Advertisement

Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ

02:37 AM Oct 22, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹಗಲು ವೇಳೆಯಲ್ಲಿ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಸಂಜೆಯಾಗುತ್ತಲೇ ದಟ್ಟ ಮೋಡ ಕವಿಯಲು ಆರಂಭವಾಗಿ ವಿವಿಧೆಡೆ ಮಳೆ ಸುರಿದಿದೆ.

Advertisement

ಮಂಗಳೂರು ನಗರ ಆಸುಪಾಸಿನಲ್ಲಿ ಮುಂಜಾನೆ ವೇಳೆ ಸಾಮಾನ್ಯ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಕರಾವಳಿಗೆ ಎರಡು ದಿನ ಎಲ್ಲೋ ಅಲರ್ಟ್‌ ಘೋಷಿಸಿದೆ.

ಮಂಗಳವಾರ ಮತ್ತು ಬುಧವಾರ ಮಳೆ ಇರುವ ಸಾಧ್ಯತೆಯಿದೆ. ಗುರುವಾರ ಮತ್ತು ಶುಕ್ರವಾರಕ್ಕೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 24.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಬೆಳ್ತಂಗಡಿ ಗುಡುಗು ಸಹಿತ ಮಳೆ
ಬೆಳ್ತಂಗಡಿ: ತಾಲೂಕಿನಾದ್ಯಂತ ಸೋಮವಾರ ಗುಡುಗು, ಮಿಂಚು ಸಹಿತ ಸಂಜೆ ಉತ್ತಮ ಮಳೆಯಾಗಿದೆ. ಬೆಳಾಲು, ಕೊಯ್ಯೂರು, ಬೆಳ್ತಂಗಡಿ ಉಜಿರೆ ಸಹಿತ ಇತರೆಡೆ ಸಂಜೆ ಬಳಿಕ ಸಿಡಿಲು, ಮಿಂಚು ಸಹಿತ ಮಳೆಯಾಗಿದೆ.

ರವಿವಾರ ಚಿಕ್ಕಮಗಳೂರು ವ್ಯಾಪ್ತಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆಯಾಗಿದ್ದು, ಸೋಮವಾರ ಬೆಳ್ತಂಗಡಿ ತಾಲೂಕಿನ ಹಲವೆಡೆ ಮಳೆಯಾಗಿದೆ. ಮುಂಜಾನೆ ಬಿಸಿಲಿನ ವಾತಾವರಣವಿದ್ದು, ಸಂಜೆ ಬಳಿಕ ನಿರಂತರ ಮಳೆಯಾಗುತ್ತಿದೆ.

Advertisement

ಪರಿಣಾಮ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಬದಲಾದ ವಾತಾವರಣದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗತೊಡಗಿವೆ. ಅಸಮರ್ಪಕ ವಾತಾವರಣದಿಂದ ತೊಂದರೆಗೀಡಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಹೊಂಡಮಯವಾಗಿದ್ದ ಸ್ಥಳಗಳಿಗೆ ನಿನ್ನೆಯಷ್ಟೇ ಡಾಮರು ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ ಅದಕ್ಕೂ ಸಮಸ್ಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next