Advertisement

ಕುಲಪತಿ ವಿರುದ್ಧ ಕ್ರಮಕ್ಕೆ ಅಲ್ಲಂ ಪತ್ರ

06:31 PM Oct 07, 2021 | Team Udayavani |

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯವಿವಿ ಕುಲಪತಿಗಳ ವಿರುದ್ಧ ವಿದ್ಯಾವಿಷಯಕ ಪರಿಷತ್‌ಸದಸ್ಯರಾಗಿ ನಾಮನಿರ್ದೇಶನಗೊಂಡಿರುವವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪಅಸಮಾಧಾನಗೊಂಡಿದ್ದು, ಕ್ರಮಕ್ಕೆ ಒತ್ತಾಯಿಸಿಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

Advertisement

ವಿವಿ ಕುಲಪತಿಗಳು ವಿದ್ಯಾವಿಷಯಕ ಪರಿಷತ್‌ಸದಸ್ಯರಾಗಿ ನಾಮನಿರ್ದೇಶಿತ ಗೊಂಡಿರುವತಮ್ಮನ್ನು ನಿರ್ಲಕ್ಷಿಸಿದ್ದು ಅಗೌರವ ತೋರಿದ್ದಾರೆ.ಹೀಗಾಗಿ ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಹಾಲಿ ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪನವರು, ಜಿಲ್ಲೆಯ ಹಿರಿಯಮುಖಂಡರು, ಮುತ್ಸದ್ದಿ ರಾಜಕಾರಣಿಯೂಆಗಿದ್ದಾರೆ. ಕಳೆದ ಐದು ದಶಕಗಳಿಂದರಾಜಕಾರಣದಲ್ಲಿರುವ ಇವರು, ವಿಧಾನಸಭೆಗೆಆಯ್ಕೆಯಾಗಿ ಶಾಸಕರಾಗಿ, ವಿಧಾನ ಪರಿಷತ್‌ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಷ್ಟ್ರೀಯ(ಕಾಂಗ್ರೆಸ್‌) ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿಯೂಕಾರ್ಯನಿರ್ವಹಿಸಿದ್ದಾರೆ. ಹೀಗೆ ರಾಜಕೀಯ,ಆಡಳಿತಾತ್ಮಕವಾಗಿ ಇಷ್ಟೆಲ್ಲ ಅನುಭವವುಳ್ಳ ಅಲ್ಲಂವೀರಭದ್ರಪ್ಪನವರನ್ನು ರಾಜ್ಯ ಸರ್ಕಾರ ವಿಎಸ್‌ಕೆ ವಿವಿ ವಿದ್ಯಾವಿಷಯಕ ಪರಿಷತ್‌ ಸದಸ್ಯರನ್ನಾಗಿನಾಮ ನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.ಆದರೆ ಅಧಿ ಸೂಚನೆ ಹೊರಡಿಸುವಲ್ಲಿ ಮತ್ತು ಈಕುರಿತು ವೀರಭದ್ರಪ್ಪನವರಿಗೆ ಪತ್ರ ಕಳುಹಿಸುವಲ್ಲಿಕುಲಪತಿಗಳು ನಿರ್ಲಕ್ಷ್ಯ ವಹಿಸಿರುವ ಬಗ್ಗೆಸಾರ್ವಜನಿಕ ವಲಯದಲ್ಲಿ ಅಸಮಾಧಾನವ್ಯಕ್ತವಾಗುತ್ತಿದೆ.

ಏನದು ನಿರ್ಲಕ್ಷ್ಯ?: ಹಾಲಿ ವಿಧಾನಪರಿಷತ್‌ ಸದಸ್ಯಅಲ್ಲಂ ವೀರಭದ್ರಪ್ಪರನ್ನು ಬಳ್ಳಾರಿ ವಿಎಸ್‌ಕೆ ವಿವಿವಿದ್ಯಾವಿಷಯಕ ಪರಿಷತ್‌ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಕಳೆದ 2020 ಜೂನ್‌ 12ರಂದುಆದೇಶ ಹೊರಡಿಸಲಾಗಿದೆ. ಮೂರು ವರ್ಷ ಅವಧಿಯ ಈ ಸ್ಥಾನಕ್ಕೆ ಹಿಂದಿನ ಸದಸ್ಯ ಕೆ.ಸಿ.ಕೊಂಡಯ್ಯಅವರ ಅವ ಧಿ ಪೂರ್ಣಗೊಂಡಿದ್ದರಿಂದ ಅಲ್ಲಂವೀರಭದ್ರಪ್ಪರನ್ನು ನೇಮಿಸಲಾಯಿತು.

Advertisement

ಆದರೆ, ಕೂಡಲೇ ಕ್ರಮ ಕೈಗೊಳ್ಳದ ವಿವಿಕುಲಪತಿಗಳು, ಸರ್ಕಾರದ ಆದೇಶ ಬಂದುಎರಡು ತಿಂಗಳ ಬಳಿಕ 2020 ಆಗಸ್ಟ್‌ 17ರಂದುಅ ಧಿಸೂಚನೆ ಹೊರಡಿಸಿ ನಾಲ್ಕು ತಿಂಗಳ ಈಪತ್ರವನ್ನು ಸಾಮಾನ್ಯ ಅಂಚೆ ಮೂಲಕ ಅಲ್ಲಂವೀರಭದ್ರಪ್ಪರಿಗೆ ಕಳುಹಿಸಿದ್ದಾರೆ.

