ಬಜಪೆ ,ಅ.28: ಬಜಪೆ ಪೇಟೆಯ ಕಾಮಾಕ್ಷಿ ಟ್ರೇಡರ್ ಹೆಸರಿನ ದಿನಸಿ ಅಂಗಡಿಗೆ ಅ.23ರಂದು ರಾತ್ರಿ ನುಗ್ಗಿ ಕಳವು ಮಾಡಿದ್ದ
ಮೂರು ಮಂದಿ ಕಳ್ಳರನ್ನು ಬಜಪೆ ಪೊಲೀಸರು ಬಂಧಿಸಿ,ಆವರಿಂದ ಎರಡು ಸ್ಕೂಟರ್,ಒಂದು ಲ್ಯಾಪ್‌ಲಾಪ್ ಹಾಗೂ ದಿನಸಿ ಸಾಮಗ್ರಿ ಸಹಿತ ಸುಮಾರು 1,80,000 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಫಜೀಲ್ ಯಾನೆ ಫಾಜು (20),ಹಕೀಂ (21) ಶಫೀಕ್ (22) ಬಂಧಿತರು. ಕಳ್ಳರು ಅ.23ರಂದು ಅಂಗಡಿಯ ಹಿಂಬದಿಯ ಹೆಂಚು ತೆಗೆದು ಒಳನುಗ್ಗಿದ್ದರು. ಅಂಗಡಿಯಲ್ಲಿದ್ದ ಒಂದು ಲ್ಯಾಪ್‌ಟಾಪ್, ಸಿಗರೇಟ್ ಬಂಡಲ್‌ಗಳು,ಸಾಬೂನು, ಚಾ ಹುಡಿ, ಕರಿಮೆಣಸು,ಗೋಡಂಬಿ ಪ್ಯಾಕೆಟ್‌ಗಳನ್ನು ಕಳವು ಮಾಡಿದ್ದರು.ಈ ಬಗ್ಗೆ ಅಂಗಡಿ ಮಾಲಕರು ಬಜಪೆ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಬಜಪೆ ಪೊಲೀಸ್‌ರು ಕಾರ್ಯಾಚರಣೆ ಆರಂಭಿಸಿದ್ದರು.ಸುಮಾರು 6ಮಂದಿಯ ತಂಡ ಈ ಕಳವು ಮಾಡಿದ ಬಗ್ಗೆ ಸಿಸಿ ಕೆಮರಾದಲ್ಲಿ ದೃಶ್ಯಗಳು ಕಂಡು ಬಂದಿತ್ತು. ಬಜಪೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಶುಕ್ರವಾರ ಮಧ್ಯಾಹ್ನ ಫಜೀಲ್ ಯಾನೆ ಫಾಜು ಮತ್ತು ಹಕೀಂನನ್ನು ಪೊರ್ಕೋಡಿಯಲ್ಲಿ ಹಾಗೂ ಶಫಿಕ್ ನನ್ನು ಜೋಕಟ್ಟೆಯಲ್ಲಿ ಬಂಧಿಸಿದರು.
ಅವರಿಂದ ಲ್ಯಾಪ್‌ಟಾಪ್, ಗೋಡಂಬಿ, ಕರಿಮೆಣಸು,ದಿನಸಿ ಸಾಮಾನಿನ ಪ್ಯಾಕೆಟ್‌ಗಳು, ಸಿಗರೇಟ್ ಬಂಡಲ್‌ಗಳು,ಗುಟ್ಕಾ ಪ್ಯಾಕೆಟ್‌ಗಳು ಕೃತ್ಯಕ್ಕೆ ಉಪಯೋಗಿಸಿದ ಎರಡು ಸ್ಕೂಟರ್ ಗಳನ್ನು ವಶಪಡಿಸಿದ್ದಾರೆ.ದಿನಸಿ ಸಾಮಗ್ರಿಗಳನ್ನು ಪೊರ್ಕೋಡಿ ಶಾಲೆಯ ಹತ್ತಿರದ ಕಾಡಿನಲ್ಲಿ ಅಡಗಿಸಿಟ್ಟಿದ್ದರು. ಇನ್ನೂ ಹಲವರ ಬಂಧನ ಬಾಕಿ ಇದೆ. ಅವರಲ್ಲಿ ಒಬ್ಬ ಸೇಲ್ಸ್‌ಮನ್ ಅಗಿದ್ದಾನೆ.
ಅವನ ಬಂಧನ ಬಾಕಿ ಇದೆ.ಅವನು ಪ್ರಮುಖ ಆರೋಪಿ.ಇವರು ಕದ್ದ ಕಳವು ಮಾಲ್‌ನ್ನು ಅವನು ಅಂಗಡಿಗೆ ಮಾರಾಟ ಮಾಡಲು ಸಹಕರಿಸುತ್ತಿದ್ದನು.ಅವರೆಲ್ಲ ಮೋಜು ಮಸ್ತಿಗೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪುಂಡರ ಗುಂಪು ಪೆರ್ಮುದೆ ,ಪೊರ್ಕೋಡಿಯಲ್ಲಿ ಇದೇ ರೀತಿ ಕಳವಿಗೆ ಪ್ರಯತ್ನ ಮಾಡಿತ್ತು. ಬಜಪೆ ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬಜಪೆ ಇನ್ ಸ್ಪೆಕ್ಟರ್ ಟಿ.ಡಿ. ನಾಗರಾಜ್ ಎಸ್‌ಐ ರಾಜಾರಾಮ, ಎಎಸ್‌ಐ ರಾಮಚಂದ್ರ, ಎಚ್‌ಸಿ ಚಂದ್ರ ಮೋಹನ್, ಪಿಸಿಗಳಾದ ಶಶಿಧರ್, ಭರತ್, ಕಿರಣ್, ಪ್ರೇಮ್ ಕುಮಾರ್‌ಅವರು ಭಾಗವಹಿಸಿದ್ದರು.