Advertisement

ಸುಸ್ಥಿರ ಪರಿಸರ ಬೆಳವಣಿಗೆ ಇಂದಿನ ಅಗತ್ಯ

09:05 PM Jun 19, 2021 | Team Udayavani |

ಬಳ್ಳಾರಿ: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಐದು ಸಾವಿರ ಸೀಡ್‌ ಬಾಲ್‌ಗ‌ಳನ್ನು ಶುಕ್ರವಾರ ಬಿತ್ತನೆ ಮಾಡಲಾಯಿತು.

Advertisement

ಸ್ಟೂಡೆಂಟ್ಸ್‌ ಫಾರ್‌ ಡೆವಲಪೆಟ್‌ (ಎಸ್‌ ಎಫ್‌ಡಿ) ರಾಜ್ಯಾದ್ಯಂತ ಹಮ್ಮಿಕೊಂಡಿರುವ ಆಕ್ಸಿಜನ್‌ ಚಾಲೆಂಜ್‌ ಕಾರ್ಯಕ್ರಮ ನಿಮಿತ್ತ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಕಾರದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವಿಎಸ್‌ಕೆ ವಿವಿ ಕುಲಪತಿ ಪ್ರೊ| ಸಿದ್ದು ಪಿ.ಅಲಗೂರು ಅವರು ಸೀಡ್‌ ಬಾಲ್‌ ಬಿತ್ತನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಸುಸ್ತಿರ ಪರಿಸರ ಬೆಳವಣಿಗೆ ಅಗತ್ಯವಾಗಿದೆ. ಕೋವಿಡ್‌ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಆಕ್ಸಿಜನ್‌ ಚಾಲೆಂಜ್‌ ಕಾರ್ಯಕ್ರಮವನ್ನು ಎಸ್‌ ಎಫ್‌ಡಿ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಇಡೀ ರಾಜ್ಯದಲ್ಲಿ ಹತ್ತು ಲಕ್ಷ ಗಿಡಗಳು ಹತ್ತು ಲಕ್ಷ ಸೀಡ್‌ ಬಾಲ್‌ ಬಿತ್ತನೆ ಕಾರ್ಯಕ್ರಮ ತುಂಬಾ ಯಶಸ್ವಿಯಾಗಲೆಂದು ಕೋರಿದರು.

ಕುಲಸಚಿವ ಪ್ರೊ| ಶಶಿಕಾಂತ್‌ ಉಡಕೇರಿ, ಸಿಂಡಿಕೇಟ್‌ ಸದಸ್ಯರಾದ ಡಾ|ಮರ್ಚೆಡ್‌ ಮಲ್ಲಿಕಾರ್ಜುನ, ಮಾಜಿ ಸಿಂಡಿಕೇಟ್‌ ಸದಸ್ಯ ಡಾ|ದೊಡ್ಡಬಸವನಗೌಡ, ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಯುವರಾಜ್‌, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿ ಕಾರಿ ಡಾ| ಗೌರಿ ಮಾಣಿಕ್‌ ಮಾನಸ, ಸ್ಕೌಟ್‌ ಆ್ಯಂಡ್‌ ಗೈಡ್‌ ಮಂಗಳ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಎಬಿವಿಪಿ ಕಾರ್ಯಕತರು ಸಸಿನೆಡುವ ಮತ್ತು ರೋಸ್‌, ಬಹುನೀಯಾ ಮತ್ತು ಗುಮಾರ್‌ ಸೀಡ್‌ ಬಾಲ್‌ ಬಿತ್ತನೆ ಮಾಡುವ ಮೂಲಕ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next