Advertisement

​ಮಕ್ಕಳಲ್ಲಿ ಕಾಣಿಸುವ ಬಾಲಾರಿಷ್ಟ ಮತ್ತು ಗ್ರಹಚಾರ

06:43 AM Jan 09, 2016 | |

ಕೆಲವು ಮಕ್ಕಳು ಹುಟ್ಟಿದಾಗಲೇ ತೀವ್ರವಾದ ಚೂಟಿತನ ಹೊಂದಿದ್ದು ಚೆನ್ನಾಗಿಯೇ ಬೆಳೆಯುತ್ತಾರೆ. ಆದರೆ ತದನಂತರ ಯಾವಯಾವುದೋ ಕಾರಣಗಳಿಂದ ಕಾಯಿಲೆ ಬೀಳುತ್ತಾರೆ. ಆದರೆ ಹಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರತರವಾದ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ನಮ್ಮ ದೇಶದಲ್ಲಿ ಬಾಲ್ಯದ ಸಮಯದ ತಾಪತ್ರಯದಾಯಕವಾದ ಕ್ರಿಯಾಶೀಲತೆಯ ಕೊರತೆಗಳನ್ನು ಬಾಲಾರಿಷ್ಟ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಪೌಷ್ಟಿಕಾಂಶದ ಕೊರತೆಯೋ, ಗರ್ಭಾವಸ್ಥೆಯಲ್ಲಿ ಬಿದ್ದ ಕೆಲವು ಏಟು ನೋವು ಜಾರಿ ಬಿದ್ದದ್ದೇ ನೆವವಾಗಿ ಭ್ರೂಣಾವಸ್ಥೆಯಲ್ಲಿಯೇ ಮಗು ಕೆಲವು ಕಗ್ಗಂಟುಗಳನ್ನು ಪಡೆದುಕೊಂಡು ಬಿಡುತ್ತದೆ. ಇದು ಬಿದ್ದ ಪೆಟ್ಟೋ, ಆಘಾತವೋ, ಪೌrಕಾಂಶದ ಕೊರತೆಯೋ ಇತ್ಯಾದಿಗಳ ಕಾರಣಗಳು ಇರದೆಯೇ ಕೆಲವು ಮಕ್ಕಳು ದುರ್ಬಲರಾಗಿ ಜನಿಸುತ್ತಾರೆ. ಸಶಕ್ತ ತಾಯಿತಂದೆಯರ ಮಕ್ಕಳೂ ಕ್ರಿಯಾಶೀಲತೆ ಕಳೆದುಕೊಂಡು ಹುಟ್ಟುವುದುಂಟು. ಇದಕ್ಕೆ ವೈದ್ಯಕೀಯ ಲೋಕ ಅನೇಕಾನೇಕ ಕಾರಣಗಳನ್ನು ಕೊಡಬಹುದು. ಆದರೆ ಬುದ್ಧಿಗೆ ಅಧೀಶನಾದ ಬುಧಗ್ರಹವು ಮಾನಸಿಕ ಸ್ತರದ ಮೇಲೆ ಅಲೆಗಳನ್ನು ಸುಳಿಗಳನ್ನು ಎಬ್ಬಿಸಿ ಮನಃಶಾಂತಿಯನ್ನು ಕದಡುವ ಉತ್ತಮರಾದರೆ ಮನೋಸ್ಥೈರ್ಯ ಮತ್ತು ಬೌದ್ಧಿಕ ಪ್ರಖರತೆಯನ್ನು ಗಟ್ಟಿಯಾಗಿ ಎತ್ತಿ ಹಿಡಿಯುತ್ತಾರೆ. ಅನೇಕ ಯಶಸ್ವಿ ವ್ಯಕ್ತಿಗಳ ಜಾತಕದಲ್ಲಿ ಈ ಸಂಯೋಜನೆಯು ಕಾಣಸಿಗುತ್ತದೆ. ಚಂದ್ರನು ಪರಸ್ಪರರ ವೈಷಮ್ಯದ ಸಂಯೋಜನೆ ಹರಳುಗಟ್ಟಿದಾಗ ಬಾಲಾರಿಷ್ಟ ಗೋಚರವಾಗುತ್ತದೆ. 

