ ಆಗ್ತಿದೆ. ಬರ ಪರಿಹಾರದ ವಿಚಾರದಲ್ಲಿ ಸುಪ್ರೀಂ ಕೋರ್ಟೇ ಕೇಂದ್ರಕ್ಕೆ ಛೀಮಾರಿ ಹಾಕಿದೆ. ಆದರ್ಶ ಗ್ರಾಮಗಳು ಎಲ್ಲಿವೆ, ಹೇಳಹೆಸರಿಲ್ಲದೆ ಹೋಗಿವೆ ಸ್ಮಾರ್ಟ್ ಸಿಟಿ ಯೋಜನೆ ಎಲ್ಲೋಯ್ತು..!? ಎಂದು ಶ್ರೀರಾಮುಲುಗೆ ಪ್ರಶ್ನಿಸಿದರು.