Advertisement

ನಿಸ್ವಾರ್ಥ ಸಮಾಜ ಸೇವೆಯಿಂದ ಜೀವನ ಸಾರ್ಥಕ

04:09 PM Jul 05, 2019 | Naveen |

ಬಾಳೆಹೊನ್ನೂರು: ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ವಾರ್ಥ ವನ್ನು ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರೆ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಕುಂದಾಪುರ ಚಿನ್ಮಯಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್‌ ಪುತ್ರನ್‌ ಅವರು ಅಭಿಪ್ರಾಯಪಟ್ಟರು.

Advertisement

ಶ್ರೀ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ನಡೆದ ರೋಟರಿ ಸಂಸ್ಥೆಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಶತಮಾನೋತ್ಸವ ಆಚರಿಸಿಕೊಳ್ಳುತ್ತಿ ರುವ ರೋಟರಿ ಸಂಸ್ಥೆ, ಹಲವಾರು ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಕ್ಲಬ್‌ ಒಂದು ವರ್ಷಕ್ಕೆ 150 ಮಿಲಿಯನ್‌ ಡಾಲರ್‌ ಹಣವನ್ನು ಸಮಾಜ ಸೇವೆಗೆ ಖರ್ಚು ಮಾಡುತ್ತಿದೆ. ರೋಟರಿ ಸಂಸ್ಥೆಗೆಜಾಗತಿಕ ಇತಿಹಾಸದಲ್ಲೇ ದಾನಿಗಳೊ ಬ್ಬರು 100 ಕೊಟಿ ರೂ. ನೀಡಿದ್ದಾರೆ. ಸಮಾಜ ಸೇವೆಗಾಗಿ ಕ್ಲಬ್‌ನ ಎಲ್ಲಾ ಸದ ಸ್ಯರು ತಮ್ಮ ದುಡಿಮೆಯ ಸ್ವಲ್ಪ ಭಾಗ ವನ್ನು ಮೀಸಲಿಟ್ಟಿದ್ದಾರೆ. ಸ್ಥಳೀಯ ಕ್ಲಬ್‌ಸಮಾಜಮುಖೀ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಶ್ಲಾಘನೀಯ ಎಂದರು. ವಲಯ 06ರ ರೋಟರಿ ಅಸಿಸ್ಟೆಂಟ್ ಗವರ್ನರ್‌ ರೊ.ಸುವರ್ಣ ಅವಿನಾಶ್‌ ಮಾತನಾಡಿ, ವಿಶ್ವಾದ್ಯಂತ ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸೀಡ್‌ಬಾಲ್ ಬೀಜದುಂಡೆ ಅಭಿಯಾನ ಹಮ್ಮಿಕೊಂಡು ಹಸಿರು ಕ್ರಾಂತಿಗೆ ಶ್ರಮಿ ಸುವ ಉದ್ದೇಶ ಹೊಂದಿದೆ ಎಂದರು.

ಮಕ್ಕಳಲ್ಲಿ ಹಾಗೂ ಯುವ ಜನತೆ ಯಲ್ಲಿ ಸೇವಾ ಮನೋಭಾವನೆ ಮೂಡಿ ಸುವ ಕೆಲಸವಾಗಬೇಕು. ಪ್ರಮುಖವಾಗಿ ಮಕ್ಕಳಿಗೆ ಎಸ್‌ಎಸ್‌ಎಲ್ಸಿ, ಪಿಯುಸಿ ನಂತರ ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಅರಿವು ಮೂಡಿಸುವ ಉದೇಶವಿದೆ ಎಂದರು.

ರೋಟರಿ ಸಂಸ್ಥೆ ನಿರ್ಗಮಿತ ಅಧ್ಯಕ್ಷ ಬಿ.ಎಂ.ಜಯರಾಮ್‌ ಮಾತನಾಡಿ, ಅಧಿ ಕಾರಾವಧಿಯಲ್ಲಿ ಸಹಕರಿಸಿದ ಸದಸ್ಯರು ಹಾಗೂ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ರೋಟರಿ ಸಂಸ್ಥೆ ನೂತನ ಅಧ್ಯಕ್ಷ ಎಂ.ಸಿ.ಯೋಗೀಶ್‌ ಮಾತನಾಡಿ, ರಸ್ತೆ ಸುರಕ್ಷತೆ, ಶೈಕ್ಷಣಿಕ ಕ್ಷೇತ್ರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ, ವಿಶ್ವ ಸ್ತನ್ಯ ಪಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕೆಂದರು.

Advertisement

ಕಾರ್ಯದರ್ಶಿ ಸಿ.ವಿ.ಸುನಿಲ್, ಝೋನಲ್ ಲೆಫ್ಟಿನೆಂಟ್ ಟಿ.ಸುರೇಶ್‌, ನಿಯೋಜಿತ ಅಧ್ಯಕ್ಷ ನವೀನ್‌ ಲಾಯ್ಡ ಮಿಸ್ಕಿತ್‌, ಕೆ.ಎಚ್.ನಾಗೇಶ್‌, ಅಭಿಷೇಕ್‌ ಸಮೃದ್ಧ್, ಎಂ.ಎಸ್‌.ಯಶವಂತ್‌, ಎಚ್.ಎಚ್.ಕೃಷ್ಣಮೂರ್ತಿ, ವಿದ್ಯಾಶೆಟ್ಟಿ, ಸಹನಾ, ಎಚ್.ಬಿ.ರಾಜಗೋಪಾಲ್, ಇನ್ನರ್‌ ವ್ಹೀಲ್ ಸಂಸ್ಥೆ ನೂತನ ಅಧ್ಯಕ್ಷೆ ಸೀಮಾ, ಕಾರ್ಯದರ್ಶಿ ಸುಚೇತಾ, ಮೇನಕಾ ಜಯಪ್ರಕಾಶ್‌, ಜಾಹ್ನವಿ ಜಯರಾಮ್‌, ಬಿ.ಸಿ.ಗೀತಾ ಸೇರಿದಂತೆ ಸಂಸ್ಥೆಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.

ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೇ, ಸಂಸ್ಥೆಗೆ ನೂತನ ಸದಸ್ಯರು ಸೇರ್ಪಡೆಗೊಂಡರು. ಇದೇ ವೇಳೆ ಕ್ಲಬ್‌ ಮಾಜಿ ಅಧ್ಯಕ್ಷ, ಎಸ್‌ಜೆಆರ್‌ಸಿಯ ಪ್ರೌಢಶಾಲಾ ವಿಭಾಗದ ನಿವೃತ್ತ ಮುಖ್ಯ ಶಿಕ್ಷಕರರನ್ನು ಸನ್ಮಾನಿಸಲಾಯಿತು.ವೈಶಾಲಿ ಕುಡ್ವ ಪ್ರಾರ್ಥಿಸಿ, ಡಾ.ಎಂ.ಬಿ.ರಮೇಶ್‌, ವೆಂಕ ಟೇಶ್‌ಭಟ್, ಎ.ಸಿ.ಸಂದೇಶ್‌ ನಿರೂಪಿಸಿ, ಕೆ.ಟಿ.ವೆಂಕಟೇಶ್‌ ಸ್ವಾಗತಿಸಿ, ರೋಟರಿ ಸಂಸ್ಥೆ ನೂತನ ಕಾರ್ಯದರ್ಶಿ ಕೆ.ಕೆ.ರಮೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next