Advertisement

Hubli; ಮುಸ್ಲಿಂ ಮತ ಗಳಿಕೆಗೆ ಬಜರಂಗದಳ ನಿಷೇಧ ಹೇಳಿಕೆ; ಬಸನಗೌಡ ಪಾಟೀಲ ಯತ್ನಾಳ

10:18 AM May 03, 2023 | Team Udayavani |

ಹುಬ್ಬಳ್ಳಿ: ಅಧಿಕಾರಕ್ಕೆ ಬರದೇ ಇರುವವರು ಬಜರಂಗದಳ ನಿಷೇಧ ಮಾಡಲು ಹೇಗೆ ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ಚುನಾವಣೆ ಬಂದಾಗ ಕಾಂಗ್ರೆಸ್‌ನವರು ಆರೆಸ್ಸೆಸ್‌, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಾರೆ.

Advertisement

ಕೇವಲ ಮುಸ್ಲಿಮರ ಮತಕ್ಕಾಗಿ ಈ ರೀತಿ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ. ಅವರು ಯಾವತ್ತೂ ಹಿಂದೂಗಳ ಪರವಾಗಿಲ್ಲ ಹಾಗೂ ಅವರಿನ್ನು ಅಧಿಕಾರದ ಆಸೆ ಸಹ ಬಿಡಬೇಕು. ಕಾಂಗ್ರೆಸ್‌ ಭಾರತದಲ್ಲಿರುವ ಪಾಕಿಸ್ತಾನದ ಮುಸ್ಲಿಂ ಲೀಗ್‌ ಇದ್ದಂತೆ. ಅವರು ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.

ಹೀಗಾಗಿ ಬಜರಂಗದಳವನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದರು. ಮುಸ್ಲಿಮರು ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ಪಡೆಯುತ್ತಿದ್ದರು. ಅದನ್ನು ನಮ್ಮ ಸರ್ಕಾರ ರದ್ದು ಮಾಡಿದೆ. ಅವರಿಗೆ ಮತ್ತೆ ಮೀಸಲಾತಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.
ಹಿಂದೂ ವಿರೋಧಿ ನೀತಿಯಿಂದಾಗಿ ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವಾಗಲು ಸಾಧ್ಯವಾಗಿಲ್ಲ. ಎಲ್ಲ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ ಸೋಲುತ್ತಿದೆ. ಕಾಂಗ್ರೆಸ್‌ನವರ ಪ್ರಣಾಳಿಕೆಯನ್ನು ಎಂದಿಗೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿಯೇ ಈ ರೀತಿ ಗ್ಯಾರಂಟಿಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ.

ರಾಜ್ಯದ ಜನ ಇವುಗಳನ್ನು ಒಪ್ಪುವುದಿಲ್ಲ. ಅವರ ವಾರೆಂಟಿಯೇ ಮುಗಿದು ಹೋಗಿದೆ. ಉದ್ಯೋಗ ಸೃಷ್ಟಿಸುವ ಯಾವ ಘೋಷಣೆಗಳನ್ನೂ ಅವರು ಮಾಡಿಲ್ಲ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಇವೆಲ್ಲ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡುವ ಯೋಜನೆಗಳು. ಜನರಿಗೆ ಒಳ್ಳೆಯದಾಗುವುದಿಲ್ಲ ಎಂದರು.

ಯಾವುದು ಪುಲ್ಲಿಂಗ, ಯಾವುದು ಸ್ತ್ರೀಲಿಂಗ?
ಕಾಂಗ್ರೆಸ್‌ನಲ್ಲಿ ಎರಡು ಪ್ರಿಯಾಂಕಗಳಿವೆ. ಇವುಗಳಲ್ಲಿ ಯಾವುದು ಪುಲ್ಲಿಂಗ, ಯಾವುದೂ ಸ್ತ್ರೀಲಿಂಗ ಎಂಬುದು ಗೊತ್ತಿಲ್ಲ.
ಒಂದು ಪ್ರಿಯಾಂಕ ಡೂಪ್ಲಿಕೇಟ್‌ ಗಾಂಧಿ. ಇವರು ಮೋದಿ ಬಗ್ಗೆ ಹಗುರವಾಗಿ  ಮಾತನಾಡುತ್ತಾರೆ. ಇನ್ನೊಂದು ಪ್ರಿಯಾಂಕ
ನಾಲಾಯಕ್‌ ಎನ್ನುವ ಶಬ್ದ ಬಳಕೆ ಮಾಡುತ್ತಾರೆ. ಅವರಪ್ಪ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಎಂದಿದ್ದರು. ಇವರಿಗೆ
ಪ್ರಧಾನಿ ಬೈಯದಿದ್ದರೆ ಆಗುವುದಿಲ್ಲ. ಇಂತಹವರೇ ನಮ್ಮ ಪಕ್ಷದ ಸೀಟು ಹೆಚ್ಚಿಸುತ್ತಾರೆ. ಪ್ರಿಯಾಂಕ ಹಾಗೂ ರಾಹುಲ್‌ ಇವರಿಬ್ಬರಿಂದ ನಾವು 150 ಸೀಟುಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಯತ್ನಾಳ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next