Advertisement

ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಕೊಡಿ

02:33 PM Feb 16, 2022 | Team Udayavani |

ಬಳ್ಳಾರಿ: ತೆರವುಗೊಳಿಸಿರುವ ಬೀದಿಬದಿಅಂಗಡಿಗಳನ್ನು ಪುನಃ ನಡೆಸಲು ಅವಕಾಶ ಕಲ್ಪಿಸುವಂತೆಆಗ್ರಹಿಸಿ ರಾಜ್ಯ ಡಾ| ಬಾಬು ಜಗಜೀವನ್‌ರಾಮ್‌ಯುವಜನ ಜಾಗೃತಿ ವೇದಿಕೆ ನೇತೃತ್ವದಲ್ಲಿ ಬೀದಿಬದಿವ್ಯಾಪಾರಿಗಳು ಡಿಸಿ ಕಚೇರಿ ಎದುರು ಮಂಗಳವಾರಪ್ರತಿಭಟನೆ ನಡೆಸಿದರು.

Advertisement

ನಗರದ ತಹಶೀಲ್ದಾರ್‌ ಕಚೇರಿ, ಜಿಲ್ಲಾಧಿಕಾರಿ,ಅಂಚೆ ಕಚೇರಿ ಕಾಂಪೌಂಡ್‌ಗೆ ಹೊಂದಿಕೊಂಡು, ಟೀ,ಬಿರ್ಯಾನಿ ಬಂಡಿ, ಹಣ್ಣಿನ ಬಂಡಿ, ಬಟ್ಟೆಗಳ ಮಾರಾಟಸೇರಿ ಇನ್ನಿತರೆ ಅಂಗಡಿಗಳು ಇದ್ದವು. ಬೀದಿ ಬದಿಯಲ್ಲಿಹಲವು ವರ್ಷಗಳಿಂದ ಇರುವ ಈ ಅಂಗಡಿಗಳಿಂದಲೇವ್ಯಾಪಾರಿಗಳು ಬದುಕು ಸಾಗಿಸುತ್ತಿದ್ದಾರೆ.ಕುಟುಂಬದ ಜೀವನೋಪಾಯಕ್ಕೂ ಈ ಅಂಗಡಿಯೇಆಸರೆಯಾಗಿದೆ.

ಆದರೆ, ರಸ್ತೆಯಲ್ಲಿ ಸಂಚಾರಕ್ಕೆಅಡ್ಡಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳ ಸೂಚನೆಮೇರೆಗೆ ಪಾಲಿಕೆ ಸಿಬ್ಬಂದಿ ಈ ಎಲ್ಲ ಅಂಗಡಿಗಳನ್ನುತೆರವುಗೊಳಿಸಿದ್ದಾರೆ. ವ್ಯಾಪಾರ ಮಾಡದಂತೆ ನಿರ್ಬಂಧಹೇರಿದ್ದಾರೆ. ಇದರಿಂದ ವ್ಯಾಪಾರಿಗಳು ಅತಂತ್ರಪರಿಸ್ಥಿತಿ ಎದುರಿಸುವಂತಾಗಿದ್ದು, ಜಿಲ್ಲಾದಿಕಾರಿಗಳುಮಾನವೀಯ ದೃಷ್ಟಿಯಿಂದಲಾದರೂ, ಬೀದಿಬದಿಅಂಗಡಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕುಎಂದು ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್‌ ಕರ್ಚೇಡುಆಗ್ರಹಿಸಿದ್ದಾರೆ.

ತಹಶೀಲ್ದಾರ್‌ ಕಚೇರಿ, ಡಿಸಿ, ಅಂಚೆ ಕಚೇರಿಬಳಿಯ ರಸ್ತೆ ಬದಿಯಲ್ಲಿನ ಈ ಟೀ, ಬಿರ್ಯಾನಿಬಂಡಿಗಳ ವ್ಯಾಪಾರಿಗಳಿಗೆ ಬಳ್ಳಾರಿ ಮಹಾನಗರಪಾಲಿಕೆ ಪರವಾನಿಗೆ ನೀಡಿದೆ. ಪಾಲಿಕೆಯ ಈಪರವಾನಗಿ ಆಧಾರದ ಮೇಲೆ ಸಾಲಸೋಲಮಾಡಿ ಅಂಗಡಿಗಳನ್ನು ನಡೆಸುತ್ತಿದ್ದೇವೆ. ಕಳೆದೆರಡುವರ್ಷಗಳಿಂದ ಕಾಡುತ್ತಿರುವ ಕೋವಿಡ್‌ ಸೋಂಕು,ಲಾಕ್‌ಡೌನ್‌ನಿಂದ ವ್ಯಾಪಾರವಿಲ್ಲದೇ ಕಂಗೆಟ್ಟಿದ್ದಬೀದಿಬದಿ ವ್ಯಾಪಾರಿಗಳು, ಇದೀಗ ಒಂದಷ್ಟುಚೇತರಿಸಿಕೊಳ್ಳುವಷ್ಟರಲ್ಲೇ ಜಿಲ್ಲಾಡಳಿತ ಅಂಗಡಿಗಳನ್ನುತೆರವುಗೊಳಿಸುವ ಮೂಲಕ ಗಾಯದ ಮೇಲೆಬರೆ ಎಳೆದಿದೆ.

ಅಂಗಡಿ ತೆರವಿನಿಂದ ಜೀವನನಿರ್ವಹಣೆ ಕಷ್ಟವಾಗಲಿದ್ದು, ಮಕ್ಕಳ ವಿದ್ಯಾಭ್ಯಾಸ,ಪಾಲನೆ, ಪೋಷಣೆಯೂ ಕಷ್ಟವಾಗಲಿದೆ. ಹಾಗಾಗಿಮಾನವೀಯ ದೃಷ್ಟಿಯಿಂದ ಇವರಿಗೆ ಅಂಗಡಿಗಳನ್ನುನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಎಂದುಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ವ್ಯಾಪಾರಿಗಳಾದ ಮಹ್ಮದ್‌ರಿಯಾಜ್‌, ಎರ್ರಿಸ್ವಾಮಿ, ಓಬಳಪತಿ, ಮನ್ಸೂರ್‌,ಖಾಜಾ, ಸಲ್ಮಾ, ಅಯ್ಯನಗೌಡ, ಸುಭಾಶ್‌ಹನುಮಂತ, ಅಲಿ, ಉಸ್ಮಾನ್‌ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next