ಮಂಗಳೂರು/ಉಡುಪಿ: ಕರಾವಳಿ ಯಾದ್ಯಂತ ಮುಸ್ಲಿಮರು ಬಕ್ರೀದ್ ಹಬ್ಬವನ್ನು ಶುಕ್ರ ವಾರ ಸಂಭ್ರಮ, ಸಡಗರದಿಂದ ಆಚರಿಸಿದರು.
ನಗರದ ಬಾವುಗುಡ್ಡೆಯ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತಾ ಪ್ರವಚನ ನಡೆಯಿತು.
ಈದುಲ್ ಅಝಾ ಅಥವಾ ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿ ದಾನದ ಸಂಕೇತವಾಗಿದೆ. ಹಬ್ಬವು ದೇವನ ಅನುಸರಣೆ ಮೂಲಕ ಸಮಾನತೆಯ ಸಂದೇಶ ವನ್ನು ನೀಡುತ್ತದೆ. ನಾಡಿನಲ್ಲಿ ಶಾಂತಿ, ಸಾಮರಸ್ಯ ಸ್ಥಾಪನೆಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧ ರಾಗಿರಬೇಕು. ಸಹನೆಯೇ ನಮ್ಮ ಮೂಲ ಆಶಯ ವಾಗಬೇಕು ಎಂದು ಖಾಝಿಯವರು ಹೇಳಿದರು.
ಕೇಂದ್ರ ಜುಮ್ಮಾ ಮಸ್ಜಿದ್ ಝೀನತ್ ಭಕ್ ಆಡಳಿತ ಸಮಿತಿ ಅಧ್ಯಕ್ಷ ಯೇನಪೊಯ ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿ, ತ್ಯಾಗ ಬಲಿದಾನ ಮತ್ತು ವಾಗ್ಧಾನಕ್ಕೆ ಅಚಲ ರಾಗಿ ನಿಲ್ಲುವುದು ಈದ್ ಹಬ್ಬದ ಆಶಯ. ಹಬ್ಬವು ನಮ್ಮಲ್ಲಿ ಶಾಂತಿ, ಸಮಾಧಾನ ಮತ್ತು ಸಾಮರಸ್ಯ ವನ್ನುಂಟು ಮಾಡಲಿ ಎಂದು ಹಾರೈಸಿದರು.
ಶಾಸಕ ಜೆ.ಆರ್. ಲೋಬೊ ಶುಭ ಕೋರಿ ದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್, ಝೀನತ್ ಭಕ್ ಮಸೀದಿ ಖತೀಬ್ ಸ್ವದಖತುಲ್ಲಾಹ್ ಫೈಝಿ, ಶಾಹ ಅಮೀರ್ ಮಸ್ಜಿದ್ನ ಇಮಾಮ್ ರಿಯಾಝುಲ್ ಹಖ್, ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಸಮಿತಿ ಉಪಾಧ್ಯಕ್ಷ ಕೆ. ಅಶ್ರಫ್, ಖಜಾಂಚಿ ಸೈಯದ್ ಭಾಷಾ ತಂಗಳ್, ಸದಸ್ಯರಾದ ಎಸ್. ಎಂ. ರಶೀದ್, ಅಶ್ರಫ್, ಸಮದ್, ಅಬ್ದುಲ್ಲಾ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ನಗರದ ಸೇರಿದಂತೆ ಕರಾ ವಳಿಯ ಬಹುತೇಕ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆ, ಪ್ರವಚನ ನಡೆಯಿತು. ಈದ್ ಸಂದೇಶ ನೀಡಲಾಯಿತು. ನಮಾಝಿನ ಬಳಿಕ ಎಲ್ಲರೂ ಹಸ್ತಲಾಘವ, ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಗಳಲ್ಲೂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.