Advertisement

ಬಳ್ಳಮಂಜ: 14-15 ನೇ ಶತಮಾನದ ಶಾಸನದ‌ ಅಧ್ಯಯನ

05:44 PM Oct 22, 2021 | Team Udayavani |

ಬೆಳ್ತಂಗಡಿ: ತಾಲೂಕಿನ ಬಳ್ಳಮಂಜದ ಶ್ರೀ ಮಹತೋಭಾರ ಅನಂತೇಶ್ವರ ದೇವಾಲಯದ ಆವರಣದಲ್ಲಿ 14-15ನೇ ಶತಮಾನಕ್ಕೆ‌ ಸೇರಿದ ಶಾಸನವನ್ನು ಸಂದೇಶ್ ಜೈನ್ ಅವರ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ‌ – ಉಡುಪಿ (ಎನ್‌.ಟಿ.ಸಿ – ಎ.ಒ.ಎಂ ನ ಅಂಗ ಸಂಸ್ಥೆ) ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್‌.ಎ.ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ‌ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ.‌

Advertisement

ಶಾಸನವನ್ನು ಈ‌ ಮೊದಲು ಹಿರಿಯ ಸಂಶೋಧಕರಾದ ಡಾ. ಎಸ್.ಡಿ.ಶೆಟ್ಟಿ ಅವರು ಗಮನಿಸಿದ್ದು ಇದರ ಬಗ್ಗೆ ‌ಸರಳವಾದ ಮಾಹಿತಿಯನ್ನು ದೇವಾಲಯದ ಕೃತಿಯಲ್ಲಿ ನೀಡಿರುತ್ತಾರೆ. ಇವರು ದೇವಾಲಯದಲ್ಲಿ ಮೂರು ಶಾಸನಗಳಿವೆ ಎಂದು ತಿಳಿಸಿದ್ದು, ಒಂದು ಶಾಸನವು ಪ್ರಕಟಣೆಯಾಗಿರುತ್ತದೆ. ಪ್ರಸ್ತುತ ಈ ಶಾಸನವು ಹೊಸದಾಗಿ ಪತ್ತೆಯಾಗಿದ್ದು ಇನ್ನೊಂದು ಶಾಸನವು ಎಲ್ಲಿದೆ ಎಂದು ತಿಳಿದುಬಂದಿಲ್ಲ.

ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ತುಂಡಾಗಿದ್ದು ಎರಡೂ ಬದಿಗಳಲ್ಲಿ ಕನ್ನಡ ಲಿಪಿಗಳಿವೆ. ಶಾಸನದ‌ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು ಉಳಿದಿರುವ ಲಿಪಿಯ ಆಧಾರದ ‌ಮೇಲೆ‌ ಈ ಶಾಸನವು 14-15ನೇ‌ ಶತಮಾನಕ್ಕೆ ಸೇರಿದೆ ಎಂದು‌ ಹೇಳಬಹುದು.

ಇದನ್ನೂ ಓದಿ:  ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

ಶಾಸನದ ಪ್ರಕಾರ ಬಳ್ಳಮಂಜದ ದೇವರಿಗೆ ಕಂನಿಯಂಣ ಸೆಟಿ ಮತ್ತು ಬೆಳತಂಗಡಿ (ಬೆಳ್ತಂಗಡಿ)ಯ ಬೀರ‌ ಸೆನಭೋವನ ಮಗ ಕಾಂತಣ್ಣ‌ ಸೆನಭೋವನು ಮಾಡಿದ ಧರ್ಮದ ಬಗ್ಗೆ ಮಾಹಿತಿಯಿದೆ. ಶಾಸನದಲ್ಲಿ ಬಳ್ಳಮಂಜ ದೇವರಿಗೆ ಬಿಟ್ಟ ಭೂಮಿಯ ವಿವರ ಹಾಗೂ ಬ್ರಾಹ್ಮಣ ಭೋಜನಕ್ಕೆ ‌ಕೊಟ್ಟ ವಿವರಗಳನ್ನು ಉಲ್ಲೇಖಿಸಲಾಗಿದೆ.

Advertisement

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ವಿಜಯ್ ಆಚಾರ್ಯ ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಸಹಕಾರ ನೀಡಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next