Advertisement

ಮಂಕು ಕದು ಸದಾ ನಿಷ್ಕ್ರಿಯರಾಗಿರುವ ಮಕ್ಕಳು

 ಎಷ್ಟೋ ಮನೆಯಲ್ಲಿ ಮಂಕು ಕವಿದಂತೆ ಇರುವ ಮಕ್ಕಳು ಕಾಣ ಸಿಗುತ್ತಾರೆ. ಇವರ ಜಾತಕಗಳಲ್ಲಿ ನಿಸ್ಸಂದೇಹವಾಗಿ ಬುಧ ಮತ್ತು ಚಂದ್ರರ ವಿಷಮ ಸಂಯೋಜನೆಗಳು ಹರಳುಗಟ್ಟಿರುತ್ತದೆ. ಇವರನ್ನು ಬುದ್ಧಿಮಾಂದ್ಯರೂ ಎಂದೂ ಹೆಸರಿಸಲಾಗದು. ಆದರೆ ಅವರ ಬಾಲ್ಯದಲ್ಲಿ ಇರಬೇಕಾದ ಲವಲಕೆ ಚೂಟಿತನ ಹುರುಪು ಉತ್ಸಾಹಗಳು ಕಾಣಸಿಗುವುದಿಲ್ಲ. ಎಲ್ಲೋ ನೋಡುತ್ತಿರುವ ಮಕ್ಕಳು ಸಪ್ಪೆ ಮೋರೆ ಹಾಕಿ ಬೆದರಿದಂತೆ ಕಾಣುವ ಮಕ್ಕಳು ಎದ್ದು ಲಗುಬಗೆಯಿಂದ ಹಿರಿಯರ ಸಹಾಯವಿರದೆ ಚಿನಕುರುಳಿಯಂತೆ ಓಡಾಡುವ ಮಕ್ಕಳಂತೆ ಇವರು ಇರುವುದಿಲ್ಲ. ಬೌದ್ಧಿಕ ಕ್ಷಮತೆ ಇರದೆಯೇ ಚಂದ್ರ ಮನೋಮಂಡಲವನ್ನು ಸಂವೇದನೆಗಳಿಗೆ ದೂಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಶ್ಚಲರಾಗುತ್ತಾರೆ. ಎಷ್ಟು ಜಡತ್ವ ಬಂದು ಬಿಡಬಹುದಾದರೆ ಅನ್ಯರ ಮಾತು ಬಾಯಿ, ತುಟಿ ಚಲನೆಗಳನ್ನು ಗಮನಿಸದೆ ಕೇಳಿಸಿಕೊಳ್ಳದೆ ಈ ಮಕ್ಕಳು ಈ ವಯಸ್ಸಿನಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಮಾತನಾಡಲು ಅರ್ಥವಾದರೂ ತಮಗನಿಸಿದ್ದನ್ನು ವ್ಯಕ್ತ ಪಡಿಸಲು ಸಾಧ್ಯವಾಗದೇ ಹೋಗಬಹುದು. ತೇಜಸ್ಸೇ ಇರದ ಕಣ್ಣುಗಳಲ್ಲಿ ಪೇಲವವಾಗಿ ಕಾಣಿಸಿಕೊಳ್ಳುತ್ತಾರೆ. ಅರಿವಿಗೆ ಬರದೆ ಬಾಯಲ್ಲಿ ಜೊಲ್ಲು ಸುರಿಯುವ ಸಾಧ್ಯತೆ ಕೂಡಾ ಇರುತ್ತದೆ. 

