Advertisement

9 ಲಕ್ಷ ಮನೆಗಳ ನಿರ್ಮಾಣ: ಶ್ರೀರಾಮುಲು

05:03 PM Mar 03, 2022 | Team Udayavani |

ಬಳ್ಳಾರಿ: ನಗರದ ಬಸವನಕುಂಟೆ ಪ್ರದೇಶದಲ್ಲಿಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಆವಾಸ್‌ಯೋಜನೆ-ಸರ್ವರಿಗೂ ಸೂರು (ನಗರ) ಯೋಜನೆಅಡಿಯಲ್ಲಿ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ1260 ಮನೆಗಳ ನಿರ್ಮಾಣ ಕಾರ್ಯಕ್ಕೆ ಜಿಲ್ಲಾಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಂಗಳವಾರಭೂಮಿಪೂಜೆ ನೆರವೇರಿಸಿದರು.

Advertisement

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಪ್ರತಿ ಮನೆಗೆ ತಗಲುವ ವೆಚ್ಚ 6.97ಲಕ್ಷರೂಗಳಾಗಲಿದ್ದು, ಎಸ್ಸಿ/ಎಸ್ಟಿ ಫಲಾನುಭವಿಗಳಿಗೆಕೇಂದ್ರ ಸರ್ಕಾರ 1.50ಲಕ್ಷ, ರಾಜ್ಯ ಸರ್ಕಾರ 2 ಲಕ್ಷರೂ. ಎಸ್ಸಿಪಿ/ಟಿಎಸ್ಪಿ ಸಹಾಯಧನ 75 ಸಾವಿರಒದಗಿಸಲಿದ್ದು, ಫಲಾನುಭವಿ ವಂತಿಗೆ (ಶೇ.10)69,700 ರೂ. ಭರಿಸಲಿದ್ದಾರೆ. ಬ್ಯಾಂಕ್‌ ಸಾಲ 2.2 ಲಕ್ಷರೂ. ಒದಗಿಸಲಾಗುತ್ತದೆ. ಅದೇ ರೀತಿ ಅಲ್ಪಸಂಖ್ಯಾತರುಹಾಗೂ ಇತರೆ ವರ್ಗದವರಿಗೆ ಕೇಂದ್ರದ1.50ಲಕ್ಷ ರೂ., ರಾಜ್ಯ ಸರ್ಕಾರ 1.20ಲಕ್ಷ ರೂ.ಸಹಾಯಧನ ಒದಗಿಸಲಿದ್ದು, ಫಲಾನುಭವಿ ವಂತಿಗೆ(ಶೇ.15)1.04ಲಕ್ಷ ರೂ. ಭರಿಸಲಿದ್ದಾರೆ.

ಬ್ಯಾಂಕ್‌ಸಾಲ 3.22ಲಕ್ಷ ರೂ. ಒದಗಿಸಲಾಗುತ್ತದೆ. ಇದರಿಂದಸುಸಜ್ಜಿತ ಮನೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆಎಂದವರು ತಿಳಿಸಿದರು.ಕಳೆದ 2017-18ನೇ ಸಾಲಿನಲ್ಲಿ ಕರ್ನಾಟಕಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಳ್ಳಾರಿನಗರದಲ್ಲಿ 14688 ಲಕ್ಷ ರೂ.ಗಳ ವೆಚ್ಚದಲ್ಲಿ 2801ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈಸಾಲಿನಲ್ಲಿ ಬಳ್ಳಾರಿ ನಗರದಲ್ಲಿ 23086 ಲಕ್ಷ ರೂ.ಗಳ ವೆಚ್ಚದಲ್ಲಿ 3511 ಮನೆಗಳು ನಿರ್ಮಿಸಲುಉದ್ದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 10,194ಕೋಟಿ ರೂ. ವೆಚ್ಚದಲ್ಲಿ 9.74ಲಕ್ಷ ಮನೆಗಳನ್ನುನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇವುಗಳನ್ನು3 ವರ್ಷದೊಳಗೆ ನಿರ್ಮಿಸುವ ಗುರಿಯನ್ನು ಸರ್ಕಾರಹಾಕಿಕೊಂಡಿದೆ. ಬಳ್ಳಾರಿ ನಗರದಲ್ಲಿ 1264 ಮನೆಗಳಿಗೆಭೂಮಿಪೂಜೆ ನೆರವೇರಿಸಲಾಗಿದ್ದು, ಉಳಿದ ಮನೆಗಳಕಾಮಗಾರಿಯೂ ಶೀಘ್ರ ಆರಂಭಿಸಲಾಗುವುದು ಎಂದಸಚಿವ ಶ್ರೀರಾಮುಲು, ಬಳ್ಳಾರಿ ನಗರದ 60 ಸ್ಲಂಗಳ50 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ಅದಷ್ಟು ಶೀಘ್ರವಿತರಿಸಲಾಗುವುದು ಎಂದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ2022-23ರೊಳಗೆ ಗುಡಿಸಲು ಮುಕ್ತ ಭಾರತ ಕನಸುಕಂಡಿದ್ದು, ಅದರಂತೆ ಬಳ್ಳಾರಿ ನಗರದಲ್ಲಿ ಗುಡಿಸಲಿನಲ್ಲಿವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಗಳಡಿಮನೆಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಆದ್ಯತೆನೀಡಿದೆ ಎಂದರು.ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಾಲನ್ನ,ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕೊಳಗೇರಿಅಭಿವೃದ್ಧಿ ಮಂಡಳಿ ಅಧಿ ಕಾರಿಗಳು ಮತ್ತಿತರರುಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next