ಬಳ್ಳಾರಿ: ಶ್ರೀಮಂತಿಕೆಗಿಂತಬಡತನದಲ್ಲಿಯೇ ಹೆಚ್ಚಿನ ನೆಮ್ಮದಿಇರುತ್ತದೆ ಎಂದು ಮಾಜಿ ಶಾಸಕನಾರಾ ಸೂರ್ಯನಾರಾಯಣ ರೆಡ್ಡಿಅಭಿಪ್ರಾಯ ಪಟ್ಟರು.
ನಗರದ ಎಪಿಎಂಸಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ,ದಲ್ಲಾಳಿ ವರ್ತಕರ ಸಂಘ, ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಸಹಯೋಗದಲ್ಲಿಬುಧವಾರ ಹಮ್ಮಿಕೊಂಡಿದ್ದ ರೈತಣ್ಣನಊಟ, ರೈತಣ್ಣನ ಹಾಸಿಗೆ, ರೈತಣ್ಣನಆರೋಗ್ಯ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.
ನಾನೂ ಕೂಡ ಬಡ ರೈತಕುಟುಂಬದಿಂದ ಬಂದಿದ್ದೇನೆ. ಅತ್ಯಂತಕಡು ಬಡತನವನ್ನು ಕಂಡಿದ್ದೇನೆ.ಜೊತೆಯಲ್ಲಿ ಶ್ರೀಮಂತಿಕೆಯನ್ನುಅನುಭವಿಸುತ್ತಿದ್ದೇನೆ. ನನ್ನಅನುಭವದಲ್ಲಿ ಶ್ರೀಮಂತಿಕೆಗಿಂತಬಡತನದಲ್ಲಿಯೇ ಹೆಚ್ಚಿನ ನೆಮ್ಮದಿಇರುತ್ತದೆ. ರೈತರಿಗಾಗಿ ಮಧ್ಯಾಹ್ನದಭೋಜನದ ವ್ಯವಸ್ಥೆ ಮಾಡಿರುವುದು ಅನುಕರಣೀಯವಾಗಿದೆ. ದಾನದಲ್ಲಿರುವ ಸುಖ ಭೋಗದಲ್ಲಿರದು ಎಂದುತಿಳಿಸಿದರು.
ಅಧ್ಯಕ್ಷತೆ ವಹಿಸಿ ಎಪಿಎಂಸಿನಿರ್ದೇಶಕ ಕರಿಗೌಡ ಮಾತನಾಡಿ,ಇಂಥ ಸಮಾಜಮುಖೀ ಕಾರ್ಯಗಳಿಗೆನಮ್ಮ ಸಹಕಾರ ಇರುತ್ತದೆ ಎಂದುಭರವಸೆ ನೀಡಿದರು. ಸಂಸ್ಥೆ ಅಧ್ಯಕ್ಷಸಿ.ಶ್ರೀನಿವಾಸ್‌ರಾವ್ ಮಾತನಾಡಿ,ರೈತರ ಆರೋಗ್ಯ ಸುರಕ್ಷತೆಗಾಗಿ ರೈತಣ್ಣಆಸ್ಪತ್ರೆಯನ್ನು ಆರಂಭಿಸಿದ್ದೇವೆ ಎಂದರು.ಸಂಸ್ಥೆ ಗೌರವ ಕಾರ್ಯದರ್ಶಿ ಯಶ್‌ವಂತ್‌ರಾಜ್ ನಾಗಿರೆಡ್ಡಿ ಮಾತನಾಡಿ,ಸದ್ಯ ರೈತ ಭವನದಲ್ಲಿ ಈ ವ್ಯವಸ್ಥೆಮಾಡಿದ್ದೇವೆ.
ಆಸ್ಪತ್ರೆ ಪಕ್ಕದಲ್ಲಿನ ಖಾಲಿನಿವೇಶನವನ್ನು ಸಂಸ್ಥೆಗೆ ಮಂಜೂರುಮಾಡಿದರೆ ಇನ್ನಷ್ಟು ಸಾಮಾಜಿಕ ಸೇವೆಮಾಡಲು ಅನುಕೂಲವಾಗಲಿದೆಎಂದು ಇದೇ ವೇಳೆ ನಿರ್ದೇಶಕರಿಗೆಮನವಿ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯಹಿರಿಯ ಉಪಾಧ್ಯಕ್ಷ ಬಿ.ಮಹರುದ್ರಗೌಡ, ಉಪಾಧ್ಯಕ್ಷ ಎ.ಮಂಜುನಾಥ, ಉಪಾಧ್ಯಕ್ಷ ರಮೇಶ್‌ಬುಜ್ಜಿ, ಇನ್ನೋರ್ವ ಉಪಾಧ್ಯಕ್ಷರುಹಾಗೂ ರೈತ ಕಲ್ಯಾಣ ಕಮಿಟಿ ಮುಖ್ಯಸ್ಥಕೆ.ಸಿ. ಸುರೇಶ್ ಬಾಬು ಇತರರುಇದ್ದರು.