ಈ ಪತ್ರವು2020 ಡಿಸೆಂಬರ್‌ 1ರಂದು ಅವರ ಕೈಸೇರಿದೆ. ಈಅವ ಧಿಯೊಳಗೆ ನಡೆದಿರುವ ಪರಿಷತ್‌ ಸಭೆಗಳಮಾಹಿತಿಯನ್ನು ಸಹ ಅಲ್ಲಂ ವೀರಭದ್ರಪ್ಪರಗಮನಕ್ಕೆ ತರುವಲ್ಲೂ ನಿರ್ಲಕ್ಷ Â ತೋರಲಾಗಿದೆ.ಕುಲಪತಿಗಳು ಎರಡೂ¾ರು ಸಭೆಗಳನ್ನು ಸಹನಡೆಸಿರುವುದು ವೀರಭದ್ರಪ್ಪರ ಅಸಮಾಧಾನಕ್ಕೆಕಾರಣವಾಗಿದೆ.

ಸಚಿವರಿಗೆ, ಹಕ್ಕು ಬಾಧ್ಯತಾ ಸಮಿತಿಗೆ ಪತ್ರ:ಅಧಿ ಸೂಚನೆ ಹೊರಡಿಸಿದ ಪತ್ರವನ್ನುಕಳುಹಿಸುವಲ್ಲಿ ನಿರ್ಲಕ್ಷ Â ವಹಿಸಿರುವ ವಿಎಸ್‌ಕೆವಿವಿ ಕುಲಪತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಅಲ್ಲಂ ವೀರಭದ್ರಪ್ಪನವರು 2020 ಡಿಸೆಂಬರ್‌4ರಂದು ವಿಧಾನ ಪರಿಷತ್‌ ಹಕ್ಕು ಬಾಧ್ಯತಾಸಮಿತಿಗೆ ಮತ್ತು ಅದೇ ತಿಂಗಳು 28ರಂದು ಉನ್ನತಶಿಕ್ಷಣ ಸಚಿವ, ಅಂದಿನ ಉಪಮುಖ್ಯಮಂತ್ರಿಡಾ|ಅಶ್ವಥ್‌ ನಾರಾಯಣ ಅವರಿಗೆ ಪತ್ರಬರೆದಿದ್ದಾರೆ.

ಕುಲಪತಿಗಳ ವಿರುದ್ಧ ಅಗತ್ಯಕ್ರಮ ಕೈಗೊಳ್ಳುವವರೆಗೂ ವಿವಿಯ ಯಾವುದೇಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದೂಪತ್ರದಲ್ಲಿ ತಿಳಿಸಿದ್ದಾರೆ. ಇವರಿಂದ ಯಾವುದೇಪ್ರತಿಕ್ರಿಯೆ ಬಂದಿಲ್ಲವಾದರೂ, ಎಚ್ಚೆತ್ತುಕೊಂಡಿರುವಕುಲಪತಿಗಳು, ಅಲ್ಲಂ ವೀರಭದ್ರಪ್ಪನವರಮನವೊಲಿಸಲು ಮುಂದಾಗಿದ್ದಾರೆ.

ಹಿಂದಿನಕುಲಸಚಿವರಿಂದ ಈ ತಪ್ಪಾಗಿದೆ ಎಂದುಒಪ್ಪಿಕೊಂಡಿದ್ದಾರೆ. ತಪ್ಪೆಸಗಿದವರಿಂದ ಕ್ಷಮಾಪಣಾಪತ್ರ ಕೊಡಿಸುವಂತೆ ಅಲ್ಲಂ ತಿಳಿಸಿದ್ದಾರೆ. ಆದರೆ,ಈ ವರೆಗೂ ಅದು ಆಗಿಲ್ಲ. ಮೇಲಾಗಿ ಈಚೆಗೆಕುಲಸಚಿವರು ಪುನಃ ದೂರವಾಣಿ ಕರೆ ಮಾಡಿಸಭೆಗೆ ಆಹ್ವಾನಿಸಿದರೂ ಅವರು ಬಂದಿಲ್ಲ.

ಮೂರು ವರ್ಷದ ಅವ ಧಿಯಲ್ಲಿ ಈಗಾಗಲೇಒಂದೂವರೆ ವರ್ಷ ಮುಗಿದಿದ್ದು, ಕುಲಪತಿಗಳುತಮ್ಮ ನಿರ್ಲಕ್ಷ್ಯವನ್ನು ಮುಂದುವರೆಸುವರೋ ಮುಕ್ತಾಯಗೊಳಿಸುವರೋ ಕಾದು ನೋಡಬೇಕಾಗಿದೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next