ಬುಧಗ್ರಹ ಮತ್ತು ಬೌದ್ಧಿಕ ಚಾತುರ್ಯ

 ಬಹುತೇಕವಾಗಿ ಬೌದ್ಧಿಕವಾದ ಬೆಳವಣಿಗೆಗೆ ಬುಧ ಕಾರಣನಾಗಿರುತ್ತಾನೆ. ಸೂರ್ಯನ ಸಮೀಪದಲ್ಲಿಯೇ ಇವನ ಸಂಚಲನ ನಡೆಯುತ್ತಿರುತ್ತದೆ. ಹೀಗಾಗಿ ನಮ್ಮ ಆಷೇìಯ ವ್ಯಾಖ್ಯಾನಗಳು ಬುಧನನ್ನು ಸೂರ್ಯಪ್ರಿಯಕರೋ ವಿದ್ವಾನ್‌ ಎಂದು ಕರೆದಿದೆ. ಬುಧನ ಬಳಿ ಭಾರತೀಯ ಪರಂಪರೆ ಬುದ್ಧಿಯನ್ನು ಪ್ರಚೋದಿಸುವ ಎಂದು ಬೇಡುತ್ತದೆ. ಉತ್ಪಾತರೂಪಿ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ ಎಂದು ಕೂಡಾ ನಮ್ಮ ಆಷೇìಯ ಪ್ರಾರ್ಥನೆಗಳು ಬುಧನ ಸಲುವಾಗಿಯೇ ವಿಶೇಷವಾಗಿ ಉಲ್ಲೇಖೀಸಲ್ಪಟ್ಟಿದೆ. ಬುಧನು ಹೊಳಪು ರೂಪದಲ್ಲಿ ಅಪ್ರತಿಮ ಎಂಬ ವಿಶ್ಲೇಷಣೆಯನ್ನು ಭಾರತೀಯ ಶಾಸ್ತ್ರ ಸ್ತೋತ್ರ ಮೀಮಾಂಸೆಗಳಲ್ಲಿ ನಡೆಸುವಂತೆ ಮಾಡಿದೆ. ಬುಧ ಮತ್ತು ಸೂರ್ಯರು ಒಂದೇ ಮನೆಯಲ್ಲಿ ಒಗ್ಗೂಡಿದ್ದರೆ ಅದನ್ನು ಬುಧಾದಿತ್ಯ ಯೋಗ ಎಂಬ ಹೆಸರಿನಲ್ಲಿ ಕರೆಯುತ್ತೇವೆ. ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಈ ವಿಷಯವನ್ನು ನಾವು ಮನಗಾಣುತ್ತೇವೆ. ಬುಧನು ಒಂದಿಷ್ಟು ಅಂತರವನ್ನು ಕಟ್ಟಕಡೆಗೆ ಒಂಭತ್ತು ಡಿಗ್ರಿಗಳನ್ನಾದರೂ ಸೂರ್ಯನಿಂದ ಕಾಯ್ದುಕೊಳ್ಳದಿದ್ದರೆ ಸೂರ್ಯನ ಪ್ರಭೆಯ ಎದುರು ಬುಧ ನಿಸ್ತೇಜನಾಗುತ್ತಾನೆ. ಇದನ್ನು ಅಸ್ತಂಗತ ದೋಷ ಎಂಬುದಾಗಿ 
ಭಾರತೀಯ ಜೋತಿಷ್ಯ ಗುರುತಿಸುತ್ತದೆ.

Advertisement

ಬುಧಾದಿತ್ಯ ಯೋಗದ ಬಗ್ಗೆ ಮುಂದೊಂದು ಬಾರಿ ಇದೇ ಅಂಕಣದಲ್ಲಿ ಚರ್ಚಿಸೋಣ. 
ಸಧ್ಯ ಪ್ರಮುಖವಾಗಿ ಹೇಳಬೇಕಾದದ್ದು ವಿದ್ವತ್ತನ್ನು ಕೊಡಬೇಕಾದ ಬುಧ ವಿಷಮ ಸಂಯೋಜನೆಗಳ ಸಂದರ್ಭದಲ್ಲಿ ದುಷ್ಟತನವನ್ನು ಮನೆಹಾಳು ಬುದ್ಧಿಯನ್ನು ಶನಿ ರಾಹು ಅಥವಾ ಕೇತುಗಳೊಂದಿಗೆ ಕೂಡಿದ್ದಾಗ ಕೊಡಬಹುದು. ಮಂಕುತನ ಕೊಡಿಸುತ್ತಾನೆ. ಧೀ ಶಕ್ತಿಗೆ ಚಾತುರ್ಯಕ್ಕೆ ಬೇಕಾದ ಸಂವೇದನೆಗಳು ಸೊರಗುತ್ತವೆ. ಚಂದ್ರನೂ ದುರ್ಬಲನಾಗಿದ್ದರೆ 
ಬುಧನ ಉಪಟಳದಲ್ಲಿ ಇನ್ನಷ್ಟು ಗಾಢವಾದ ಮೊನಚು ಉದ್ಭವಿಸುತ್ತದೆ. ಇದರಿಂದ ಬಾಲಾರಿಷ್ಟದ ಬಿಕ್ಕಟ್ಟುಗಳು ಉಲ್ಬಣಗೊಳ್ಳುತ್ತದೆ. ಚಂದ್ರನಿಗೆ ಮನಸ್ಸನ್ನು ಅನುಗ್ರಹಿಸುವ ದೃಢತೆ ಇರಬೇಕು. 

