Advertisement

ಪಟ್ಟಣ ಅಭಿವೃದ್ದಿಗೆ 8.50 ಕೋಟಿ ರೂ. ಮಂಜೂರು

02:40 PM Feb 18, 2022 | Team Udayavani |

ಹರಪನಹಳ್ಳಿ: ಪಟ್ಟಣದ ಅಭಿವೃದ್ಧಿಗಾಗಿಸರ್ಕಾರದಿಂದ ಮುಖ್ಯಮಂತ್ರಿ ನಗರೋತ್ಥಾನಯೋಜನೆಯ 4ನೇ ಹಂತದಲ್ಲಿ 8.50 ಕೋಟಿರೂ. ಮಂಜೂರಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್‌ ತಿಳಿಸಿದರು.ಗುರುವಾರ ನಡೆದ ಪುರಸಭೆಯ ಸಾಮಾನ್ಯಸಭೆಯಲ್ಲಿ ಪ್ರಸ್ತಾಪಿಸಿದ ಅವರು ಈಯೋಜನೆಯ ಅನುಧಾನದಲ್ಲಿ ಪುರಸಭೆ ಹೊಸಕಚೇರಿ ನಿರ್ಮಾಣಕ್ಕೆ 3 ಕೋಟಿ ರೂ. ಹಾಗೂ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಗೆ 62 ಲಕ್ಷ ರೂ.ಮತ್ತು ಪ್ರವಾಸಿ ಮಂದಿರ ವೃತ್ತದ ಅಭಿವೃದ್ಧಿಗೆ 1ಕೋಟಿ ರೂ. ಸೇರಿ ಉಳಿದಂತೆ ಪಟ್ಟಣದ ವಿವಿಧಅಭಿವೃದ್ಧಿಗೆ ಆ ಹಣ ಬಳಸಿಕೊಳ್ಳಲಾಗುವುದುಎಂದು ಅವರು ತಿಳಿಸಿದರು.

Advertisement

ಹರಪನಹಳ್ಳಿ ಪಟ್ಟಣದ ಮೂರು ಕೆರೆಗಳಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ ಸಿದ್ಧತೆಮಾಡಿಕೊಳ್ಳುತ್ತಿದ್ದು, ಹಿರೆಕೆರೆ, ಅಯ್ಯನಕೆರೆ,ನಾಯಕನಕೆರೆ ಈ ಮೂರು ಕೆರೆಗಳನ್ನು ಸಣ್ಣನೀರಾವರಿ ಇಲಾಖೆಯಿಂದ ಪುರಸಭೆಗೆ ಹಸ್ತಾಂತರಮಾಡಿಕೊಳ್ಳಲಾಗುವುದು ಎಂದು ಮುಖ್ಯಾ ಧಿಕಾರಿಮತ್ತು ಅಧ್ಯಕ್ಷ ಮಂಜುನಾಥ್‌ ಇಜಂತ್‌ಕರ್‌ತಿಳಿಸಿದರು.

ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವಸ್ವಾಗತ ನಾಮಫಲಕದಲ್ಲಿ ವಿದ್ಯಾಸಿರಿ ನಾಡಿಗೆಸ್ವಾಗತ ಎಂದು ಬರೆಸಲು ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಹಾಗೂಅಧ್ಯಕ್ಷ ಮಂಜುನಾಥ ಇಜಂತಕರ್‌ ಅವರುಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.ಮುಖ್ಯಾ ಧಿಕಾರಿ ಎರಗುಡಿ ಶಿವಕುಮಾರ ಅವರುಪಟ್ಟಣದಲ್ಲಿ ಸಾಕಷ್ಟು ವಿವಿಧ ಶಿಕ್ಷಣ ಸಂಸ್ಥೆಗಳುಇವೆ, ಆದ್ದರಿಂದ ವಿದ್ಯಾಸಿರಿ ನಾಡು ಎಂದು ಸ್ವಾಗತಫಲಕದಲ್ಲಿ ಬರೆಸೋಣ ಎಂದು ಹೇಳಿದರು.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆವತಿಯಿಂದ ಕರಡು ವಿನ್ಯಾಸ ನಕ್ಷೆಗೆ ಅನುಮೋದನೆನೀಡುವ ಕುರಿತು ಎನ್‌ಒಸಿ ಪಡೆಯಬೇಕು ಎಂದುಆಕ್ಷೇಪ ವ್ಯಕ್ತಪಡಿಸಿ ಈಚೆಗೆ ಜಿಲ್ಲಾಧಿ ಕಾರಿಯವರಿಗೆಲಿಖೀತ ದೂರು ನೀಡಿರುವ ಸದಸ್ಯರಾದ ಜಾಕೀರ್‌ಹುಸೇನ್‌, ಭರತೇಶ್‌ ಸೇರಿ ನಾಲ್ಕು ಜನ ಸದಸ್ಯರುಮತ್ತು ಇತರೆ ಸದಸ್ಯರ ನಡುವೆ ಈ ವಿಚಾರ ಕುರಿತುಸ್ವಲ್ಪ ಹೊತ್ತು ವಾಗ್ವಾದ ನಡೆಯಿತು.

ನಂತರ ಅಧ್ಯಕ್ಷಮಂಜುನಾಥ ಇಜಂತಕರ್‌ ಅವರು ಈ ವಿಚಾರಕ್ಕೆಸಂಬಂಧಪಟ್ಟಂತೆ ಕೂಲಂಕಷವಾಗಿ ಪರಿಶೀಲಿಸಿಬಳಿಕ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುಎಂದು ಹೇಳಿದಾಗ ಆ ಚರ್ಚೆ ಅಂತ್ಯಗೊಂಡಿತು.

Advertisement

ಸಿಎ ಸೈಟ್‌ ಮಂಜೂರಿಗೆ ಅನುಮೋದನೆ: ತಾಲೂಕುಉಪ್ಪಾರ ಸಂಘ, ಗಂಗಾಮತ ಸಂಘ, ಪ್ರಾಥಮಿಕಶಾಲಾ ಶಿಕ್ಷಕರ ಸಂಘಗಳಿಗೆ ಸಮುದಾಯಭವನ, ಕಚೇರಿ ಕಟ್ಟಡ, ವಸತಿ ನಿಲಯಗಳನ್ನುನಿರ್ಮಿಸಿಕೊಳ್ಳಲು ನಾಗರಿಕ ಸೌಲಭ್ಯಕ್ಕಾಗಿಕಾಯ್ದಿರಿಸಿದ(ಸಿಎ) ನಿವೇಶನಗಳನ್ನು ಮಂಜೂರುಮಾಡಲು ತೀರ್ಮಾನಿಸಲಾಯಿತು. ಉಪಾಧ್ಯಕ್ಷೆಭೀಮವ್ವ ಸಣ್ಣ ಹಾಲಪ್ಪ , ಹಿರಿಯ ಆರೋಗ್ಯನಿರೀಕ್ಷಕ ಮಂಜುನಾಥ, ಕಿರಿಯ ಆರೋಗ್ಯನಿರೀಕ್ಷಕಿ ಶೋಭಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next