Advertisement

75 ಕೋಟಿ ಸೂರ್ಯ ನಮಸ್ಕಾರ

06:26 PM Feb 05, 2022 | Team Udayavani |

ಬಳ್ಳಾರಿ: ನಗರದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿಭಾರತ ಸ್ವಾತಂತ್ರÂದ ಅಮೃತ ಮಹೋತ್ಸವ ನಿಮಿತ್ತ 75ಕೋಟಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.ಪತಂಜಲಿ ಯೋಗ ಸಮಿತಿ ವತಿಯಿಂದಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಸಮಿತಿಯ ಇಸ್ವಿ ಪಂಪಾಪತಿಮಾತನಾಡಿ, ಯೋಗಾಸನ, ಲಘು ವ್ಯಾಯಾಮ,ಶುಚಿಕರ ಮತ್ತು ಪೌಷ್ಠಿಕ ಆಹಾರ ಪ್ರತಿಯೊಬ್ಬರಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದುಅಭಿಪ್ರಾಯಪಟ್ಟರು.ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಮಂಜುನಾಥಮಾತನಾಡಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚಿ ರಾಜಶೇಖರ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಯಲ್ಲಿಯೋಗಾಭ್ಯಾಸ, ವ್ಯಾಯಾಮ ಮತ್ತು ಕ್ರೀಡೆಗಳಲ್ಲಿಯೂಆಸಕ್ತಿ ತೋರಿಸಬೇಕು ಎಂದು ಕಿವಿಮಾತು ಹೇಳಿದರು.

ಯೋಗ ತರಬೇತುದಾರರಾದ ಬಸವನಗೌಡ,ಸಿಂಧವಾಳ ಮಹೇಶ ಗೌಡ, ಪ್ರಕಾಶ್‌, ಜಿ.ರುದ್ರಮುನಿ,ಸೂರ್ಯನಾರಾಯಣ ಮಕ್ಕಳಿಗೆ ಯೋಗಾಭ್ಯಾಸಮಾಡಿಸಿದರು. ಉಪನ್ಯಾಸಕ ಶಿವರಾಜ್‌ ನಿರೂಪಿಸಿದರು.ವಿದ್ಯಾರ್ಥಿನಿ ನಿಖೀತ ವಂದಿಸಿದರು. ಕಾಲೇಜಿನ ಎಲ್ಲವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next