ಚಂದ್ರ ಮತ್ತು ಯೋಚನಾ ಶಕ್ತಿ

ಚಂದ್ರ ನೋಡಲು ಗಾತ್ರದಲ್ಲಿ ಪುಟ್ಟ ಬಟಾಣಿ ಕಾಳು. (ಸೂರ್ಯ ಮಂಡಲದ ಇತರ ಗ್ರಹಗಳಿಗೆ ಹೋಲಿಸಿದರೆ) ಆದರೂ ಆತ ಭೂಮಿಯ ಅತಿ ಹತ್ತಿರವೇ ಇರುವುದರಿಂದ 
ಭೂಮಿಯ ಮೇಲೆ ಅಗಾಧ ಪರಿಣಾಮ ಬೀರುತ್ತಾನೆ. ಭೂಮಿಯ ಸರ್ವ ಜೀಗಳ ಮೇಲೂ ಅವನ ಪ್ರಭಾವವಿದೆ. ಸೂರ್ಯನಿಂದ ಪಡೆದ ಬೆಳಕನ್ನು ಹೊರಹೊಮ್ಮಿಸುವ ವಿಧಾನದಲ್ಲಿ ಅವನು ಯೋಚನಾ ಶಕ್ತಿಯನ್ನು ಪ್ರವಹಿಸುವ ಮೆದುಳಿನ ಮೇಲೆ ನಿಯಂತ್ರಣ ಪಡೆಯಲು ಕಾರಣನಾಗುತ್ತದೆ. ಹೀಗಾಗಿಯೇ ಅವನ ಶೀತಲ ಬೆಳ್ಳಿಯ ಬೆಳಕಿನ ಸೌರಭಕ್ಕಾಗಿ ನಮ್ಮ ಶಾಸ್ತ್ರ ಅವನನ್ನು ರೋಹಿಣೀಶ ಎಂದು ಕರೆದಿದೆ. ರೋಹಿಣಿ ನಕ್ಷತ್ರ ಅವನ ಅಧಿಪತ್ಯಕ್ಕೆ ಬರುತ್ತದೆ. ರೋಹಿಣಿ ನಕ್ಷತ್ರವು ಪ್ರಧಾನವಾಗಿ ಸ್ತ್ರೀ ಗುಣಧರ್ಮಗಳನ್ನು ಹೊಂದಿದೆ ಎಂಬುದು ನಂಬಿಕೆ. ಈ ನಕ್ಷತ್ರದ ವಿಸ್ತಾರದ ಪ್ರಾಭಾವ ಎಂಬುದಾಗಿ ಗಮನಿಸಬೇಕು. ಇಲ್ಲಿ ಚಂದ್ರ ಉತ್ಛನಾಗಿ ಪರಮಾಧಿಕ ಬಲ ಪಡೆಯುತ್ತಾನೆ. ಹೀಗಾಗಿ ಚಂದ್ರ ರೋಹಿಣಿಯ ಅಧೀಶ. ಈತ ಸುಧಾ ಮೂರ್ತಿ, ಸುಧಾಗಾತ್ರ, ಸುಧಾ ಜನನೂ ಹೌದು. ಆದರೆ ಸೊಗಸಾದ ಸುಧೆಗೆ ಸಮಾನವಾದ ಸುಹಾಸಕರವಾದ ಸಂಪನ್ನತೆ, ಸಮಾನತೆ ಇತ್ಯಾದಿಗಳನ್ನು ಚಂದ್ರ ಪ್ರಚಂಡ ಬಲಯುತನಾದಾಗ ಒದಗಿಸುತ್ತದೆ. ಆದರೆ ಚಂದ್ರ ದುಷ್ಟನಾಗುವುದು ದುರ್ಬಲನಾದಾಗ. 

