Advertisement

ಗಾಂಧೀಜಿ ವಿಚಾರಧಾರೆ ಪಸರಿಸುವ ಕೆಲಸವಾಗಲಿ

03:16 PM Aug 15, 2022 | Team Udayavani |

ಬಳ್ಳಾರಿ: ನಗರದ ಡಿಸಿ ಕಚೇರಿ ಆವರಣದಲ್ಲಿನೂತನವಾಗಿ ನಿರ್ಮಾಣಗೊಂಡು ಕಳೆದಒಂದು ವರ್ಷದಿಂದ ಉದ್ಘಾಟನೆ ಭಾಗ್ಯ ಕಾಣದ”ಗಾಂಧಿ ಭವನ’ ಕಟ್ಟಡವನ್ನು ಕೊನೆಗೂ ಆಜಾದಿಕಾ ಅಮೃತ ಮಹೋತ್ಸವದಲ್ಲಿ ಸಾರಿಗೆ, ಜಿಲ್ಲಾಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರುಲೋಕಾರ್ಪಣೆಗೊಳಿಸಿದರು.ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿಮಾತನಾಡಿದ ಸಚಿವ ಶ್ರೀರಾಮುಲು, ಬಳ್ಳಾರಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಮೂಲಕ ರಾಷ್ಟ್ರಪಿತಮಹಾತ್ಮಗಾಂಧಿಧೀಜಿ ಅವರ ವಿಚಾರಧಾರೆಗಳನ್ನುನಾಡಿನ ಜನರಿಗೆ ಪ್ರಚುರಪಡಿಸುವಕೆಲಸವಾಗಬೇಕು.

Advertisement

ಗಾಂಧಿ ಭವನವು ಸಾಂಸ್ಕೃತಿಕಹಾಗೂ ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿವಿದ್ಯಾರ್ಥಿಗಳು, ಯುವಕರು, ಗಾಂಧಿವಾದಿಗಳುಹಾಗೂ ವಿಚಾರವಾದಿಗಳು ಕ್ರಿಯಾಶೀಲಚಟುವಟಿಕೆ ಹಮ್ಮಿಕೊಳ್ಳುವ ತಾಣವಾಗಬೇಕಿದೆ.ಗಾಂಧಿಭವನದಲ್ಲಿ ಚಿತ್ರಪ್ರದರ್ಶನ ಮತ್ತುವಸ್ತುಪ್ರದರ್ಶನ ಸಾಹಿತ್ಯಿಕ ಚಟುವಟಿಕೆಕೇಂದ್ರವಾಗಬೇಕು ಎಂದು ಅವರು ಹೇಳಿದರು.ಗಾಂಧಿ ಭವನದ ಆಶಯಗಳನ್ನು ಈಡೇರಿಸಲುಜಿಲ್ಲಾ ಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಸಮಿತಿ ರಚಿಸಲಾಗುತ್ತಿದ್ದು, ಜಿಪಂ ಸಿಇಒ, ಎಸ್‌ಪಿಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದಅಧಿ ಕಾರಿಗಳು, ಪ್ರಮುಖ ವಿದ್ಯಾಸಂಸ್ಥೆಗಳಮುಖ್ಯಸ್ಥರು, ಗಾಂ ಧಿವಾದಿಗಳು ಇದರಲ್ಲಿಸದಸ್ಯರಾಗಿ ಇರಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next