Advertisement

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

03:55 PM Nov 05, 2024 | Team Udayavani |

ಕಾರ್ಕಳ: ದುರ್ಗಾ ಗ್ರಾ. ಪಂ. ವ್ಯಾಪ್ತಿ ಮೂರನೇ ವಾರ್ಡ್‌ ರೈಸ್‌ ಮಿಲ್‌ ಸಮೀಪ 100 ಮೀ. ರಸ್ತೆ ಅವ್ಯವಸ್ಥೆಯಿಂದ ಸ್ಥಳೀಯರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗಿದೆ.

Advertisement

ರಸ್ತೆಯ ಮಧ್ಯಭಾಗದಲ್ಲಿ ಗುಡ್ಡ ಪ್ರದೇಶದಿಂದ ಹರಿದು ಬಂದ ಮಳೆ ನೀರು ರಸ್ತೆ ಬದಿ ಚರಂಡಿಯಿಲ್ಲದೆ ಮಾರ್ಗದ ಮಧ್ಯಭಾಗದಲ್ಲಿ ನೀರುಹರಿದ ಪರಿಣಾಮ ಮಣ್ಣು ಇಬ್ಭಾಗವಾಗಿ ಆಳವಾದ ಕೃತಕ ಚರಂಡಿ ಉಂಟಾಗಿದೆ. ಈ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಜನರ ನಡೆಯುವಾಗಲೂ ಪರದಾಡುವ ಸ್ಥಿತಿ ಇಲ್ಲಿದೆ. ವಾಹನಗಳಲ್ಲಿ ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲು ಯಾವುದೇ ವಾಹನಗಳು ಇತ್ತ ಬಾರದೇ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂಬುದು ನಾಗರಿಕರ ಅಳಲು.

ದುರಸ್ತಿಯಾಗಿವೆ
ಸದ್ಯಕ್ಕೆ ಹೊಸ ರಸ್ತೆ ನಿರ್ಮಾಣಕ್ಕೆ ಅನುದಾನ ಕೊರತೆ ಇದ್ದು, ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ತಾತ್ಕಲಿಕ ನೆಲೆಯಲ್ಲಿ ರಸ್ತೆಯನ್ನು ದುರಸ್ತಿಗೊಳಿಸುವ ಬಗ್ಗೆ ಕ್ರಮವಹಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಹೊಸ ರಸ್ತೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಲಾಗುವುದು.
-ದೇವಕಿ, ಗ್ರಾ. ಪಂ. ಅಧ್ಯಕ್ಷೆ

ಗ್ರಾ. ಪಂ. ಆಡಳಿತ ಕ್ರಮವಹಿಸಲಿ
ಜನರಿಗೆ ಈ ದಾರಿಯಲ್ಲಿ ನಡೆದಾಡಿಕೊಂಡು ಹೋಗಲು ಕಷ್ಟವಾಗುತ್ತಿದ್ದು, ಆಗಾಗ ಮಳೆ ಸುರಿಯುತ್ತಿರುವ ಪರಿಣಾಮ ಕೆಸರಿನಲ್ಲಿ ಕೆಲವರು ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆಯೂ ಇದೆ. ಉತ್ತಮ ರಸ್ತೆ ನಿರ್ಮಿಸಿ ಜನರ ತೊಂದರೆಯನ್ನು ನಿವಾರಿಸುವಂತೆ ಗ್ರಾ. ಪಂ. ಆಡಳಿತ ವ್ಯವಸ್ಥೆ ಕ್ರಮವಹಿಸಬೇಕು. ಅನುದಾನ ಕೊರತೆ ಇದ್ದಲ್ಲಿ ಇಲಾಖೆ ಇನ್ನಿತರೆ ಅನುದಾನಗಳ ಬಗ್ಗೆ ಪರಿಶೀಲನೆ ನಡೆಸಬೇಕು ಅಥವಾ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಯಡಿಯಾದರೂ ವ್ಯವಸ್ಥಿತ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂಬುದು ಸ್ಥಳೀಯರ ಕೋರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next