ಶನೈಶ್ಚರ ರಾಹು, ಕೇತು, ಕುಜ, ಸೂರ್ಯರ ಸಂಪರ್ಕ ಬಂದಾಗ ಕ್ರಮವಾಗಿ ವಿಳಂಬವಾಗುವ ಕೆಲಸಗಳ ಸಂದರ್ಭದಲ್ಲಿ ಮೈಪರಚಿಕೊಳ್ಳುವ ದುರ್ಭರತೆ, ಮನೋವೇದಿಕೆಯಲ್ಲಿ ಉನ್ಮಾದ ಅಸಹನೆಯ ಮಾತು ಧನನಷ್ಟ, ಬುದ್ಧಿ ವಿಕಲ್ಪಗಳಿಗೆ ಕಾರಣನಾಗುತ್ತಾನೆ. ಬಾಲಾರಿಷ್ಟದ ಸಂದರ್ಭದಲ್ಲಿ ಬುಧನೂ, ಚಂದ್ರನೂ, ತಾಳಮೇಳ ಕಳೆದುಕೊಂಡು ಕ್ರೀಯಾಶೀಲತೆಯಿಂದ ವಿಮುಖರಾಗುವ ಕ್ರಿಯಾ ಶೂನ್ಯತೆ ಕಾಂತಿಮಯ ತೇಜೋಮಯ ವ್ಯಕ್ತಿತ್ವವನ್ನು ಒದಗಿಸದಿರುವ ದುರ್ಭರತೆಗಳಿಗೆ ಕಾರಣರಾಗುತ್ತಾರೆ. 
ಯಾವ ಧನಬಲವಿರಲಿ ತಿಂದುಂಡು ಸುಖೀಸುವ ಅವಕಾಶಗಳಿದ್ದರೂ ದೇಹದಲ್ಲಿ ಚಟುವಟಿಕೆಗಳಿಲ್ಲದೆ ಮಕ್ಕಳಿಗೆ ಬಾಲಾರಿಷ್ಟ ಕಾಡುತ್ತದೆ. ಬಾಲ್ಯದ ಅರಿಷ್ಟ ಎಂದರೆ ತೊಡಕು ಅಭಾವ ಪರದಾಟ ದೈನೇಸಿಸ್ಥಿತಿ ಎಂದು ಅರ್ಥ ಕೊಡಬಹುದು. ಆದರೆ ಈ ಅರ್ಥಗಳನ್ನು ುàರಿ ಇದು ಈ ಕೊರತೆಗಳನ್ನು ವಿಸ್ತರಿಸುತ್ತದೆ. ಮಾತುಗಳನ್ನು ತೊದಲಿಸಬಹುದು ನಡೆದಾಡಲು ವಿಳಂಬವಾಗಬಹುದು. ಮಾತುಗಳನ್ನು ಆಡಲು ವಿಳಂಬವಾಗಬಹುದು. ಶಿಕ್ಷಣಕ್ಕೆ ಎಂದು ಶಾಲೆಗೆ ಸೇರಿಸಿದರೂ ಅನ್ಯ ಮಕ್ಕಳು ಬೇಗೆ ಕಲಿತಂತೆ ಇವರಿಗೆ ಸಾಧ್ಯವಾಗದೆ ಇರಬಹುದು. ಮೆದುಳಿಗೂ ಬೆನ್ನುಹುರಿಯ ನರತಂತು ಜಾಲಗಳಿಗೂ ಹೊಂದಾಣಿಕೆ ಇರದೆ ಹೋಗಿ ನಿಜಕ್ಕೂ ದಾರುಣವಾದ ಸ್ಥಿತಿಗತಿ ಎದುರಾಗಬಹುದು. 

ಈ ಸ್ಥಿತಿಯಿಂದ ಹೊರಬರಲು ಸಾಧ್ಯವೇ

 ಹೊರಬರಲು ಸಾಧ್ಯವಾಗುವಂತೆ ಕ್ರಮೇಣ ಅನ್ಯಗ್ರಹಗಳ ಪ್ರಭಾವದಿಂದಾಗಿ ಉತ್ತಮ ಸ್ಥಿತಿಯ ಸಂಪನ್ನ ಆವರಣಗಳು ತಮ್ಮ ಸುಹಾಸಕರತೆಯನ್ನು ಬೀರಬಲ್ಲವು. ಜಾತಕದ ಉಳಿದ ವಿಚಾರಗಳು ಎಷ್ಟು ಗಟ್ಟಿಯಾಗಿದೆ ಎಂಬುದರೆ ಮೇಲೆ ಇವು ತಿಳಿಯಬೇಕು. ರಾಹು, ಕೇತು, ಕುಜ, ಶನೈಶ್ಚರ, ಸೂರ್ಯರಂಥ ಅಶುಭ ಗ್ರಹಗಳು ದುರ್ದೈವವಶಾತ್‌ ಹಲವು ಸಲ ನಿರಂತರ ವೈಕಲ್ಯಕ್ಕೆ ಕಾರಣರಾಗುತ್ತಾರೆ. 

ಆದರೆ ದುರ್ಗಾ ಗಣಪತಿ ದತ್ತಾತ್ರೇಯ ಮಾರುತಿ ಅಥವಾ ರಾಮರûಾ (ಸ್ತೋತ್ರ ಆರಾಧನೆ ಶಕ್ತಿ ಪೂಜಾ ಕೈಂಕರ್ಯ) ಪರಿಕ್ರಮಗಳು ಒಂದು ವಿಧವಾದ ಪವಾಡಳನ್ನು ನಿರ್ಮಿಸುವ ಸಂಜೀವಿನಿಯಾಗಿದೆ. ಆಧುನಿಕ ಚಿಕಿತ್ಸೆಗಳು ಆರೋಗ್ಯ ಸಂವರ್ಧನ ವಿಧಾನಗಳು ಸೋತಲ್ಲಿ ಈ ಆಷೇìಯ ಶಕ್ತಿಗಳು ಪ್ರಯೋಜನಕ್ಕೆ ಒದಗಿ ಬರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next