Advertisement

ಬಾಳೆಹೊನ್ನೂರು: ಪಟೇಲ್‌- ವಾಲ್ಮೀಕಿ ಜಯಂತಿ

08:00 PM Nov 01, 2020 | Suhan S |

ಬಾಳೆಹೊನ್ನೂರು: ದೇಶದ ಐಕ್ಯತೆಗೆ ಶ್ರಮಿಸಿದ ಹಾಗೂ ದಾರ್ಶನಿಕರ ಆದರ್ಶಗಳನ್ನು ಕಿಂಚಿತ್ತಾದರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ, ದಿನಾಚರಣೆಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಎನ್‌.ಆರ್‌. ಪುರ ತಾಲೂಕು ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎಲ್‌.ಪಿ. ಜಗದೀಶ್‌ ತಿಳಿಸಿದರು.

Advertisement

ಪಟ್ಟಣದ ಶ್ರೀ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚುಟುಕುಸಾಹಿತ್ಯ ಪರಿಷತ್‌ ಹಾಗೂ ಐಟಿಐ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಏಕತಾ ಭಾರತ ನಿರ್ಮಾಪಕ ಸರದಾರ್‌ ವಲ್ಲಭಬಾಯಿ ಪಟೇಲ್‌ ಅವರ 145ನೇ ಜನ್ಮ ದಿನ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರ ಭಾರತದಲ್ಲಿ 600 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿದ ಹಿನ್ನೆಲೆಯಲ್ಲಿ ಅ.31 ನ್ನು ರಾಷ್ಟ್ರದ ಏಕತಾ ದಿನವೆಂದು ಆಚರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಚು.ಸಾ.ಪ. ಜಿಲ್ಲಾಧ್ಯಕ್ಷ ಯಜ್ಞಪುರುಷ ಭಟ್‌ ಮಾತನಾಡಿ, ವಾಲ್ಮೀಕಿ ರಚಿಸಿದ ವಾಲ್ಮೀಕಿ ರಾಮಾಯಣ ಮಹಾಗ್ರಂಥವನ್ನು ದೇಶದ ಕೆಲವೆಡೆ ನಿತ್ಯವೂ ಪಾರಾಯಣ ಮಾಡಿ ಜನ ಪೂಜಿಸುತ್ತಾರೆ ಎಂದು ತಿಳಿಸಿದರು.

ಹೋಬಳಿ ಕ.ಸಾ.ಪ. ಅಧ್ಯಕ್ಷ ಸತೀಶ್‌ ಅರಳಿಕೊಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಐಟಿಐನ ಪ್ರಾಂಶುಪಾಲ ಎಚ್‌.ಆರ್‌. ಆನಂದ್‌ ಮಾತನಾಡಿದರು. ಐ.ಟಿ.ಐ. ಕಾಲೇಜಿನ ಜಿ.ಟಿ. ರುದ್ರಸ್ವಾಮಿ ಮಾತನಾಡಿದರು. ಎನ್‌.ಆರ್‌. ಪುರ ತಾಲೂಕು ಛಾಯಾಗ್ರಾಕರ ಸಂಘದ ಮಾಜಿ ಉಪಾಧ್ಯಕ್ಷ ಪ್ರವೀಣ್‌, ಶ್ರೀನಿವಾಸ್‌, ಮಲ್ಲಿಕಾರ್ಜುನ್‌, ಪ್ರಕಾಶ್‌ ಮತ್ತಿತರರು ಇದ್ದರು. ಉಪನ್ಯಾಸಕ ಅಶೋಕ್‌ ಸ್ವಾಗತಿಸಿ, ಚಂದ್ರಶೇಖರ್‌ ನಿರೂಪಿಸಿ, ಉಮೇಶ್‌ ವಂದಿಸಿದರು.

ಕಡೂರು: ಸರ್ದಾರ್‌ ಪಟೇಲ್‌ ಜನ್ಮದಿನ :

Advertisement

ಕಡೂರು: ಗಾಂಧಿ  ಹತ್ಯೆಯ ನಂತರ ಸರ್ದಾರ್‌ ವಲ್ಲಬ್‌ಭಾಯಿ ಪಟೇಲ್‌ ಕೋಮುವಾದಿ ಆರ್‌ಎಸ್‌ ಎಸ್‌ ಅನ್ನು ನಿರ್ಬಂಧ ಮಾಡಲು ಆದೇಶ ನೀಡಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಅಂಶುಮಂತ್‌ ತಿಳಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸರ್ದಾರ್‌ ವಲ್ಲಬ್‌ಭಾಯಿ ಪಟೇಲ್‌ ಅವರ ಜನ್ಮದಿನ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ರಾಮಾಯಣ ವಿರಚಿತ ಮಹಾಕವಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ದಾರ್‌ ವಲ್ಲಬ್‌ಭಾಯಿ ಪಟೇಲ್‌ ಅವರನ್ನು ಬಿಜೆಪಿ ವೈಭವೀಕರಿಸಿ ಕಾಂಗ್ರೆಸ್‌ನಿಂದ ದೂರ ಮಾಡಲು ಹೊರಟಿದೆ. ಆದರೆ ಎಂದಿಗೂ ಇದು ಸಾಧ್ಯವಿಲ್ಲ ಎಂದರು. ಕೆಪಿಸಿಸಿ ಸದಸ್ಯ ಕೆ.ಎಸ್‌. ಆನಂದ್‌ ಜಿಲ್ಲಾ ಕಾಂಗ್ರೆಸ್‌ ಮುಖಂಡ ಶಿವಾನಂದಸ್ವಾಮಿ, ಜಿಪಂ ಸದಸ್ಯರಾದ ವನಮಾಲ ದೇವರಾಜು, ಶರತ್‌ ಕೃಷ್ಣಮೂರ್ತಿ, ಕೆ.ಎಂ. ಕೆಂಪರಾಜು, ಹಿರಿಯಣ್ಣ, ಬಶೀರ್‌ಸಾಬ್‌, ಉಮೇಶ್‌, ಪುರಸಭೆ ಸದಸ್ಯ ತೋಟದ ಮನೆ ಮೋಹನ್‌ (ಮುದ್ದು) ಮಹಾತ್ಮರ ಕುರಿತು ಮಾತನಾಡಿದರು.

ಜಿಪಂ ಸದಸ್ಯೆ ಲೋಲಾಕ್ಷಿಬಾಯಿ, ಕಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಸೂರು ಚಂದ್ರಮೌಳಿ, ತಾಪಂ ಅಧ್ಯಕ್ಷೆ ಪ್ರೇಮಬಾಯಿ ಕೃಷ್ಣಮೂರ್ತಿ, ತಾಪಂ ಸದಸ್ಯರಾದ ಪಂಚನಹಳ್ಳಿ ಪ್ರಸನ್ನ, ದಾಸಯ್ಯನಗುತ್ತಿ ಚಂದ್ರಪ್ಪ, ಸಾವಿತ್ರಿ ಗಂಗಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next