Advertisement

“ಭಜರಂಗಿ 2′ಪೋಸ್ಟರ್‌ ಬಿಡುಗಡೆ

09:17 AM Jan 16, 2020 | Lakshmi GovindaRaj |

ಶಿವರಾಜಕುಮಾರ್‌ ಅಭಿನಯದ “ಭಜರಂಗಿ’ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಅದಾದ ಬಳಿಕ “ಭಜರಂಗಿ 2′ ಚಿತ್ರ ಅನೌನ್ಸ್‌ ಆಗಿದ್ದೂ ಗೊತ್ತು. ಈಗಾಗಲೇ “ಭಜರಂಗಿ 2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಚಿತ್ರತಂಡ ಸಂಕ್ರಾಂತಿ ಮುನ್ನ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದೆ. ಹೌದು, ಎ.ಹರ್ಷ ನಿರ್ದೇಶನದ ಈ ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಪೋಸ್ಟರ್‌ ಮಂಗಳವಾರ ರಿಲೀಸ್‌ ಆಗಿದ್ದು, ಚಿತ್ರ ಪ್ರೇಮಿಗಳಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

Advertisement

ಶಿವರಾಜಕುಮಾರ್‌ ಅಭಿಮಾನಿಗಳಲ್ಲಂತೂ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. “ಭಜರಂಗಿ’ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಪಡೆದಿತ್ತು. ಅದೇ ಯಶಸ್ಸಿನ ಬಳಿಕ ನಿರ್ದೇಶಕ ಹರ್ಷ ಅವರು “ಭಜರಂಗಿ 2′ ಮಾಡುತ್ತಿದ್ದಾರೆ. ಮಂಗಳವಾರ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಶಿವರಾಜಕುಮಾರ್‌ ಅವರ ಕಣ್ಣುಗಳಷ್ಟೇ ಹೈಲೈಟ್‌ ಆಗಿವೆ. ಕಣ್ಣಲ್ಲಿ ಆಕ್ರೋಶ ತುಂಬಿರುವ ಫೀಲ್‌ ಕಾಣುತ್ತಿದೆ. ಪೋಸ್ಟರ್‌ ನೋಡಿದವರಿಗೆ ಇಲ್ಲೂ ಹೊಸದೊಂದು ಕಥೆ ಬಿಚ್ಚಿಕೊಳ್ಳುವ ನಿರೀಕ್ಷೆ ಹೆಚ್ಚಿದೆ.

ಅದೇನೆ ಇರಲಿ, “ಭಜರಂಗಿ’ ಮೂಲಕ ಶಿವರಾಜಕುಮಾರ್‌ ಹೊಸ ವಿಷಯ ಹೇಳಿದ್ದರು. ಈ ಬಾರಿ “ಭಜರಂಗಿ 2′ ಮೂಲಕವೂ ಹೊಸತನ ಕಟ್ಟಿಕೊಡುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಲ್ಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದೆ. ಸ್ವಾಮಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ದೀಪು ಎಸ್‌.ಕುಮಾರ್‌ ಸಂಕಲನ ಮಾಡಿದರೆ, ರವಿ ಸಂತೆಹೈಕ್ಲು ಕಲಾನಿರ್ದೇಶನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next