ಬಳ್ಳಾರಿ: ರಾಜ್ಯದಲ್ಲಿ ಕೋಮುಸೌಹಾರ್ದತೆ ಮತ್ತು ಸಹಬಾಳ್ವೆಗೆಧಕ್ಕೆ ತರುವ ರೀತಿಯಲ್ಲಿ ಕಳೆದಕೆಲ ದಿನಗಳಿಂದ ನಡೆಯುತ್ತಿರುವಘಟನೆಗಳು ಮತ್ತು ಅದನ್ನು ರಾಜ್ಯ ಬಿಜೆಪಿಸರ್ಕಾರ ನಿಭಾಯಿಸಿದ ರೀತಿಯನ್ನುಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾಸಮಿತಿ ತೀವ್ರವಾಗಿ ಖಂಡಿಸಿದೆ.ಈ ಕುರಿತು ಪ್ರಕಟಣೆ ನೀಡಿರುವಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಉಪಾಧ್ಯ, ಶಾಲಾ ಕಾಲೇಜುಗಳಲ್ಲಿ,ಸರ್ಕಾರಿ ಕಚೇರಿಗಳಲ್ಲಿ, ವಿಧಾನಸೌಧದಲ್ಲೂ ಧಾರ್ಮಿಕ ಆಚರಣೆಗಳಿಗೆಅವಕಾಶ ನೀಡಿವೆ.
ಸರ್ಕಾರದ ಆರ್ಥಿಕನೆರವಿನಲ್ಲಿ ನಡೆಯುವ ಸಂಸ್ಥೆಗಳಲ್ಲಿಧಾರ್ಮಿಕ ಆಚರಣೆ ಸಲ್ಲದುಎಂಬ ಪ್ರಜಾಸತ್ತಾತ್ಮಕ ಸಂವಿಧಾನದಆಶಯಕ್ಕೆ ಧಕ್ಕೆ ತಂದಿವೆ. ಅಷ್ಟೇ ಅಲ್ಲದೆಆಡಳಿತ ಪಕ್ಷಗಳು ತಮ್ಮ ಕ್ಷುಲ್ಲಕಓಟಿನ ರಾಜಕಾರಣಕ್ಕಾಗಿ ಒಂದಲ್ಲಒಂದು ಜಾತಿ, ಮತೀಯ ಕೋಮಿಗೆಬೆಂಬಲ ನೀಡುವುದು ಮತ್ತು ಇತರೆಕೋಮುಗಳ ವಿರುದ್ಧ ಎತ್ತಿಕಟ್ಟುತ್ತಾಕೋಮುವಾದವನ್ನೂ ಬೆಳೆಸಿವೆ ಎಂದುಅವರು ಆರೋಪಿಸಿದ್ದಾರೆ.ಶಾಲಾ ಕಾಲೇಜುಗಳಲ್ಲಿ ಎಲ್ಲ ತರಹದಧಾರ್ಮಿಕ ಆಚರಣೆಗಳೂ ಜರುಗುತ್ತಿವೆ.
ಆದರೆ ಹಠಾತ್ತಾಗಿ ಹಿಜಾಬ್‌ಧರಿಸುವಂತಹ ಭಾವನಾತ್ಮಕ ವಿಷಯದಸುತ್ತ ವಿವಾದ ಹುಟ್ಟು ಹಾಕಲಾಯಿತು.ನಿಷ್ಪಕ್ಷಪಾತವಾಗಿರಬೇಕಾಗಿದ್ದ ಸರ್ಕಾರಒಂದು ಕಣ್ಣಿಗೆ ಬೆಣ್ಣೆ ಇನ್ನೊಂದುಕಣ್ಣಿಗೆ ಸುಣ್ಣ ಎಂಬ ಧೋರಣೆತಳೆಯಿತು.
ಇಂಥ ದುರುದ್ದೇಶದಿಂದಎಳೆಯ ಮನಸ್ಸುಗಳನ್ನುಕಲುಷಿತಗೊಳಿಸಲಾಯಿತು. ಸ್ಪಷ್ಟವಾಗಿಕಾನೂನಿನ ಉಲ್ಲಂಘನೆ ಮಾಡುತ್ತಿರುವ”ವಿದ್ಯಾರ್ಥಿಗಳ’ ವಿರುದ್ಧ ಯಾವುದೇಕ್ರಮ ಕೈಗೊಳ್ಳದೇ ಪರಿಸ್ಥಿತಿಯನ್ನುಬಿಗಡಾಯಿಸಲು ಬಿಡಲಾಯಿತು.ಇಷ್ಟೇ ಸಾಲದೆಂಬಂತೆ ಸರ್ಕಾರಹಾಗೂ ಆಡಳಿತ ಪಕ್ಷದ ಅನೇಕನಾಯಕರು ಇಂಥ ದುಷ್ಕೃತ್ಯಗಳಪರವಾಗಿ ನಿಲುವು ತಳೆದು ನಿಂತದ್ದುರಾಜ್ಯವ್ಯಾಪಿಯಾಗಿ ಸಂಕ್ಷೋಭೆಯವಾತಾವರಣವನ್ನು ಸೃಷ್ಟಿಸಿತು ಮತ್ತುಕೋಮು ಸಾಮರಸ್ಯಕ್ಕೆ ಹೆಸರಾಗಿದ್ದರಾಜ್ಯದ ಘನತೆಗೆ ವಿಶ್ವದಾದ್ಯಂತ ಕಳಂಕತಂದೊಡ್ಡಲಾಯಿತು.
ಕುವೆಂಪು, ತೇಜಸ್ವಿ,ಕೊಡಗಿನ ಗೌರಮ್ಮ, ಪಂಡಿತ ತಾರಾನಾಥ್‌ಮೊದಲಾದವರಿಂದ ಶ್ರೀಮಂತವಾದಕರ್ನಾಟಕದ ಸೌಹಾರ್ದ ಪರಂಪರೆಗೆಧಕ್ಕೆ ತರಲಾಗಿದ್ದು, ರಾಜ್ಯ ಸರ್ಕಾರಈ ಕೂಡಲೇ ಇಂಥ ದುಷ್ಕೃತ್ಯಗಳನ್ನುಕೊನೆಗೊಳಿಸಬೇಕು ಎಂದವರುಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.